ಈ ರಾಶಿಯವರಿಗಿಂದು ಸಕಲ ಕಾರ್ಯಗಳಲ್ಲಿ ಅಡ್ಡಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವಿದ್ಯಾರ್ಥಿಗಳಲ್ಲಿ ಅರಿವು. ದೈನಂದಿನ ಕಾರ್ಯಗಳಲ್ಲಿ ಬದಲಾವಣೆ ಅನಿವಾರ್ಯವಾಗಬಹುದು. ಸ್ನೇಹಿತರಿಂದ ಧನಾಗಮನ. ಶುಭಸಂಖ್ಯೆ: 5

ವೃಷಭ: ವ್ಯಾಪಾರದಲ್ಲಿ ಅಲ್ಪ ಲಾಭ. ಕೋರ್ಟ್ ವ್ಯವಹಾರದಲ್ಲಿ ಜಯ. ಮನಃಶಾಂತಿ. ಸ್ಥಿರಾಸ್ತಿ ಮಾರಾಟ. ದ್ವಿಚಕ್ರವಾಹನದಿಂದ ತೊಂದರೆ. ಶುಭಸಂಖ್ಯೆ: 8

ಮಿಥುನ: ಮುಖ್ಯವಾದ ಕೆಲಸಗಳು ಅಂತಿಮ ಹಂತಕ್ಕೆ. ಪರಸ್ಥಳ ವಾಸ. ಹಿರಿಯರಿಂದ ನೆರವು. ಉದರ ಸಂಬಂಧಿ ಆನಾರೋಗ್ಯ. ಶುಭಸಂಖ್ಯೆ: 9

ಕಟಕ: ಮಾನಸಿಕ ಒತ್ತಡ. ದುಃಖಕ್ಕೆ ಗುರಿ ಮಾಡುವುದು. ವಿದ್ಯಾರ್ಥಿಗಳಿಗೆ ಶರೀರದಲ್ಲಿ ಆಲಸ್ಯ. ಆತಂಕ ಹೆಚ್ಚುವುದು. ಅಕಾಲ ಭೋಜನ. ಶುಭಸಂಖ್ಯೆ: 7

ಸಿಂಹ: ಆಸ್ತಿ ವಿಚಾರವಾಗಿ ವಿವಾದ. ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಒತ್ತಡ. ದೃಷ್ಟಿ ದೋಷದಿಂದ ತೊಂದರೆ. ಶತ್ರು ಬಾಧೆ. ಶುಭಸಂಖ್ಯೆ: 9

ಕನ್ಯಾ: ಚಲನಚಿತ್ರ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಪ್ರಗತಿ. ಪರರಿಗೆ ಸಹಾಯ ಮಾಡುವಿರಿ. ಸಕಲ ಕಾರ್ಯಗಳಲ್ಲಿ ಅಡ್ಡಿ ಆತಂಕ. ಶುಭಸಂಖ್ಯೆ: 1

ತುಲಾ: ಸಹೋದ್ಯೋಗಿಗಳಿಂದ ಆರ್ಥಿಕ ಸಹಾಯ. ವಾಹನ ರಿಪೇರಿ ಅಗತ್ಯವಾಗುವುದು. ದುಷ್ಟ ಜನರ ಸಹವಾಸ. ಆರ್ಥಿಕ ಬಿಕ್ಕಟ್ಟು. ಶುಭಸಂಖ್ಯೆ: 7

ವೃಶ್ಚಿಕ: ಆದಾಯಕ್ಕಿಂತ ಖರ್ಚು ಜಾಸ್ತಿ. ಆರಕ್ಷಕರಿಗೆ ಭಡ್ತಿ. ಮಹಿಳೆಯರಿಗೆ ನೆಮ್ಮದಿ ಇಲ್ಲದ ಜೀವನ. ಕಾರ್ಯ ವಿಘ್ನ. ಕೃಷಿಕರಿಗೆ ತೊಂದರೆ. ಶುಭಸಂಖ್ಯೆ: 8

ಧನುಸ್ಸು: ಪರಸ್ತ್ರೀ ಸಹವಾಸದಿಂದ ತೊಂದರೆ. ಚಂಚಲ ಮನಸ್ಸು. ಅಮೂಲ್ಯ ವಸ್ತುವನ್ನು ಕಳೆದುಕೊಳ್ಳುವಿರಿ. ಆಕಸ್ಮಿಕ ಖರ್ಚು ಆದೀತು. ಶುಭಸಂಖ್ಯೆ: 4

ಮಕರ: ಆಲಸ್ಯ ಮನೋಭಾವ ಹೋಗಲಾಡಿಸಿಕೊಳ್ಳಿ. ಸರ್ಕಾರಿ ಕಚೇರಿಯಲ್ಲಿ ಕಾರ್ಯ ವಿಘ್ನ. ದ್ವೇಷ, ವಿರೋಧಿಗಳಿಂದ ತೊಂದರೆ. ಶುಭಸಂಖ್ಯೆ: 6

ಕುಂಭ: ಕುಟುಂಬ ಸೌಖ್ಯವಿದೆ. ಸಂಧಾನ ಸಭೆ ಯಶಸ್ವಿ. ಅನಗತ್ಯ ಅಲೆದಾಟ. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಸುಖ ಭೋಜನ. ಶುಭಸಂಖ್ಯೆ: 9

ಮೀನ: ಜಿಮ್ ಟ್ರೇನರ್​ಗೆ ಶುಭ. ವೈದ್ಯಕೀಯ ಶಿಕ್ಷಣದಲ್ಲಿ ಪ್ರಗತಿ. ಸ್ಥಳ ಬದಲಾವಣೆ. ಅಲಂಕಾರಿಕ ವಸ್ತುಗಳಿಗೆ ಖರ್ಚು. ಪ್ರಿಯರ ಭೇಟಿ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net