ಈ ರಾಶಿಯವರಿಗೆ ಆರ್ಥಿಕವಾಗಿ ಪ್ರಗತಿ ಹೊಂದುತ್ತೀರಿ.: ನಿತ್ಯಭವಿಷ್ಯ

Nitya Bhavisya Vijayavani
Published on

ಮೇಷ: ವಾಹನ ಚಾಲನೆಯಲ್ಲಿ ಎಚ್ಚರ. ಅವಿವಾಹಿತರಿಗೆ ವಿವಾಹ ಯೋಗ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ನಿರಾಸಕ್ತಿ ಕಾನಿಸಬಹುದು. ಶುಭಸಂಖ್ಯೆ: 5

ವೃಷಭ: ರಾಜಕೀಯ ಕ್ಷೇತ್ರದವರಿಗೆ ಶುಭದಾಯಕ ದಿನ. ಮಹಿಳೆಯರಿಗೆ ಯಶಸ್ಸು ದೊರೆಯುವುದು. ವಿದೇಶಿ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 1

ಮಿಥುನ: ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಆರ್ಥಿಕವಾಗಿ ಪ್ರಗತಿ ಹೊಂದುತ್ತೀರಿ. ಶುಭಸಂಖ್ಯೆ: 2

ಕಟಕ: ಸಮಾಜಸೇವೆಯಿಂದ ಜನಪ್ರಿಯರಾಗುವಿರಿ. ಮಕ್ಕಳ ಆರೋಗ್ಯದತ್ತ ಎಚ್ಚರ ವಹಿಸಿ. ಹಣಕಾಸಿನ ವ್ಯವಹಾರದಲ್ಲಿ ಹಿನ್ನಡೆ. ಶುಭಸಂಖ್ಯೆ: 9

ಸಿಂಹ: ಚರ್ಮವ್ಯಾಧಿ ಬಾಧಿಸಬಹುದು. ಹಾಡುಗಾರರಿಗೆ ಉತ್ತಮ ಅವಕಾಶ ದೊರೆಯುವುದು. ಕಲಾವಿದರಿಗೆ ಆತ್ಮವಿಶ್ವಾಸದಿಂದ ಕೀರ್ತಿ. ಶುಭಸಂಖ್ಯೆ: 7

ಕನ್ಯಾ: ಹೂವಿನ ವ್ಯಾಪಾರಿಗಳಿಗೆ ಆದಾಯ. ರೈತರ ಫಸಲಿಗೆ ಬೇಡಿಕೆ. ಆರ್ಥಿಕತೆಯಲ್ಲಿ ಚೇತರಿಕೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಒತ್ತಡ. ಶುಭಸಂಖ್ಯೆ: 4

ತುಲಾ: ಗೃಹ ಮಾರಾಟಸ್ಥರಿಗೆ ಆದಾಯ. ವಿದ್ಯುತ್ ಸ್ಥಾವರದ ಕಾರ್ವಿುಕರು ಎಚ್ಚರ ವಹಿಸಿ. ಸಂಗ್ರಹದಲ್ಲಿ ಆಸಕ್ತಿ. ಹಳೆಯ ಸ್ನೇಹಿತನ ಭೇಟಿ.ಶುಭಸಂಖ್ಯೆ: 1

ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ. ಜಾಹೀರಾತು ಸಂಸ್ಥೆಗಳಿಗೆ ಲಾಭ. ವಿದೇಶಿ ವಸ್ತು ಉತ್ಪಾದಕರಿಗೆ ಬೇಡಿಕೆ ಬರಲಿದೆ. ಶುಭಸಂಖ್ಯೆ: 8

ಧನಸ್ಸು: ಹೈನುಗಾರಿಕೆಗೆ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭವಿದೆ. ಮನರಂಜನಾ ವೃತ್ತಿಯವರಿಗೆ ಅವಕಾಶ. ವಿದ್ಯಾರ್ಥಿಗಳಿಗೆ ಅನುಕೂಲ. ಶುಭಸಂಖ್ಯೆ: 7

ಮಕರ: ಪಾಲುದಾರಿಕೆಯಲ್ಲಿ ಸಮಸ್ಯೆ ಉಂಟಾಗಬಹುದು. ಆರಕ್ಷಕ ವರ್ಗದವರು ಎಚ್ಚರ ವಹಿಸಿ. ಸಣ್ಣ ಕೈಗಾರಿಕೆಗಳಿಗೆ ಸುಸಮಯ. ಶುಭಸಂಖ್ಯೆ: 6

ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ. ಧಾರ್ವಿುಕ ಕ್ಷೇತ್ರಗಳ ಭೇಟಿ ನೀಡುವಿರಿ. ಸ್ವಯಂ ಉದ್ಯೋಗಸ್ಥರಿಗೆ ಶುಭವಿದೆ. ಶುಭಸಂಖ್ಯೆ: 8

ಮೀನ: ನಿದ್ರಾಹೀನತೆ ಕಾಡಬಹುದು. ಕುಶಲಕಾರ್ವಿುಕರಿಗೆ ಬೇಡಿಕೆ. ಪಂಚಾಯಿತಿ ಅಧಿಕಾರಿಗಳಿಗೆ ವರ್ಗಾವಣೆಯಾಗುವ ಸಾಧ್ಯತೆ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net