ಈ ರಾಶಿಯವರಿಗಿಂದು ಹಣಕಾಸಿನ ಮುಗ್ಗಟ್ಟು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಪಿತ್ರಾರ್ಜಿತ ಆಸ್ತಿ ವಿಚಾರದ ಮಾತುಕತೆ. ವಾಹನದಿಂದ ಅಪಾಯ. ಉದ್ಯೋಗದಲ್ಲಿ ಲಾಭ. ಮಕ್ಕಳಿಂದ ಶುಭವಾರ್ತೆ. ಶುಭಸಂಖ್ಯೆ: 5

ವೃಷಭ: ಆರೋಗ್ಯದ ಕಡೆ ಗಮನವಿರಲಿ. ದಾಂಪತ್ಯದಲ್ಲಿ ಸಾಮರಸ್ಯತೀರ ಅಗತ್ಯ. ವಿದ್ಯಾರ್ಥಿಗಳಿಗೆ ಪ್ರಗತಿ, ವಸ್ತ್ರಾಭರಣ ಖರೀದಿ. ಶುಭಸಂಖ್ಯೆ: 9

ಮಿಥುನ: ಹಿರಿಯರ ಆರೋಗ್ಯದಲ್ಲಿ ತೊಂದರೆಯಾಗುವುದು. ಮನೆಗೆ ಆತ್ಮೀಯರ ಆಗಮನ. ವ್ಯಾಪಾರಸ್ಥರಿಗೆ ಲಾಭದಾಯಕ ದಿನ. ಶುಭಸಂಖ್ಯೆ: 9

ಕಟಕ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ವಿದ್ಯಾರ್ಥಿಗಳಿಂದ ಕಾಲಹರಣ. ಕೋರ್ಟಿನಲ್ಲಿ ಜಯ. ಮಕ್ಕಳ ಬಗ್ಗೆ ಗಮನವಿರಲಿ. ಶುಭಸಂಖ್ಯೆ: 7

ಸಿಂಹ: ನಿರ್ವಣದಲ್ಲಿ ಅಡೆತಡೆ. ಉದ್ಯೋಗದಲ್ಲಿ ಬದಲಾವಣೆ. ದಂಪತಿಗಳ ಮಧ್ಯೆ ಸಾಮರಸ್ಯ. ನಟಿಯರಿಗೆ ಅನಾರೋಗ್ಯ. ಶುಭಸಂಖ್ಯೆ: 3

ಕನ್ಯಾ: ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ ದಿನ. ನೀರಿನಿಂದ ಅಪಾಯವಾಗಬಹುದು ಜಾಗ್ರತೆ. ಪ್ರಯಾಣದಲ್ಲಿ ಜಾಗೃತರಾಗಿರಿ. ಶುಭಸಂಖ್ಯೆ: 7

ತುಲಾ: ಅನಿರೀಕ್ಷಿತವಾಗಿ ಸ್ವಗ್ರಾಮಕ್ಕೆ ಪ್ರಯಾಣಿಸಬೇಕಾಗುವುದು. ಹಣಕಾಸಿನ ಮುಗ್ಗಟ್ಟು. ಸ್ನೇಹಿತರ ಮಧ್ಯೆ ಕಲಹ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ: 9

ವೃಶ್ಚಿಕ: ಲೇವಾದೇವಿ ವ್ಯವಹಾರಸ್ಥರಿಗೆ ಲಾಭ. ಮಕ್ಕಳಿಂದ ಸುವಾರ್ತೆಯನ್ನು ಕೇಳುವಿರಿ. ಪುಸ್ತಕ ವ್ಯಾಪಾರಸ್ಥರಿಗೆ ಉತ್ತಮವಾದ ದಿನ. ಶುಭಸಂಖ್ಯೆ: 4

ಧನುಸ್ಸು: ಕೃಷಿ ಉಪಕರಣಗಳ ಖರೀದಿ. ಮಾನಸಿಕ ಒತ್ತಡವು ಹೆಚ್ಚುತ್ತದೆ. ಸಾಕುಪ್ರಾಣಿಗಳಿಂದ ತೊಂದರೆ. ದೂರ ಪ್ರಯಾಣದ ಯೋಗ. ಶುಭಸಂಖ್ಯೆ: 6

ಮಕರ: ತಂದೆತಾಯಿಯರ ಆರೋಗ್ಯದ ಬಗ್ಗೆ ಎಚ್ಚರ. ವಿದ್ಯಾರ್ಥಿಗಳಿಗೆ ಪ್ರಗತಿ. ವ್ಯವಹಾರದಿಂದ ನಷ್ಟ. ಹಿತ ಶತ್ರುಗಳ ಬಗ್ಗೆ ಎಚ್ಚರ. ಶುಭಸಂಖ್ಯೆ: 5

ಕುಂಭ: ಆಕಸ್ಮಿಕ ಧನಾಗಮನ ಯೋಗವಿದೆ. ಅಧಿಕಾರಿಗಳಿಂದ ಕಿರಿಕಿರಿ. ಮನೆಗೆ ಬಂಧುಮಿತ್ರರ ಆಗಮನ. ಕೃಷಿಕರಿಗೆ ಶುಭಫಲವಿದೆ. ಶುಭಸಂಖ್ಯೆ: 3

ಮೀನ: ಉದ್ಯೋಗಸ್ಥ ಮಹಿಳೆಯರಿಗೆ ಶುಭ. ಪಶುಸಂಗೋಪನೆಯಿಂದ ಲಾಭ. ಹಣ್ಣು ವ್ಯಾಪಾರಸ್ಥರಿಗೆ ಶುಭ. ಕೈಕಾಲುಗಳಿಗೆ ಪೆಟ್ಟಾದೀತು. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net