Suryakumar Yadav ಮಾಡಿದ ಈ ಒಂದು ತಪ್ಪು... ಟೀಮ್​ ಇಂಡಿಯಾ ಸೋಲಿಗೆ ಕಾರಣವಾದ ಅಂಶ ಉಲ್ಲೇಖಿಸಿದ ಮಾಜಿ ಕ್ರಿಕೆಟಿಗ

SuryaKumar Yadav
Published on

ಮುಂಬೈ: ರಾಜ್​ಕೋಟ್​ನ ನಿರಂಜನ್ ಷಾ ಕ್ರೀಡಾಂಗಣದಲ್ಲಿ ಜನವರಿ 28ರಂದು ಭಾರತ ಹಾಗೂ ಇಂಗ್ಲೆಂಡ್​ ನಡುವೆ ನಡೆದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಆತಿಥೇಯರನ್ನು ಸೋಲಿಸುವ ಮೂಲಕ ಪ್ರವಾಸಿ ತಂಡವು  ಸರಣಿ ಜೀವಂತವಿರಿಸಿದೆ. ಈ ಮೂಲಕ ಸೂರ್ಯಕುಮಾರ್ ಯಾದವ್ (Suryakumar Yadav) ಹಾಗೂ ಕೋಚ್ ಗೌತಮ್ ಗಂಭೀರ್ (Gautam Gambhir) ಕಾಂಬಿನೇಷನ್‌ನ ಅಜೇಯ ಓಟಕ್ಕೂ ಬ್ರೇಕ್ ಬಿದ್ದಿದ್ದು, ಸೋಲಿಗೆ ಕಾರಣವಾದ ಅಂಶಗಳನ್ನು ತಂಡ ಪರಮಾರ್ಶಿಸುತ್ತಿದೆ.

ಇನ್ನೂ ಟೀಮ್​ ಇಂಡಿಯಾ ಸೋಲಿಗೆ ಮಾಜಿ ಆಟಗಾರ ಆಕಾಶ್​ ಚೋಪ್ರಾ ಮಾತನಾಡಿದ್ದು, ಸೋಲಿಗೆ ಕಾರಣವಾದ ಅಂಶವನ್ನು ಉಲ್ಲೇಖಿಸಿದ್ದಾರೆ. ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಈ ಸಂಬಂಧ ವಿಡಿಯೋ ಪೋಸ್ಟ್ ಮಾಡಿರುವ ಆಕಾಶ್​ ಚೋಪ್ರಾ, ನಾಯಕ ಸೂರ್ಯಕುಮಾರ್​ ಯಾದವ್ (Suryakumar Yadav) ಒಂದು ಟ್ರಿಕ್​ ಮಿಸ್​ ಮಾಡಿದ್ದೇ ಭಾರತದ ಸೋಲಿಗೆ ಕಾರಣವಾಯ್ತು. ನನ್ನ ಪ್ರಕಾರ ಮೊಹಮ್ಮದ್​ ಶಮಿಗೆ ನಾಲ್ಕನೇ ಓವರ್​ ಎಸೆಯಲು ಅವಕಾಶ ನೀಡಬೇಕಿತ್ತು.

Aakash Chopra

ಶಮಿಗೆ ಡೆತ್​ ಓವರ್​ನಲ್ಲಿ ಬೌಲಿಂಗ್ ಮಾಡಲು ನಾಯಕ ಅವಕಾಶ ನೀಡಿದರು. ಆ ಸಮಯಕ್ಕೆ 8-9 ವಕೆಟ್​ಗಳು ಬಿದ್ದಿದ ಕಾರಣ ಶಮಿಗೆ ಡೆತ್​ ಓವರ್​ನಲ್ಲಿ ಹೆಚ್ಚಿನ ಒತ್ತಡ ಇಲ್ಲದ ಕಾರಣ ಅವಕಾಶ ಕೊಡಬೇಕಿತ್ತು. 14 ತಿಂಗಳ ಬಳಿಕ ಶಮಿ ಕಮ್​​ಬ್ಯಾಕ್​ ಮಾಡಿದ್ದು, ಆತ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ ಎಂದು ಟೀಮ್​ ಇಂಡಿಯಾ ಮಾಜಿ ಆಟಗಾರ ಆಕಾಶ್​ ಚೋಪ್ರಾ ತಂಡದ ಸೋಲಿಗೆ ಕಾರಣವನ್ನು ಉಲ್ಲೇಖಿಸಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 171 ರನ್ ಗಳಿಸಿತು. ಆರಂಭಿಕ ಬೆನ್ ಡಕೆಟ್ (51 ರನ್​ 28 ಎಸೆತ 7 ಬೌಂಡರಿ, 2 ಸಿಕ್ಸರ್) ಅರ್ಧಶತಕ ಗಳಿಸಿದರೆ, ಲಿಯಾಮ್​ ಲಿವಿಂಗ್​ಸ್ಟೋನ್​ (43 ರನ್​ 24 ಎಸೆತ, 1 ಬೌಂಡರಿ, 5 ಸಿಕ್ಸರ್​) ಅಬ್ಬರದ ಬ್ಯಾಟಿಂಗ್​ ಪ್ರದರ್ಶನ ಮಾಡಿದರು. ಟೀಮ್​ ಇಂಡಿಯಾ ಪರ ವರುಣ್ ಚಕ್ರವರ್ತಿ (5/24) ಅದ್ಭುತ ಪ್ರದರ್ಶನ ನೀಡಿದರು. ಆದರೆ, ಟೀಮ್​ ಇಂಡಿಯಾದ ಬ್ಯಾಟಿಂಗ್​ ವೈಫಲ್ಯದಿಂದ ಸೋಲು ಅನುಭವಿಸಬೇಕಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net