ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಪ್ರೀತಿ ಪ್ರೇಮ ವಿಷಯಗಳಲ್ಲಿ ಕೆಟ್ಟ ನಿರ್ಧಾರ ಬೇಡ. ಸಾಲಬಾಧೆ ಕಾಡೀತು.

Nitya Bhavisya Vijayavani
Published on

ಮೇಷ: ಮಕ್ಕಳಿಂದ ಗೌರವಕ್ಕೆ ಚ್ಯುತಿ. ಆರ್ಥಿಕ ಸಂಕಷ್ಟ. ಪ್ರೀತಿ ಪ್ರೇಮ ವಿಷಯಗಳಲ್ಲಿ ಕೆಟ್ಟ ನಿರ್ಧಾರ ಬೇಡ. ಸಾಲಬಾಧೆ ಕಾಡೀತು. ಶುಭಸಂಖ್ಯೆ: 5

ವೃಷಭ: ಆಸ್ತಿ ಕಳೆದುಕೊಳ್ಳುವ ಸಂದರ್ಭ ಬರಬಹುದು. ಆರ್ಥಿಕ ಸಹಾಯ ಸಿಗುವುದಿಲ್ಲ. ದುರಾಚಾರಗಳಿಗೆ ಬಲಿಯಾಗುವಿರಿ. ಶುಭಸಂಖ್ಯೆ: 6

ಮಿಥುನ: ದೂರ ಪ್ರಯಾಣ. ಮಕ್ಕಳಿಂದ ಗೌರವಕ್ಕೆ ಧಕ್ಕೆ. ಪತ್ರ ವ್ಯವಹಾರಗಳಲ್ಲಿ ಸಮಸ್ಯೆ. ಕುಲದೇವರನ್ನು ಶ್ರದ್ಧಾ ಭಕ್ತಿಯಿಂದ ಪ್ರಾರ್ಥಿಸಿ. ಶುಭಸಂಖ್ಯೆ: 8

ಕಟಕ: ಧನಾಗಮನವಾಗಿ ಸಮಾಧಾನ. ಶುಭಕಾರ್ಯಗಳಿಗೆ ಅಧಿಕ ಖರ್ಚು. ಅನಾರೋಗ್ಯ. ಮನೆಯಲ್ಲಿ ಆತಂಕದ ವಾತಾವರಣ. ಶುಭಸಂಖ್ಯೆ: 6

ಸಿಂಹ: ಅಧಿಕ ಖರ್ಚು ಮಾಡಲೇಬೇಕಾದ ಪರಿಸ್ಥಿತಿ. ವ್ಯವಹಾರ ಸ್ಥಳದಲ್ಲಿ ಆತ್ಮಗೌರವಕ್ಕೆ ಧಕ್ಕೆ. ನೆರೆಹೊರೆಯವರಿಂದ ಸಮಸ್ಯೆ. ಶುಭಸಂಖ್ಯೆ: 4

ಕನ್ಯಾ: ದೂರ ಪ್ರಯಾಣಕ್ಕಾಗಿ ಖರ್ಚು. ಮಿತ್ರರಿಂದ ನಷ್ಟ. ಮಕ್ಕಳಿಂದ ಆರ್ಥಿಕ ಪರಿಸ್ಥಿತಿ ಉತ್ತಮವಿಲ್ಲ. ಕುಟುಂಬದ ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 9

ತುಲಾ: ಕೆಲಸಕಾರ್ಯಗಳಲ್ಲಿ ಹಿನ್ನಡೆ. ಕೌಟುಂಬಿಕ ಜೀವನದಲ್ಲಿ ಏರುಪೇರು. ಮಿತ್ರರಿಂದ ದುರುಪಯೋಗ. ಇಷ್ಟದೇವರನ್ನು ಆರಾಧಿಸಿ. ಶುಭಸಂಖ್ಯೆ: 6

ವೃಶ್ಚಿಕ: ಮಿತ್ರರಿಂದ ತೊಂದರೆ ಎದುರಾದೀತು. ಅದೃಷ್ಟ ಕೈ ತಪ್ಪುವುದು. ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ. ಆತ್ಮ ಸಂಕಟಗಳು. ಶುಭಸಂಖ್ಯೆ: 9

ಧನಸ್ಸು: ತಂದೆಯಿಂದ ಬೇಸರವಾಗುವುದು. ಸಾಲ ಮಾಡುವ ಸಂದರ್ಭ ಬರಬಹುದು. ಮಹಿಳಾ ಮಿತ್ರರಿಂದ ಸಮಸ್ಯೆ ತಲೆದೋರೀತು. ಶುಭಸಂಖ್ಯೆ: 5

ಮಕರ: ದಾಂಪತ್ಯದಲ್ಲಿ ಕಲಹ, ಸಮಾಧಾನಚಿತ್ತರಾಗಿರಿ. ಪಾಲುದಾರಿಕೆಯಲ್ಲಿ ಸಮಸ್ಯೆ. ಮಕ್ಕಳ ವೈವಾಹಿಕ ಜೀವನದ ಚಿಂತೆ ಕಾಡುವುದು. ಶುಭಸಂಖ್ಯೆ: 9

ಕುಂಭ: ಅಧಿಕಾರಿಗಳಿಂದ ಸಮಸ್ಯೆ. ಗುಪ್ತ ಆಲೋಚನೆಗಳಿಂದ ತೊಂದರೆ. ಭವಿಷ್ಯದ ಚಿಂತೆ. ನೀರು, ಸೌಂದರ್ಯವರ್ಧಕಗಳಿಂದ ಕಂಟಕ. ಶುಭಸಂಖ್ಯೆ: 9

ಮೀನ: ಸಹೋದ್ಯೋಗಿಗಳು ಶತ್ರುಗಳಾದಾರು. ಹೆಣ್ಣುಮಕ್ಕಳಿಂದ ನಷ್ಟ. ಪೊಲೀಸ್ ಠಾಣೆಗೆ ಅಲೆದಾಟ. ಸಂಗಾತಿಯ ಆಪ್ತಸಲಹೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net