ಲಖನೌ: ಇದೀಗ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಜನರು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) 140 ಸ್ಥಾನಗಳನ್ನು ಪಡೆಯಲು ಪರದಾಡುವಂತೆ ಮಾಡುತ್ತಾರೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ವರಿಷ್ಠ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ. ಉತ್ತರ ಪ್ರದೇಶದ ಅಜಂಗಢದಲ್ಲಿ ಚುನಾವಣಾ ರ್ಯಾಲಿ ಬಳಿಕ ಮಾಜಿ ಸಿಎಂ ಈ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ: ಕವಿತಾ ಹೆಚ್ಚುವರಿ ದೋಷಾರೋಪಪಟ್ಟಿ ಪಟ್ಟಿ, ಆದೇಶ ಕಾಯ್ದಿರಿಸಿದ ಕೋರ್ಟ್
ಉತ್ತರ ಪ್ರದೇಶದ ಅಜಂಗಢದಲ್ಲಿ ಚುನಾವಣಾ ರ್ಯಾಲಿ ಬಳಿಕ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಈ ಹೇಳಿಕೆ ನೀಡಿದ್ದಾರೆ. ಚುನಾವಣಾ ರ್ಯಾಲಿ ವೇಳೆ ಕಾಲ್ತುಳಿತವಾದ ಕಾರಣ ಇಂದು ನಡೆದ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಲೋಕಸಭೆ ಚುನಾವಣೆಯ ರ್ಯಾಲಿಯಲ್ಲಿ ಭಾಗವಹಿಸಿದ್ದ ಜನರ ಮೇಲೆ ಉತ್ತರ ಪ್ರದೇಶ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
”ಪೂರ್ವಾಂಚಲ ಚುನಾವಣೆ ನಡೆಯುವಾಗ ಬಿಜೆಪಿ ವಿರುದ್ಧ ಆರಂಭವಾದ ಮತದಾನ ಕೊನೆಯವರೆಗೂ ನಡೆಯಲಿದ್ದು, ಏಳನೇ ಹಂತ ಮುಗಿಯುವ ವೇಳೆಗೆ ಬಿಜೆಪಿ ಸರ್ವನಾಶವಾಗಲಿದೆ. ಜನರು 140 ಸ್ಥಾನಗಳಿಗೆ ಹಪಹಪಿಸುವಂತೆ ಮಾಡುತ್ತಾರೆ.
ಇಂಡಿಯಾ ಮೈತ್ರಿಕೂಟವು 300 (ಸ್ಥಾನಗಳು) ದಾಟಿದೆ: ಏತನ್ಮಧ್ಯೆ, ನಡೆಯುತ್ತಿರುವ ಲೋಕಸಭೆ ಚುನಾವಣೆಗಳು ಮತ್ತು ಬಿಜೆಪಿಯ ‘400-ಪಾರ್’ ಘೋಷಣೆ ಕುರಿತು ಮಾತನಾಡಿದ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಇಂಡಿಯಾ ಮೈತ್ರಿಕೂಟವು 300 (ಸ್ಥಾನಗಳು) ದಾಟಿದೆ. ಇಂಡಿಯಾ ಮೈತ್ರಕೂಟ ಸರ್ಕಾರ ಖಂಡಿತ ರಚನೆಯಾಗುತ್ತದೆ ಎಂದು ತಿಳಿದಿರುವ ಕಾರಣ ಪ್ರಧಾನಿ ಮೋದಿಗೆ ಹೇಳಲು ಏನೂ ಉಳಿದಿಲ್ಲ. ಎನ್ಡಿಎ ಸರ್ಕಾರವು 400 ಪಡೆಯುವುದಿರಲಿ ಅವರಿಗೆ 240 ಸ್ಥಾನ ಪಡೆಯುವುದು ಕೂಡ ಕಷ್ಟವಾಗಲಿದೆ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ತಮಿಳುನಾಡಿನ ಭಾರೀ ವರ್ಷಧಾರೆ: ಪಥನಾಂತಿಟ್ಟ, ಇಡುಕ್ಕಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ