ನಿತ್ಯ ಭವಿಷ್ಯ: ಈ ರಾಶಿಯ ವಿವಾಹಾಕಾಂಕ್ಷಿಗಳಿಗೆ ಶುಭ ಸುದ್ದಿ, ನನಸಾಗಲಿದೆ ಕನಸು

Nithya Bhavishya
Published on

ಮೇಷ: ನನೆಗುದಿಗೆ ಬಿದ್ದಿದ್ದ ಕೆಲಸಕ್ಕೆ ಚಾಲನೆ. ಮನೆಯಲ್ಲಿ ಸಡಗರದ ವಾತಾವರಣ. ಸಹೋದ್ಯೋಗಿಗಳಿಂದ ಸಲಹೆ. ಶುಭಸಂಖ್ಯೆ: 2

ವೃಷಭ: ಕೆಲಸದ ಒತ್ತಡದಿಂದ ಪ್ರಮುಖ ವಿಷಯದಲ್ಲಿ ಸೋಲಾಗಬಹುದು. ಗಾಯಕರಿಗೆ ವಿಶೇಷ ವೇದಿಕೆ ಲಭ್ಯವಾಗುವ ಅವಕಾಶ. ಶುಭಸಂಖ್ಯೆ: 7

ಮಿಥುನ: ಬಹಳ ದಿನಗಳ ಕನಸು ನನಸಾಗಲಿದೆ. ವಿವಾಹದ ನಿರೀಕ್ಷೆಯಲ್ಲಿದ್ದವರಿಗೆ ಶುಭ. ತಂದೆಯ ಆರೋಗ್ಯದಲ್ಲಿ ತೊಂದರೆ. ಶುಭಸಂಖ್ಯೆ: 3

ಕಟಕ: ಮನೆಗೆ ಬಂಧುಗಳು ಬರುವ ಸಾಧ್ಯತೆ. ಅಕ್ಕ ತಂಗಿಯರ ಮನೆಗೆ ಭೇಟಿ. ಕೃಷಿ ಕೆಲಸಕ್ಕೆ ಚಾಲನೆ. ದಿನಾಂತ್ಯಕ್ಕೆ ಶುಭ. ಶುಭಸಂಖ್ಯೆ: 8

ಸಿಂಹ: ಆತ್ಮಾಭಿಮಾನಕ್ಕೆ ಧಕ್ಕೆ ತರುವ ಟನೆ. ಹೊಸ ವ್ಯಾಪಾರದ ಪ್ರಾರಂಭ. ಬಂಧು ವರ್ಗದಲ್ಲಿ ಪ್ರಶಂಸೆ. ದಿನಾಂತ್ಯಕ್ಕೆ ಆಯಾಸ. ಶುಭಸಂಖ್ಯೆ: 4

ಕನ್ಯಾ: ಆಪ್ತರ ಬಣ್ಣ ಬಯಲು. ಸಾಲಗಾರರಿಂದ ಅವಮಾನ. ವ್ಯಾಪಾರಸ್ಥರಿಗೆ ನಷ್ಟ. ಕುಟುಂಬದ ಜತೆ ದೇಗುಲ ಭೇಟಿ. ಶುಭಸಂಖ್ಯೆ: 3

ತುಲಾ: ಪ್ರಾಮಾಣಿಕ ಪ್ರಯತ್ನಕ್ಕೆ ಯಶಸ್ಸು. ಮನೆಯಲ್ಲಿ ಶುಭ ಸಮಾರಂಭದ ಸಡಗರ. ದಿನಾಂತ್ಯದಲ್ಲಿ ಶುಭವಾರ್ತೆ ಕೇಳಿಬರಲಿದೆ. ಶುಭಸಂಖ್ಯೆ: 6

ವೃಶ್ಚಿಕ: ಕೂಡಿಟ್ಟ ಹಣ ಪರರ ಪಾಲಾಗುವ ಸ್ಥಿತಿ. ಸಾರ್ವಜನಿಕ ೇತ್ರದಲ್ಲಿ ವಿಶೇಷ ಮನ್ನಣೆ. ಗುರು ಸನ್ನಿಧಾನಕ್ಕೆ ಪ್ರಯಾಣ. ಶುಭಸಂಖ್ಯೆ:3

ಧನಸ್ಸು: ಹಿರಿಯರ ಸಲಹೆ ನಿಮಗೆ ದಾರಿದೀಪ. ಪ್ರತಿಭೆಗೆ ಸೂಕ್ತ ಪೋತ್ಸಾಹ. ನಟರಿಗೆ ಕಾರ್ಯ ನಷ್ಟ. ಸ್ನೇಹಿತನೊಂದಿಗೆ ಭೋಜನ. ಶುಭಸಂಖ್ಯೆ: 7

ಮಕರ: ಸದೃಢ ಮನಸ್ಸಿನಿಂದ ಕಾರ್ಯ ಸಾಧಿಸಿದ ಸಮಾಧಾನ. ಕುಟುಂಬ ವರ್ಗದಲ್ಲಿ ಮನ್ನಣೆ. ಆರ್ತರಿಗೆ ಸಹಾಯ ಮಾಡಿ. ಶುಭಸಂಖ್ಯೆ: 8.

ಕುಂಭ: ರಾಜಕೀಯದಲ್ಲಿರುವವರಿಗೆ ಅಧಿಕಾರ ಕಳೆದು ಕೊಳ್ಳುವ ಭೀತಿ. ಕುಟುಂಬದ ಸಹಕಾರ. ಅಣ್ಣ& ತಮ್ಮಂದಿರ ಬಾಂಧವ್ಯ ವೃದ್ಧಿ. ಶುಭಸಂಖ್ಯೆ: 1

ಮೀನ: ಕಚೇರಿಯಲ್ಲಿ ಕಿರಿಕಿರಿ. ಆಥಿರ್ಕ ಮುಗ್ಗಟ್ಟು ಕಾಡೀತು. ಮಕ್ಕಳಿಂದ ದುಂದುವೆಚ್ಚ. ತಾಯಿಯ ಮಾತನ್ನು ಪಾಲಿಸಿ.ಶುಭವಾರ್ತೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net