ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಪಾಲುದಾರಿಕೆ ವ್ಯವಹಾರದಲ್ಲಿ ಆರ್ಥಿಕ ಚೇತರಿಕೆ

Nitya Bhavisya Vijayavani
Published on

ಮೇಷ: ಗೃಹಿಣಿಯರಿಗೆ ವಿಶೇಷ ದಿನ. ಬಾಕಿ ಕೆಲಸಗಳು ಇಂದು ಪೂರ್ಣಗೊಳ್ಳುತ್ತವೆ. ಕಾರ್ವಿುಕರಿಗೆ ಅನಿರೀಕ್ಷಿತ ಧನ ಲಾಭವಿದೆ. ಶುಭಸಂಖ್ಯೆ: 2

ವೃಷಭ: ಉದ್ಯೋಗಾಕಾಂಕ್ಷಿಗಳಿಗೆ ಶುಭದಾಯಕ ದಿನ. ವಿದೇಶ ವ್ಯವಹಾರದಲ್ಲಿ ಯಶಸ್ಸು ದೊರೆಯಲಿದೆ. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 6

ಮಿಥುನ: ಚಲನಚಿತ್ರ ನಿರ್ವಪಕರಿಗೆ ನಿರೀಕ್ಷಿತ ಲಾಭ. ನಿಮ್ಮ ಕೆಲಸಕ್ಕೆ ಪೋಷಕರ ಬೆಂಬಲವಿರುತ್ತದೆ. ಶಿಕ್ಷಣ ಕ್ಷೇತ್ರದವರಿಗೆ ಶುಭವಿದೆ. ಶುಭಸಂಖ್ಯೆ: 8

ಕಟಕ: ವಾಹನ ಚಾಲನೆಯಲ್ಲಿ ಎಚ್ಚರಿಕೆಯಿಂದಿರಿ. ಸ್ಟೇಷನರಿ ವ್ಯಾಪಾರಸ್ಥರಿಗೆ ಉತ್ತಮ ಆದಾಯ. ರಾಜಕಾರಣಿ ಗಳಿಗೆ ಒಳ್ಳೆಯ ದಿನವಲ್ಲ. ಶುಭಸಂಖ್ಯೆ: 9

ಸಿಂಹ:ಜನಸೇವೆ ಕೆಲಸಗಳಿಗೆ ಪ್ರೋತ್ಸಾಹ ಸಿಗುತ್ತದೆ. ನವ ದಂಪತಿಗಳಿಗೆ ಸಂತಾನಭಾಗ್ಯ.ಕಾರ್ಪೆಂಟರ್ ಕೆಲಸದವರಿಗೆ ಕೈ ತುಂಬ ಕೆಲಸ.ಶುಭಸಂಖ್ಯೆ: 2

ಕನ್ಯಾ: ದೇವತಾ ದರ್ಶನದಿಂದ ಮನೋಬಲ ವೃದ್ಧಿಯಾಗುವುದು. ಶಿಕ್ಷಕ ವೃಂದದವರಿಗೆ ಶುಭ. ಸ್ವಂತ ವ್ಯವಹಾರ ಆರಂಭಿಸುವಿರಿ. ಶುಭಸಂಖ್ಯೆ: 9

ತುಲಾ: ವೈದ್ಯರಿಗೆ ನಿರೀಕ್ಷೆಗಿಂತ ಹೆಚ್ಚು ಆದಾಯ ಬರಲಿದೆ. ಮಹಿಳೆಯರಿಗೆ ಚರ್ಮದ ಸಮಸ್ಯೆ. ಬೇಕರಿ ವ್ಯಾಪಾರಸ್ಥರಿಗೆ ಉತ್ತಮ ಲಾಭ. ಶುಭಸಂಖ್ಯೆ: 1

ವೃಶ್ಚಿಕ: ಮಧುಮೇಹ ತಜ್ಞರಿಗೆ ಉತ್ತಮ ಸಮಯ. ವೈವಾಹಿಕ ಜೀವನದಲ್ಲಿ ತೊಂದರೆಯಾದೀತು. ವಿಡಿಯೋ ಗ್ರಾಫರ್​ಗಳಿಗೆ ಪರ್ವಕಾಲ. ಶುಭಸಂಖ್ಯೆ: 6

ಧನಸ್ಸು: ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಆದಾಯ. ಸೇವಾ ವಲಯದವರಿಗೆ ಹೆಚ್ಚು ಒತ್ತಡ. ಪರೀಕ್ಷಾ ಸ್ಪರ್ಧಿಗಳಿಗೆ ಯಶಸ್ಸು. ಶುಭಸಂಖ್ಯೆ: 6

ಮಕರ: ಭೂ ವ್ಯವಹಾರದಲ್ಲಿ ಲಾಭ ಬರುವುದು. ಕೃಷಿ ಪರಿಕರಗಳ ವ್ಯಾಪಾರಸ್ಥರಿಗೆ ಉತ್ತಮ ದಿನ. ಹೈನುಗಾರಿಕೆಯಲ್ಲಿ ಹಿನ್ನಡೆಯಿದೆ. ಶುಭಸಂಖ್ಯೆ: 1

ಕುಂಭ: ಪ್ರಿಂಟಿಂಗ್ ವ್ಯಾಪಾರಿಗಳಿಗೆ ನಿರೀಕ್ಷಿತ ಆದಾಯ ಲಭ್ಯ. ಅನಿಲ ವ್ಯಾಪಾರಸ್ಥರಿಗೆ ಲಾಭ. ರಾಜಕೀಯ ವ್ಯಕ್ತಿಗಳಿಗೆ ಶುಭದಿನ. ಶುಭಸಂಖ್ಯೆ: 8

ಮೀನ: ತಾಂತ್ರಿಕ ಕ್ಷೇತ್ರದಲ್ಲಿ ಇರುವವರಿಗೆ ಶುಭ. ಸರ್ಕಾರಿ ನೌಕರರಿಗೆ ಸಂತಸದ ದಿನ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮಿಶ್ರಫಲ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net