ಈ ರಾಶಿಯವರಿಗಿಂದು ಉದ್ಯೋಗ ಕಳೆದುಕೊಳ್ಳುವ ಭೀತಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಾಲ ಮಾಡುವ ಸಂದರ್ಭ ಬರಲಿದೆ. ತಾಯಿಯೊಂದಿಗೆ ಶತ್ರುತ್ವ ನಿಯಂತ್ರಿಸುವುದು ಅತಿ ಮುಖ್ಯ. ಬುದ್ಧಿಯ ಚಂಚಲತೆ. ಶುಭಸಂಖ್ಯೆ: 9

ವೃಷಭ: ನಿಮ್ಮಭಾವನೆಗಳಿಗೆ ಪೆಟ್ಟು ಬೀಳುವುದು. ಕುಟುಂಬದೊಂದಿಗೆ ಆಸ್ತಿ ವಾಗ್ವಾದ. ಎಲೆಕ್ಟ್ರಾನಿಕ್ಸ್ ವಸ್ತುಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 5

ಮಿಥುನ: ದುರ್ವಾರ್ತೆ ಕೇಳಿಬರುವ ಸಾಧ್ಯತೆ ಇದೆ. ಪ್ರಯಾಣದಲ್ಲಿ ಕಿರಿಕಿರಿ ಅನುಭವಿಸುವಿರಿ. ಕೃಷಿಕರಿಗೆ, ಲೇಖಕರಿಗೆ ಆರ್ಥಿಕ ಬೆಳವಣಿಗೆ. ಶುಭಸಂಖ್ಯೆ: 9

ಕಟಕ: ಕುಟುಂಬ ಕಲಹದಿಂದ ನೆಮ್ಮದಿ ಭಂಗ. ಆಸ್ತಿ ಕಳೆದುಕೊಳ್ಳುವ ಭೀತಿ. ಹೃದಯ ಸಂಬಂಧಿತ ಆರೋಗ್ಯ ಸಮಸ್ಯೆ ನಿವಾರಣೆ. ಶುಭಸಂಖ್ಯೆ: 1

ಸಿಂಹ: ಸ್ನೇಹಿತರೊಂದಿಗೆ ಔತಣಕೂಟಕ್ಕೆ ಖರ್ಚು. ನೂತನ ಉದ್ಯೋಗಸ್ಥರಿಗೆ ನಿರಾಸೆ. ಪಾಲುದಾರಿಕೆ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ. ಶುಭಸಂಖ್ಯೆ: 9

ಕನ್ಯಾ: ಮಾತಿನಿಂದ ಸಮಸ್ಯೆ ಉಂಟಾಗಬಹುದು. ಮಹಿಳಾ ಉದ್ಯಮಿಗಳಿಗೆ ಕೆಲಸಗಾರರ ಸಮಸ್ಯೆ. ಪ್ರೇಮಿಗಳಿಗೆ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 3

ತುಲಾ: ದುಶ್ಚಟದಿಂದ ತೊಂದರೆ. ಮಿತ್ರರಿಂದ ಉದ್ಯೋಗದಲ್ಲಿ ಕಿರಿಕಿರಿ. ಶುಭ ಕಾರ್ಯಗಳ ವ್ಯವಸ್ಥಾಪಕರಿಗೆ ವಿಶೇಷ ಲಾಭವಾಗಲಿದೆ. ಶುಭಸಂಖ್ಯೆ: 4

ವೃಶ್ಚಿಕ: ದೂರಪ್ರದೇಶದಲ್ಲಿ ಅನುಕೂಲವಾಗುವುದು. ಆಸ್ತಿ ಸಮಸ್ಯೆ ಬಗೆಹರಿಯುವುದು. ವಾಣಿಜ್ಯ ವಿದ್ಯಾರ್ಥಿಗಳಿಗೆ ಪ್ರಗತಿದಾಯಕ ದಿನ. ಶುಭಸಂಖ್ಯೆ: 6

ಧನಸ್ಸು: ಉದ್ಯೋಗ ಕಳೆದುಕೊಳ್ಳುವ ಭೀತಿಯಿದೆ. ಪ್ರಯಾಣ ರದ್ದಾಗುವ ಸಂಭವ. ಮನರಂಜನಾ ಕ್ಷೇತ್ರದಲ್ಲಿ ಅವಕಾಶಗಳು ಲಭ್ಯ. ಶುಭಸಂಖ್ಯೆ: 2

ಮಕರ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗುವುದು. ಕೋರ್ಟಿಗೆ ಅಲೆದಾಟ. ಸಂಗಾತಿಯ ನಡವಳಿಕೆ ಯಿಂದ ಬೇಸರವಾಗುವುದು. ಶುಭಸಂಖ್ಯೆ: 7

ಕುಂಭ: ಪಾಲುದಾರಿಕೆಯಲ್ಲಿ ಹೊಸ ಹೂಡಿಕೆದಾರರ ಸೇರ್ಪಡೆ. ಪ್ರಯಾಣದಲ್ಲಿ ಅಪರಿಚಿತರಿಂದ ಮೋಸ. ಬಂದು ಬಾಂಧವರಲ್ಲಿ ಶತ್ರುತ್ವ. ಶುಭಸಂಖ್ಯೆ: 8

ಮೀನ: ಸ್ಥಿರಾಸ್ತಿ ಖರೀದಿಗೆ ನಿರ್ಧರಿಸುವಿರಿ. ವಿಚ್ಛೇದಿತರಿಗೆ ವಿವಾಹ ನಿಶ್ಚಯವಾಗುವುದು. ವಾಹನ ಚಾಲನೆಯಲ್ಲಿ ಜಾಗ್ರತೆ ಅಪೇಕ್ಷಣೀಯ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net