ಈ ರಾಶಿಯವರಿಗಿಂದು ಬಂಧುಗಳಿಂದ ಸಹಕಾರ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವಿದ್ಯಾರ್ಥಿಗಳಿಗೆ ಅಶುಭ ಫಲ. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಸ್ವಂತ ಉದ್ಯಮದಲ್ಲಿ ನಷ್ಟ. ಅಶುಭ ವಾರ್ತೆ ಕೇಳುವಿರಿ. ಶುಭಸಂಖ್ಯೆ: 9

ವೃಷಭ: ಬ್ಯಾಂಕಿಂಗ್ ಸಂಸ್ಥೆಗಳಿಂದ ಆದಾಯ. ಬಂಧುಗಳಿಂದ ಸಹಕಾರ. ರಾಜಕೀಯದವರಿಗೆ ಯಶಸ್ಸು. ನಟರಿಗೆ ಅವಕಾಶಗಳು ಲಭ್ಯ. ಶುಭಸಂಖ್ಯೆ: 7

ಮಿಥುನ: ಪ್ರಯಾಣದಲ್ಲಿ ಎಚ್ಚರ ವಹಿಸಿ. ವ್ಯಾಪಾರದಲ್ಲಿ ಹಿತ ಶತ್ರುಗಳಿಂದ ತೊಂದರೆ. ಸೇವಿಸುವ ಆಹಾರದಲ್ಲಿ ಹೆಚ್ಚಿನ ಕಾಳಜಿ ಇರಲಿ. ಶುಭಸಂಖ್ಯೆ: 3

ಕಟಕ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ. ಇಲಾಖಾವಾರು ಪರೀಕ್ಷೆಗಳಲ್ಲಿ ಜಯ. ಕಣ್ಣಿನ ಸಮಸ್ಯೆ. ಆತ್ಮೀಯ ಸ್ನೇಹಿತನ ಸಹಾಯ ಸಿಗಲಿದೆ. ಶುಭಸಂಖ್ಯೆ: 2

ಸಿಂಹ: ವಸ್ತು ಖರೀದಿಯಿಂದ ಖರ್ಚು. ಬಂಧುಗಳಲ್ಲಿ ಭಿನ್ನಾಭಿಪ್ರಾಯ. ಮಾತಿನ ಮೇಲೆ ನಿಯಂತ್ರಣವಿರಲಿ. ಅಪರಿಚಿತರಿಂದ ಸಹಾಯ. ಶುಭಸಂಖ್ಯೆ: 4

ಕನ್ಯಾ: ತೈಲ ಉತ್ಪಾದಕರಿಗೆ ಲಾಭ. ಆರೋಗ್ಯದಲ್ಲಿ ವ್ಯತ್ಯಯವಾದೀತು. ಸಹೋದರರಲ್ಲಿ ಜಗಳ. ಕೃಷಿ ಭೂಮಿ ಖರೀದಿಸುವ ನಿರ್ಧಾರ. ಶುಭಸಂಖ್ಯೆ: 5

ತುಲಾ: ವಾಹನ ಬದಲಾವಣೆ ಯೋಚನೆ. ದಾಂಪತ್ಯದಲ್ಲಿ ನೆಮ್ಮದಿ. ಸಾಕುಪ್ರಾಣಿಗಳಿಂದ ತೊಂದರೆ. ಸ್ತ್ರೀಯರಿಗೆ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 8

ವೃಶ್ಚಿಕ: ಪದವಿ, ಅಧಿಕಾರ ಪ್ರಾಪ್ತಿಯಲ್ಲಿ ಶತ್ರುಗಳಿಂದ ಕಷ್ಟ. ಕಸೂತಿ ವ್ಯಾಪಾರಸ್ಥರಿಗೆ ಶುಭ. ಅನವಶ್ಯಕ ಚರ್ಚೆ ಬೇಡ. ಸಹನೆ ಕಾಪಾಡಿ. ಶುಭಸಂಖ್ಯೆ: 1

ಧನುಸ್ಸು: ನೆಮ್ಮದಿ ಇಲ್ಲದ ಜೀವನ. ಹಣಕಾಸಿನ ವಿಚಾರದಲ್ಲಿ ತಾಳ್ಮೆಯಿಂದ ಇರಿ. ನೇರ ನುಡಿಗಳಿಂದ ಶತ್ರುಗಳು ಜಾಸ್ತಿಯಾಗುವರು. ಶುಭಸಂಖ್ಯೆ: 6

ಮಕರ: ಸಾರ್ವಜನಿಕ ರಂಗದಲ್ಲಿ ಅವಮಾನ. ಹತ್ತಿ ಬೆಳಗಾರ ರಿಗೆ ಬೇಡಿಕೆ. ಕೆಲಸಗಳಲ್ಲಿ ಯಶಸ್ಸು ಸಿಗುವುದು. ಮಗಳಿಗೆ ವಿವಾಹ ಸಂಭವ. ಶುಭಸಂಖ್ಯೆ: 4

ಕುಂಭ: ವ್ಯವಹಾರದಲ್ಲಿ ಹೂಡಿಕೆಗಳು ಲಾಭದಾಯಕವಾಗಿರುತ್ತವೆ. ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಿ. ತೈಲ ಮಾರಾಟದಲ್ಲಿ ಶುಭ. ಶುಭಸಂಖ್ಯೆ: 2

ಮೀನ: ಕಬ್ಬಿಣ ವ್ಯಾಪಾರದಲ್ಲಿ ಲಾಭ. ಔಷಧ ಉದ್ಯಮಕ್ಕೆ ಆದಾಯ. ಮಾತಿನಲ್ಲಿ ನಿಯಂತ್ರಣವಿರಲಿ. ಕೃಷಿಕರಿಗೆ ಕೆಲಸಗಾರರ ಅಭಾವ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net