ನಿತ್ಯ ಭವಿಷ್ಯ: ಈ ರಾಶಿಯವರು ಧನಲಾಭದ ಕುರಿತಾದ ವಿಚಾರದಲ್ಲಿ ಮಕ್ಕಳೊಂದಿಗೆ ಕೂಡ ನಿಮ್ಮ ಯೋಜನೆಗಳನ್ನು ಚರ್ಚಿಸಿ

Nitya-Bhavishya-vvani-1
Published on

ಮೇಷ: ಹತ್ತಿರದ ಜನರ ಜತೆಗೇ ಭಿನ್ನಾಭಿಪ್ರಾಯಗಳು ಉಂಟಾದಾಗಲೂ ನಿಮ್ಮ ಮಾತು ಮಾತ್ರ ತಾರಕಕ್ಕೆ ಏರದಿರಲಿ. ಶುಭಸಂಖ್ಯೆ: 3

ವೃಷಭ: ಮನೆಯಲ್ಲಿ ವಿನಾಕಾರಣವಾದ ಚರ್ಚೆ, ಕೂಗಾಟ ಬೇಡವೇ ಬೇಡ. ದಾಂಪತ್ಯದ ಚೌಕಟ್ಟು ಗಟ್ಟಿ ಇರಲಿ. ಶುಭಸಂಖ್ಯೆ: 7

ಮಿಥುನ: ನಿಮ್ಮ ಖರ್ಚಿನ ಯಾದಿಯನ್ನು ನಿಯಂತ್ರಿಸಬಹುದಾದರೆ ಕೈಗೊಂಡ ಪ್ರಯತ್ನಕ್ಕೆ ಯಶಸ್ಸು ಸಿಗಲಿದೆ. ಶುಭಸಂಖ್ಯೆ: 2

ಕಟಕ: ವ್ಯವಧಾನವನ್ನು ಕಳೆದುಕೊಂಡು ಮಾತನಾಡಿದರೆ ನಿಮ್ಮ ಬಿಕ್ಕಟ್ಟುಗಳು ಇನ್ನಷ್ಟು ತೀವ್ರವೇ ಆಗಬಹುದು. ಶುಭಸಂಖ್ಯೆ: 9

ಸಿಂಹ: ಧನಲಾಭದ ಕುರಿತಾದ ವಿಚಾರದಲ್ಲಿ ಮಕ್ಕಳೊಂದಿಗೆ ಕೂಡ ನಿಮ್ಮ ಯೋಜನೆಗಳನ್ನು ಚರ್ಚಿಸಿ. ಸಿದ್ಧಿ ಸಿಗಲಿದೆ. ಶುಭಸಂಖ್ಯೆ: 5

ಕನ್ಯಾ: ಧೈರ್ಯವೇ ಕೈಕೊಡುತ್ತಿದೆ. ಎಚ್ಚರದಿಂದ ಹೆಜ್ಜೆ ಇಡಿ. ಜತೆಗೆ ಧೈರ್ಯದ ಹೆಜ್ಜೆಗಳನ್ನು ಕೂಡ ಇಟ್ಟರೆ ಉತ್ತಮ. ಶುಭಸಂಖ್ಯೆ: 3

ತುಲಾ: ವ್ಯತ್ಯಾಸವನ್ನು ಗಮನಿಸಿಕೊಂಡು ಎಚ್ಚರ ವಹಿಸಿ. ಆರೋಗ್ಯದ ಕುರಿತಾಗಿ ಖಂಡಿತ ಅಲಕ್ಷ್ಯ ಬೇಡ. ಶುಭಸಂಖ್ಯೆ: 8

ವೃಶ್ಚಿಕ: ಕೋಪ ಎಬ್ಬಿಸಿ ತಪ್ಪು ಮಾಡಿಸುವ ಮೂಲಕ ನಿಮಗೆ ತೊಂದರೆ ಕೊಡಲು ಕೆಲವರಿಂದ ಪ್ರಯತ್ನ ಸಾಧ್ಯ. ಶುಭಸಂಖ್ಯೆ: 6 

ಧನಸ್ಸು: ಪ್ರಯತ್ನಪಡುತ್ತಲೇ ಇದ್ದೀರಿ. ಗಳಿಕೆಯ ಅನುಪಾತ, ಆರ್ಥಿಕ ಬಲದ ವೃದ್ಧಿಗೆ ಶಿವನನ್ನು ಆರಾಧಿಸಿ. ಶುಭಸಂಖ್ಯೆ: 1

ಮಕರ: ಕೇವಲ ದುಡಿಯುತ್ತಲೇ ಇರುವುದಾದರೆ ಜೀವನಕ್ಕೆ ಅರ್ಥವೇನು? ಒತ್ತಡವನ್ನು ದೂರ ಮಾಡಿ. ಸುಖವಿದೆ. ಶುಭಸಂಖ್ಯೆ: 4

ಕುಂಭ: ಆನಂದದಾಯಕವಾದ ವಾರ್ತೆಯನ್ನು ಕೇಳಲು ಶ್ರದ್ಧಾ-ಭಕ್ತಿಗಳಿಂದ ಮಹಾವಿಷ್ಣುವನ್ನು ಸ್ತೋತ್ರ ಪಠಣ ಮಾಡಿ. ಶುಭಸಂಖ್ಯೆ: 9

ಮೀನ: ಏನೇ ಕಿರಿಕಿರಿ ಬಂದರೂ ಅದನ್ನು ಎದುರಿಸುವ ಧೈರ್ಯವನ್ನು ತೋರಿಸಲು ನಿಮಗೆ ಜಾಸ್ತಿ ಅವಕಾಶಗಳಿವೆ. ಶುಭಸಂಖ್ಯೆ: 6 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net