

ಮೇಷ: ಕಚೇರಿಯಲ್ಲಿ ತಾಳ್ಮೆ ಇರಲಿ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯುವುದು. ಧಾರ್ವಿುಕ ಸಮಾರಂಭಗಳಲ್ಲಿ ಭಾಗಿ. ಶುಭಸಂಖ್ಯೆ: 1
ವೃಷಭ: ಪತ್ನಿಯ ಆರೋಗ್ಯದಲ್ಲಿ ಬದಲಾವಣೆಯಾಗಿ ಸಮಾಧಾನ. ಆಕಸ್ಮಿಕವಾಗಿ ಧನಲಾಭ. ಕೃಷಿಕರಿಗೆ ಮಾನಸಿಕ ಒತ್ತಡ ಹೆಚ್ಚಾಗುವುದು. ಶುಭಸಂಖ್ಯೆ: 9
ಮಿಥುನ: ಹಿತಶತ್ರುಗಳ ಬಾಧೆ ತುಸು ಹೆಚ್ಚಲಿದೆ. ರಾಜಕೀಯದವರಿಗೆ ಸಮಾಜದಲ್ಲಿ ಮನ್ನಣೆ ಸಿಗಲಿದೆ. ಅಪರೂಪದ ಬಂಧುಗಳ ಭೇಟಿ. ಶುಭಸಂಖ್ಯೆ: 9
ಕಟಕ: ದಾಂಪತ್ಯದಲ್ಲಿ ವಿರಸ. ಹೊಸ ಉದ್ಯೋಗದ ಒತ್ತಡ. ಸಹೋದರರೊಂದಿಗೆ ಜಗಳ ಆದೀತು. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 7
ಸಿಂಹ: ವಿದ್ಯೆಯಲ್ಲಿ ತಾತ್ಕಾಲಿಕ ನಿರಾಸಕ್ತಿ ತಾಳುವಿರಿ. ಕಾರ್ವಿುಕ ವರ್ಗದವರಿಗೆ ಧನಲಾಭ. ದಾಂಪತ್ಯದಲ್ಲಿ ಸಾಮರಸ್ಯ ಸಾಧಿಸುವಿರಿ. ಶುಭಸಂಖ್ಯೆ: 5
ಕನ್ಯಾ: ವಿದ್ಯೆಯಲ್ಲಿ ಆಸಕ್ತಿ ವಹಿಸುವಿರಿ. ಸ್ನೇಹಿತರ ಜತೆ ಮೋಜು- ಮಸ್ತಿಗೆ ಅಧಿಕ ಖರ್ಚು. ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ. ಶುಭಸಂಖ್ಯೆ: 6
ತುಲಾ: ಹೂಡಿಕೆ ವ್ಯವಹಾರದಲ್ಲಿ ನಷ್ಟವಾಗುವ ಲಕ್ಷಣವಿದೆ. ವೈಭವಯುತ ವಸ್ತುಗಳನ್ನು ಖರೀದಿಸುವಿರಿ. ಕಾನೂನು ವ್ಯಾಜ್ಯಗಳಲ್ಲಿ ಜಯ. ಶುಭಸಂಖ್ಯೆ: 9
ವೃಶ್ಚಿಕ: ಪಿತೃ ವರ್ಗದಿಂದ ಧನಸಹಾಯ ಒದಗಿ ಬರಲಿದೆ. ಉದ್ಯೋಗದಲ್ಲಿ ನೆಮ್ಮದಿ ಕಂಡುಕೊಳ್ಳುವಿರಿ. ಕೌಟುಂಬಿಕ ಕಲಹ ತಾರಕಕ್ಕೆ. ಶುಭಸಂಖ್ಯೆ: 2
ಧನಸ್ಸು: ಉದ್ಯೋಗ ನಿಮಿತ್ತ ಪ್ರಯಾಣ. ಮಹಿಳಾ ನೌಕರರಿಗೆೆ ವರ್ಗಾವಣೆ. ಸಹೋದ್ಯೋಗಿಗಳಿಂದ ಕಿರಿಕಿರಿ. ಮನೆಯಲ್ಲಿ ಅಶಾಂತಿ. ಶುಭಸಂಖ್ಯೆ: 7
ಮಕರ: ಸಿನಿಮಾರಂಗದವರಿಗೆ ಅಭಿವೃದ್ಧಿ. ಸಂಬಂಧಿಗಳಿಂದ ಸಹಾಯ. ಯಂತ್ರೋಪಕರಣಗಳಿಂದ ತೊಂದರೆ. ಸಾರಿಗೆ ನೌಕರಿಗೆ ಕುತ್ತು. ಶುಭಸಂಖ್ಯೆ: 6
ಕುಂಭ: ಭವಿಷ್ಯದ ಬಗ್ಗೆ ಚಿಂತೆ. ಹಣ್ಣುಗಳು ಮತ್ತು ತರಕಾರಿ ಮಾರಾಟಗಾರರಿಗೆ ಉತ್ತಮ ಆದಾಯ. ಔಷಧ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 1
ಮೀನ: ವಿವಾಹ ಯೋಗ. ವಿದ್ಯಾರ್ಥಿಗಳಿಗೆ ಹಿನ್ನಡೆ. ರಾಜಕಾರಣಿಗಳ ಸಹಕಾರ ದೊರೆಯುತ್ತದೆ. ಆಯುರ್ ವೈದ್ಯರಿಗೆ ಸ್ಥಳ ಬದಲಾವಣೆ. ಶುಭಸಂಖ್ಯೆ: 8