2026 ರ ವಿಧಾನಸಭಾ ಚುನಾವಣೆಗೆ ಸಜ್ಜಾದ ದಳಪತಿ ವಿಜಯ್: ತಮಿಳುನಾಡಿನಾದ್ಯಂತ ಭರ್ಜರಿ ಪ್ರಚಾರ!| Campaign

untitled-design-2025-09-13t120946808-68c511c34ebdc (1)
Published on

Campaign: ತಮಿಳು ನಟ-ರಾಜಕಾರಣಿ ವಿಜಯ್ ಇಂದು (ಸೆಪ್ಟೆಂಬರ್​ 13) ಟಿವಿಕೆ ಪಕ್ಷದ ಮೊದಲ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಇದು 2026 ರ ವಿಧಾನಸಭಾ ಚುನಾವಣೆಯ ಪೂರ್ವಾಭ್ಯಾಸದ ನಿರ್ಣಾಯಕ ಹಂತವನ್ನು ಗುರುತಿಸಿತು. ಮೊದಲು ಅರಿಯಲೂರಿನಲ್ಲಿ ಈ ಪ್ರಚಾರವು ಪ್ರಾರಂಭವಾಗಿದ್ದು, ತಿರುಚನಾಪಳ್ಳಿಯಲ್ಲಿ ವಿಜಯ್​ ಬೆಂಗಲಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಚಾರದಲ್ಲಾಗುವ ಅನಧೀಕೃತ ಪ್ರವೇಶವನ್ನು ತಡೆಗಟ್ಟಲು ನಟ ವಿಶೇಷವಾಗಿ ವಿನ್ಯಾಸ ಮಾಡಿದ ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾರೆ. ಇದರಲ್ಲಿ ಕ್ಯಾಮರಾಗಳು, ಧ್ವನಿವರ್ಧಕಗಳು, ಕಬ್ಬಿಣದ ರೇಲಿಂಗ್‌ಗಳನ್ನು ಅಳವಡಿಸಲಾಗಿದೆ.

ಪಕ್ಷವು ತನ್ನ ಲೋಗೋವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ "ನಿಮ್ಮ ವಿಜಯ್​ ಸೋಲುವುದಿಲ್ಲ". ಹಾಗೂ "ತಮಿಳುನಾಡು ವಿಜಯ್​ ಅವರ ಪರಂಪರೆಯ ಮರಳುವಿಕೆ" ಎಂದು ಮುಂತಾದ ಪೋಸ್ಟ್​​ಗಳನ್ನು ಹಿಂಬಾಲಿಕರು ಹಿಡಿದುಕೊಂಡು ಪ್ರಚಾರ ಪ್ರಾರಂಭಿಸಿದ್ದಾರೆ. ಇದು ಜನರನ್ನು ಸೆಳೆಯುವಂತಹ ನಾಯಕತ್ವದ ಗುಣಗಳನ್ನು ಎತ್ತಿ ತೋರಿಸುತ್ತಿದೆ.

ಚುನಾವಣಾ ಪ್ರಚಾರಕ್ಕೆ ಕಟ್ಟುನಿಟ್ಟಿನ ಷರತ್ತುಗಳ ಅಡಿಯಲ್ಲಿ ಪೊಲೀಸರು ಅನುಮತಿ ನೀಡಿದ್ದಾರೆ. ರೋಡ್ ಶೋಗಳು, ಸ್ವಾಗತಗಳು ಮತ್ತು ವಾಹನ ಬೆಂಗಾವಲುಗಳ ಮೇಲಿನ ನಿರ್ಬಂಧಗಳು ಸೇರಿದಂತೆ 25 ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ವಿಜಯ್​ ಅವರ ಬಸ್​ನ್ನು 5 ವಾಹನಕ್ಕಿಂತ ಹೆಚ್ಚು ವಾಹನಗಳು ಹಿಂಬಾಲಿಸುವಂತಿಲ್ಲ.

ಸಾರ್ವಜನಿಕರ ಸುರಕ್ಷತೆ ಕಾಪಾಡಲು ಸ್ವತಃ ಪಕ್ಷವೇ ಬ್ಯಾರಿಕೇಡ್​ ಅಳವಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದೆ. ಪ್ರಚಾರದ ವೇಳೆ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಈ ಕ್ಷಣದಲ್ಲಿಯೇ ರ್ಯಾಲಿಯನ್ನು ನಿಲ್ಲಿಸಲಾಗುವುದು ಎಂದು ಪೊಲೀಸ್​ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ರಾಜಕೀಯ ವೀಕ್ಷಕರು ತಿರುಚಿಯನ್ನು ಸಾಂಕೇತಿಕವಾಗಿ ಪ್ರಧಾನ ಸ್ಥಳವಾಗಿ ನೋಡುತ್ತಾರೆ. ಈ ನಗರವು ರಾಜಕೀಯದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ವೇದಿಕೆಯಾಗಿದೆ. ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರು ಎಐಎಡಿಎಂಕೆಯ ಎರಡನೇ ರಾಜ್ಯ ಸಮ್ಮೇಳನವನ್ನು ತಿರುಚಿಯಲ್ಲಿ ನಡೆಸಿದರು. ಈ ವೇಳೆ ಅವರು ಪೌಷ್ಟಿಕ ಆಹಾರ ಯೋಜನೆಯನ್ನು ಪ್ರಾರಂಭಿಸಿದರು. ಹಾಗೆಯೇ ತಿರುಚಿಯನ್ನು ತಮಿಳುನಾಡಿನ ಎರಡನೇ ರಾಜಧಾನಿಯಾಗಿ ಘೋಷಿಸಿದರು.

ವಿಜಯ್ ಈ ಕ್ಷೇತ್ರಕ್ಕೆ ಕಾಲಿಡುವುದರೊಂದಿಗೆ, ತಿರುಚಿ ಉಡಾವಣೆಯು ತಮಿಳುನಾಡು ರಾಜಕೀಯಕ್ಕೆ ಒಂದು ಮಹತ್ವದ ತಿರುವು ಆಗಬಹುದು ಎಂಬ ನಿರೀಕ್ಷೆ ಇದೆ. ಇದು 2026 ರ ಚುನಾವಣೆಗೂ ಮುನ್ನ ಪ್ರಚಾರ ನಡೆಸುತ್ತಿರುವುದು ರಾಜಕೀಯ ಲಾಭಗಳಿಗೆ ಪರಿವರ್ತನೆಯಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net