

ಮೇಷ: ಕುಟುಂಬದಲ್ಲಿ ಅಶಾಂತಿ. ಕೆಟ್ಟ ಮಾತು ಆಡುವುದನ್ನು ನಿಯಂತ್ರಿಸಿ. ಆದಾಯಕ್ಕಿಂತ ಖರ್ಚು ಜಾಸ್ತಿ. ದೂರ ಪ್ರಯಾಣಕ್ಕೆ ತೊಂದರೆ. ಶುಭಸಂಖ್ಯೆ: 5
ವೃಷಭ: ಹಿತಶತ್ರುಗಳನ್ನು ನಂಬಬೇಡಿ. ಅನಿರೀಕ್ಷಿತ ಲಾಭ. ತೀರ್ಥಯಾತ್ರಾ ದರ್ಶನ. ಸಮಾಜದಲ್ಲಿ ಗೌರವ. ಹೃದಯಸಂಬಂಧ ರೋಗ. ಶುಭಸಂಖ್ಯೆ:9
ಮಿಥುನ: ಸರ್ಕಾರಿ ಕೆಲಸಗಳಲ್ಲಿ ಒತ್ತಡ. ಔತಣ ಕೂಟಗಳಲ್ಲಿ ಭಾಗಿ. ಮನಃಶಾಂತಿ. ಇಂದು ನಿಮ್ಮ ಮನದ ಅಭಿಲಾಷೆ ಈಡೇರುವುದು. ಶುಭಸಂಖ್ಯೆ:7
ಕಟಕ: ಅನವಶ್ಯಕ ಖರ್ಚಿಗೆ ದಾರಿ. ಮೆಡಿಕಲ್ ಕ್ಷೇತ್ರದವರಿಗೆ ಅನುಕೂಲ. ದೂರಾಲೋಚನೆ ಮಾಡುವಿರಿ. ಸಾಲಗಾರರಿಂದ ಕಿರಿಕಿರಿ. ಶುಭಸಂಖ್ಯೆ: 8
ಸಿಂಹ: ಸ್ಥಿರಾಸ್ತಿ ವಿಚಾರದಲ್ಲಿ ದಾಯಾದಿ ಕಲಹ ಉಂಟಾದೀತು. ಅಪರಿಚಿತ ವ್ಯಕ್ತಿಯಿಂದ ಸಹಾಯ. ಬರಬೇಕಾದ ಹಣ ಕೈ ಸೇರುವುದು.ಶುಭಸಂಖ್ಯೆ:3
ಕನ್ಯಾ: ಮಕ್ಕಳ ಅಗತ್ಯಕ್ಕೆ ಖರ್ಚು. ಅತಿಯಾದ ಆತ್ಮವಿಶ್ವಾಸದಿಂದ ತೊಂದರೆಯಾಗುವುದು. ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ. ಶುಭಸಂಖ್ಯೆ:3
ತುಲಾ: ದಿನಸಿ ವ್ಯಾಪಾರಿಗಳಿಗೆ ಲಾಭ. ರಾಜಕೀಯ ವಿಚಾರಗಳಲ್ಲಿ ಆಸಕ್ತಿ. ಮಕ್ಕಳಿಂದ ದುಃಖ. ವ್ಯವಹಾರದಲ್ಲಿ ತಾಳ್ಮೆಯಿಂದ ಇರಿ. ಶುಭಸಂಖ್ಯೆ:7
ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು ಉಂಟಾಗುವ ಸಂಭವ. ಕಲಾವಿದರಿಗೆ ಯಶಸ್ಸಿನ ಮೆಟ್ಟಿಲು. ದಾಂಪತ್ಯದಲ್ಲಿ ಪ್ರೀತಿಯ ಸಮಾಗಮ. ಶುಭಸಂಖ್ಯೆ: 9
ಧನಸ್ಸು: ಸಹೋದ್ಯೋಗಿಗಳೊಂದಿಗೆ ಚಕಮಕಿ. ದುರಭ್ಯಾಸಕ್ಕೆ ಖರ್ಚು. ಮಿತ್ರರಿಂದ ಮೋಸ. ಮನೆಯಲ್ಲಿ ಗೊಂದಲದ ವಾತಾವರಣ. ಶುಭಸಂಖ್ಯೆ:7
ಮಕರ: ಕುಟುಂಬದಲ್ಲಿ ನಿಮ್ಮ ಸಾಧನೆಯನ್ನು ಕೊಂಡಾಡುವರು. ಷೇರು ಮಾರುಕಟ್ಟೆಯಲ್ಲಿ ಲಾಭ. ನೀವಾಡುವ ಮಾತಿನಿಂದ ಅನರ್ಥ. ಶುಭಸಂಖ್ಯೆ: 6
ಕುಂಭ: ಸ್ವಯಂಕೃತ ಅಪರಾಧದಿಂದ ಕಚೇರಿಯಲ್ಲಿ ತೊಂದರೆ. ಚಂಚಲ ಸ್ವಭಾವ ಬೇಡ. ಸಹಕಾರ ಸಂಘದ ಪ್ರತಿನಿಧಿಗಳಿಗೆ ಆದಾಯ. ಶುಭಸಂಖ್ಯೆ:4
ಮೀನ: ಸಂಗಾತಿಯಿಂದ ಹಣದ ಸಹಾಯ. ಬದುಕಿಗೆ ಉತ್ತಮ ತಿರುವು. ಕಾರ್ಯಕ್ಷೇತ್ರದಲ್ಲಿ ಒತ್ತಡ. ಅವಿವಾಹಿತರಿಗೆ ವಿವಾಹಯೋಗ. ಶುಭಸಂಖ್ಯೆ: 8