

ಚೆನ್ನೈ: ದಲಿತ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರ ತಿಮಯಾತ್ರೆಗೆ ಮೇಲ್ಜಾತಿಯ ಮುಖಂಡರು ದಾರಿ ಬಿಡದೆ ಅಡ್ಡಿಪಡಿಸಿದ ಘಟನೆ ತಮಿಳುನಾಡಿದ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.
ಶೂಲಗಿರಿಯ ಕೀಳತೇರು ನಿವಾಸಿ ಅರುಣ್ತತಿಯಾರ್(SC) ಸಮುದಾಯಕ್ಕೆ ಸೇರಿದ್ದ ಲಕ್ಷಮ್ಮ(65) ಎಂಬುವವರು ಮೃತಪಟ್ಟಿದ್ದರು. ಕುಟುಂಬಸ್ಥರು ಅವರ ಅಂತ್ಯಸಂಸ್ಕಾರವನ್ನು ಪೂರ್ವಜರ ಊರಾದ ಕೃಷ್ಣಂಪಾಳ್ಯದಲ್ಲಿ ನಡೆಸಲು ನಿರ್ಧರಿಸುತ್ತಾರೆ.
ಲಕ್ಷಮ್ಮನವರ ಅಂತಿಯಾತ್ರೆಯೂ ಕೃಷ್ಣಂಪಾಳ್ಯದಲ್ಲಿ ಬರುತ್ತಿದ್ದ ವೇಳೆ ವಾರ್ಗ ಮಧ್ಯೆ ವನ್ನಿಯಾರ್ ಸಮುದಾಯದ ಮುಖಂಡರು ಮೆರವಣಿಗೆಯನ್ನು ತಡೆದಿದ್ದಾರೆ. ಈ ಕುರಿತು ಲಕ್ಷಮ್ಮ ಕುಟುಂಬಸ್ಥರು ಪ್ರಶ್ನಿಸಿದಾಗ ಸ್ಮಶಾನಕ್ಕೆ ಹೋಗುವ ಮಾರ್ಗ ಮಧ್ಯೆ ಕೃಷಿ ಭೂಮಿ ಇದ್ದು, ಹಾಗೆ ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದರಿಂದ ಕುಪಿತಗೊಂಡ ಲಕ್ಷಮ್ಮ ಕುಟುಂಬಸ್ಥರು ಹೊಸೂರು ಕೃಷ್ಣಗಿರಿ ಹೆದ್ದಾರಿಯ ಬೇರಿಗೈ-ಶೂಲಗಿರಿ ರಸ್ತೆ ನಡುವೆ ಮೃತದೇಹವನ್ನಿಟ್ಟು ಪ್ರತಿಭಟಿಸಲು ಶುರು ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ತಹಶೀಲ್ದಾರ್ ಪನ್ನೀರ್ಸೆಲ್ವಿ ಉಭಯ ಸಮುದಾಯದ ಮುಖಂಡರ ಜೊತೆ ಶಾಂತಿ ಸಭೆ ನಡೆಸಿದ್ದರು.
ಇದನ್ನೂ ಓದಿ: VIDEO| ಹಾಡಹಗಲೇ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ
ತಹಶೀಲ್ದಾರ್ ಮಾತುಕತೆ ನಡೆಸಿದರ ಹೊರತ್ತಾಗಿಯೂ ದಾರಿ ಮಾಡಿ ಕೊಡಲು ವನ್ನಿಯಾರ್ ಸಮುದಾಯದ ಮುಖಂಡರು ನಿರಾಕರಿಸುತ್ತಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನವೇ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸರೋಜ್ ಕುಮಾರ್ ಠಾಕೂರ್ ಉಭಯ ಸಮುದಾಯದವರ ಜೊತೆ ಮಾತುಕತೆ ನಡೆಸಿದ ನಂತರ ಪೊಲೀಸರ ಸಮ್ಮುಖದಲ್ಲಿ ಲಕ್ಷಮ್ಮನವರ ಅಂತ್ಯೆಕ್ರಿಯೆ ನಡೆಯಿತ್ತು.
ಈ ಕುರಿತು ಮಾತನಾಡಿದ ಲಕ್ಷಣನ್ ಎಂಬುವವರು ಪೊಲೀಸರು ಸಮ್ಮುಖದಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರ ನಡೆಸುತ್ತಿರುವುದು ಇದೇ ಮೊದಲಲ್ಲ. ಕಳೆದ ಬಾರಿಯೂ ಈಗೆ ಆಗಿದ್ದು, ಇದು ಪುನರಾವರ್ತನೆಯಾಗುತ್ತಿದೆ. ಅಂತ್ಯಸಂಸ್ಕಾರ ನಡೆಸುವುದಕ್ಕು ಇಷ್ಟು ಅಡಚಣೆ ಮಾಡುತ್ತಿರುವುದು ಸರಿಯಾದ ನಡೆಯಲ್ಲ ಎಂದು ಕಿಡಿಕಾರಿದ್ದಾರೆ.