ಈ ರಾಶಿಯವರಿಗಿಂದು ಷೇರು ವ್ಯವಹಾರಗಳಲ್ಲಿ ನಷ್ಟ: ನಿತ್ಯಭವಿಷ್ಯ

Nithya Bhavishya
Published on

ಮೇಷ: ನೇರ ನಡವಳಿಕೆಯ ಅಗತ್ಯವಿದೆ. ಆರ್ಥಿಕ ಸಂಕಷ್ಟ ದೂರವಾಗುತ್ತದೆ. ಸ್ಥಗಿತವಾಗಿದ್ದ ವ್ಯವಹಾರಗಳು ಆರಂಭಗೊಳ್ಳುತ್ತವೆ. ಶುಭಸಂಖ್ಯೆ: 5

ವೃಷಭ: ಪಾಲುದಾರಿಕೆ ವ್ಯವಹಾರದಲ್ಲಿ ಬದಲಾವಣೆ. ಸಂಗಾತಿಯ ಆರೋಗ್ಯದತ್ತ ಎಚ್ಚರ ವಹಿಸಿ. ವಿದ್ಯಾರ್ಥಿಗಳಿಗೆ ಸಹಾಯ ಲಭ್ಯ. ಶುಭಸಂಖ್ಯೆ: 9

ಮಿಥುನ: ರೈತರಿಗೆ ಅಧಿಕ ಇಳುವರಿ ಮತ್ತು ಲಾಭ. ಆರ್ಥಿಕ ಉಳಿತಾಯದಲ್ಲಿ ಹಿನ್ನಡೆಯಾಗುವುದು. ಕೋಪ ನಿಯಂತ್ರಣದಲ್ಲಿ ಇರಲಿ. ಶುಭಸಂಖ್ಯೆ: 6

ಕಟಕ: ಮನೆ ಕಟ್ಟುವ ಯೋಜನೆ ಮುಂದೂಡಿ. ಸ್ತ್ರೀಯರಿಗೆ ಧೈರ್ಯ ಹೆಚ್ಚುತ್ತದೆ. ನೆಂಟರಿಷ್ಟರ ಆಗಮನ. ಆದಾಯದಲ್ಲಿ ಹೆಚ್ಚಳ. ಶುಭಸಂಖ್ಯೆ: 2

ಸಿಂಹ: ಬಾಕಿ ಹಣ ಕೈಸೇರುವುದು. ಆರೋಗ್ಯದಲ್ಲಿ ಏರುಪೇರು. ಗೃಹ ಉಪಯೋಗಿ ಸಾಮಗ್ರಿಗಳ ವ್ಯಾಪಾರಸ್ಥರಿಗೆ ಉತ್ತಮ ಆದಾಯ. ಶುಭಸಂಖ್ಯೆ: 8

ಕನ್ಯಾ: ಕಾರ್ಯಸಾಧನೆಗಾಗಿ ವಿದೇಶ ಪ್ರವಾಸ. ಆಪ್ತರಿಂದ ನೈತಿಕ ಸಹಾಯ. ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ. ಚಿಕ್ಕ ಪುಟ್ಟ ವರ್ತಕರಿಗೆ ನಷ್ಟ. ಶುಭಸಂಖ್ಯೆ: 6

ತುಲಾ: ಉದ್ಯೋಗ ಕ್ಷೇತ್ರದಲ್ಲಿ ಸಹವರ್ತಿಗಳಿಂದ ತೊಂದರೆ. ಗಣ್ಯ ವ್ಯಕ್ತಿಗಳ ಭೇಟಿ. ಆಕಸ್ಮಿಕ ಧನ ನಷ್ಟ. ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ: 1

ವೃಶ್ಚಿಕ: ಸ್ನೇಹಿತರೇ ಶತ್ರುಗಳಾಗುತ್ತಾರೆ. ಸ್ತ್ರೀಯರಿಗೆ ಕುಟುಂಬದಲ್ಲಿ ತಾಳ್ಮೆ ಅಗತ್ಯ. ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ತೀರ್ಪು ಬರಲಿದೆ. ಶುಭಸಂಖ್ಯೆ: 5

ಧನಸ್ಸು: ಹಣ ಬಂದರೂ ಉಳಿಯದು. ಬ್ಯೂಟಿ ಪಾರ್ಲರ್ ಅಂಗಡಿಯವರಿಗೆ ಮಾಲೀಕರಿಂದ ಒತ್ತಡ. ರಾಜಕೀಯದಲ್ಲಿ ಅಧಿಕಾರ-ಪ್ರಾಪ್ತಿ. ಶುಭಸಂಖ್ಯೆ: 1

ಮಕರ: ಔತಣಕೂಟಕ್ಕೆ ಅಧಿಕ ಖರ್ಚು. ಆತ್ಮೀಯ ಸ್ನೇಹಿತನ ಆರೋಗ್ಯದಲ್ಲಿ ಏರುಪೇರು. ಕಾನೂನು ವಿದ್ಯಾರ್ಥಿಗಳಲ್ಲಿ ಮುನ್ನಡೆ. ಶುಭಸಂಖ್ಯೆ: 6

ಕುಂಭ: ಕುಟುಂಬದಲ್ಲಿ ಶುಭ ಕಾರ್ಯದ ಸಂಭ್ರಮ. ಹೂಡಿಕೆ ಹಣ ಕೈ ಸೇರುವುದು. ಧಾರ್ವಿುಕ ಸಮಾರಂಭದಿಂದ ಮನಃಶಾಂತಿ. ಶುಭಸಂಖ್ಯೆ: 9

ಮೀನ: ಕಲಾವಿದರ ಪ್ರತಿಭೆಗೆ ಸೂಕ್ತ ಗೌರವ ದೊರೆಯಲಿದೆ. ಷೇರು ವ್ಯವಹಾರಗಳಲ್ಲಿ ನಷ್ಟವಾಗುವ ಸಾಧ್ಯತೆ. ದಾಂಪತ್ಯದಲ್ಲಿ ವಿರಸ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net