ದಲಿತ ಯುವಕನ ಮದುವೆ ಮೆರವಣಿಗೆಯಲ್ಲಿ ಭಾರಿ ಪೊಲೀಸ್​ ಭದ್ರತೆ ನಿಯೋಜಿಸಿದ್ದೇಕೆ ಗೊತ್ತಾ?

Dalit Groom
Published on

ಜೈಪುರ: ರಾಜಸ್ಥಾನದ ಬಂಡಿ ಜಿಲ್ಲೆಯಲ್ಲಿ ಸೋಮವಾರ ಭಾರಿ ಪೊಲೀಸ್​ ಬಿಗಿ ಭದ್ರತೆಯೊಂದಿಗೆ ದಲಿತ ಯುವಕನೊಬ್ಬನ ಮದುವೆ ಮೆರವಣಿಗೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮದುವೆ ಮೆರವಣಿಗೆಗೆ ಮೇಲ್ಜಾತಿಯವರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಬಹುದೆಂಬ ಭಯದಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸ್​ ಭದ್ರತೆಯಲ್ಲಿ ಮೆರವಣಿಗೆ ನಡೆದಿದೆ.

ಸರ್ಕಾರಿ ಶಾಲೆಯ ಶಿಕ್ಷಕನಾಗಿರುವ ಪರಶುರಾಮ್​ ಮೇಘ್ವಾಲ್​(25) ಮಂಗಳವಾರ ಬರಾನಾ ಜಿಲ್ಲೆಯ ಅಂತಾ ವಲಯದಲ್ಲಿ ಮದವೆ ಮಾಡಿಕೊಂಡರು. ಇದಕ್ಕೂ ಮುನ್ನ ಸೋಮವಾರ ಮದುವೆ ಮೆರವಣಿಗೆ ನಡೆಸಲಾಯಿತು.

ಈ ಬಗ್ಗೆ ಮಾತನಾಡಿರುವ ಬಂಡಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್​ ರಾಜೇಶ್​ ಜೋಶಿ, ಗ್ರಾಮದ ಮೇಲ್ಜಾತಿಯವರ ಪ್ರತಿಭಟಿಸಬಹುದೆಂಬ ಭಯದಿಂದ ವರ ಪರ್ಶುರಾಮ್​ ಭದ್ರತೆ ಕೋರಿ ಜಿಲ್ಲಾಧಿಕಾರಿ ಮತ್ತು ಬಂಡಿ ಪೊಲೀಸ್​ ವರಿಷ್ಠಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಮದುವೆ ಮೆರವಣಿಗೆಗ ಪೊಲೀಸ್​ ಭದ್ರತೆ ಒದಗಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಮೆರವಣಿಗೆ ವೇಳೆ ಆಡಳಿತಾಧಿಕಾರಿಗಳೊಂದಿಗೆ ತಹಸೀಲ್ದಾರ್​ ಮತ್ತು ಬಂಡಿ ಜಿಲ್ಲೆಯ ಪಟ್ವಾರಿ ಪೊಲೀಸ್​ ಆಡಳಿತದ 80 ಪೊಲೀಸ್ ಸಿಬ್ಬಂದಿ ಭದ್ರತೆ ನೀಡಿದ್ದರು.​ ಭಾರಿ ಭದ್ರತೆಯ ನಡುವೆ ಕುದುರೆ ಏರಿ ಮೆರವಣಿಗೆ ಹೊರಟ ವರ ಪರ್ಶುರಾಮ್​ ಮದುವೆ ಕಾರ್ಯ ಯಾವುದೇ ಅಡ್ಡಿ, ಆತಂಕವಿಲ್ಲದೇ ಸುಸೂತ್ರವಾಗಿ ನೆರವೇರಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net