

ಮೇಷ: ಆರೋಗ್ಯ ಕೈ ಕೊಡಬಹುದು. ಅನವಶ್ಯಕ ತಿರುಗಾಟವಾದೀತು. ಸಹೋದರರಿಂದ ಸಲಹೆ ಪಡೆದುಕೊಳ್ಳುವುದು ಉತ್ತಮ. ಶುಭಸಂಖ್ಯೆ: 9
ವೃಷಭ: ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ದೃಢ ನಿರ್ಧಾರವನ್ನು ತೆಗೆದುಕೊಳ್ಳಿ. ಕಚೇರಿಯಲ್ಲಿ ಅಸಮಾಧಾನ. ಕಲಾವಿದರಿಗೆ ಲಾಭ. ಶುಭಸಂಖ್ಯೆ: 1
ಮಿಥುನ: ಗುರುಹಿರಿಯರ ಅನಾರೋಗ್ಯದ ವಾರ್ತೆ. ಕೆಲಸದಲ್ಲಿ ಅಪಜಯ. ಸಹೋದ್ಯೋಗಿಗಳಿಂದ ವಿರೋಧ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 7
ಕಟಕ: ಆತ್ಮೀಯರ ಸಮಾಗಮ. ಹಿತೈಷಿಗಳಿಂದ ಮುಖ್ಯವಾದ ವಿಚಾರದಲ್ಲಿ ಸಲಹೆ ಪಡೆಯಿರಿ. ಅನಾರೋಗ್ಯ ಬಾಧಿಸಬಹುದು. ಶುಭಸಂಖ್ಯೆ: 5
ಸಿಂಹ: ಬಹುಕಾಲದಿಂದ ತೊಂದರೆ ಕೊಡುತ್ತಿದ್ದ ಶತ್ರುವಿನ ದಮನ. ಕೋರ್ಟು ವ್ಯವಹಾರಗಳಲ್ಲಿ ಜಯ . ನಂಬಿದವರಿಂದಲೇ ಮೋಸ. ಶುಭಸಂಖ್ಯೆ: 3
ಕನ್ಯಾ: ಮಾನಸಿಕ ಚಾಂಚಲ್ಯ. ಲೇಖಕ ವೃತ್ತಿಯವರಿಗೆ ಒಳ್ಳೆಯ ದಿನ. ಕಲಾಕ್ಷೇತ್ರದವರಿಗೆ ಉತ್ತಮ ಫಲ. ಫಲ ಸಿಗುವ ಸಮಯದಲ್ಲಿ ವಿಘ್ನ. ಶುಭಸಂಖ್ಯೆ: 6
ತುಲಾ: ವಾಹನ ಚಾಲನೆಯಲ್ಲಿ ಜಾಗರೂಕತೆಯಿಂದ ಇರಿ. ಉದ್ಯೋಗದ ವಿಚಾರದಲ್ಲಿ ಸ್ಥಾನಮಾನದ ನಿರೀಕ್ಷೆ. ದಿನಾಂತ್ಯದಲ್ಲಿ ಸಿಹಿ ಸುದ್ಧಿ. ಶುಭಸಂಖ್ಯೆ: 2
ವೃಶ್ಚಿಕ: ಹಿತಶತ್ರುಗಳ ಕಾಟ. ಆಸ್ತಿ ವಿಚಾರದಲ್ಲಿ ಮೋಸ ಹೋಗುವ ಸಂಭವವಿದೆ. ಹಿರಿಯರ ಸಲಹೆ ಪಡೆದು ಮುನ್ನಡೆಯಿರಿ. ಶುಭಸಂಖ್ಯೆ: 8
ಧನಸ್ಸು: ಕುಟುಂಬದಲ್ಲಿ ಗೊಂದಲ. ಯಾರೋ ಮಾಡಿದ ತಪ್ಪಿಗೆ ನೀವು ಬಲಿಯಾಗಬಹುದು ಜೋಕೆ. ಸಾಲಗಾರರ ಕಾಟ ಹೆಚ್ಚಬಹುದು. ಶುಭಸಂಖ್ಯೆ: 3
ಮಕರ: ಸ್ಥಾನಮಾನದ ನಷ್ಟ. ಆತ್ಮೀಯರ ಭೆೇಟಿ. ಯೋಚಿಸಿ ಮಾತನಾಡಿ. ದೃಢವಾದ ಆರೋಗ್ಯ ಸ್ಥಿತಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 8
ಕುಂಭ: ಗೃಹ ನಿರ್ವಣದ ವಿಚಾರದಲ್ಲಿ ಶುಭ ಸುದ್ದಿ. ತಾಯಿಯ ಆರೋಗ್ಯದ ಬಗ್ಗೆ ನಿಗಾ ಇರಲಿ. ಹೆಂಡತಿ ಮಕ್ಕಳಿಂದ ಬೆಂಬಲ. ಶುಭಸಂಖ್ಯೆ: 5
ಮೀನ: ಮೇಲಧಿಕಾರಿಗಳಿಂದ ಪ್ರಶಂಸೆ. ಅನಪೇಕ್ಷಿತ ಧನಲಾಭವಾಗುವ ಸಾಧ್ಯತೆ ಇದೆ. ಮನೆಯಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 7