

ಮೇಷ: ಹೊಸ ಸಂಕಷ್ಟಗಳು ಎದುರಾಗಬಹುದು. ಪರರನ್ನು ಟೀಕಿಸುವ ಮುನ್ನ ಒಮ್ಮೆ ಯೋಚಿಸಿ. ಸಂಶೋಧಕರಿಗೆ ಶುಭಕಾರಕ ದಿನ. ಶುಭಸಂಖ್ಯೆ: 5
ವೃಷಭ: ಕೃಷಿಯಿಂದ ಆದಾಯ ಬರಲಿದೆ. ಸಂಸಾರದಲ್ಲಿ ಗೊಂದಲದ ವಾತಾವರಣ. ಮಕ್ಕಳ ಸಂತೋಷಕ್ಕಾಗಿ ಹಣವ್ಯಯವಾಗುವುದು. ಶುಭಸಂಖ್ಯೆ: 1
ಮಿಥುನ: ರಾಸಾಯನಿಕ ವಸ್ತುಗಳ ಮಾರಾಟಗಾರರಿಗೆ ಲಾಭ. ಕೆಲಸಕ್ಕಾಗಿ ತುರ್ತು ಪ್ರಯಾಣದ ಸಂಭವ. ಅಧಿಕಾರಿಗಳಿಂದ ಬೆಂಬಲ. ಶುಭಸಂಖ್ಯೆ: 9
ಕಟಕ: ರೇಷ್ಮೆ ವ್ಯಾಪಾರದಲ್ಲಿ ಆದಾಯ. ನವೋದ್ಯಮಿಗಳಿಗೆ ಸರ್ಕಾರದಿಂದ ಸಹಾಯ ಸಿಗಲಿದೆ. ನೀರಿನ ವ್ಯತ್ಯಾಸದಿಂದ ಅನಾರೋಗ್ಯ. ಶುಭಸಂಖ್ಯೆ: 4
ಸಿಂಹ: ಅಬಕಾರಿ ಗುತ್ತಿಗೆದಾರರಿಗೆ ಲಾಭ. ಕಲಾವಿದರು ಪರಿಸ್ಥಿತಿಗೆ ಹೊಂದಿಕೊಳ್ಳಿ. ಹಣಕಾಸು ಸಂಸ್ಥೆಯ ವ್ಯವಹಾರದಲ್ಲಿ ಆತಂಕ. ಶುಭಸಂಖ್ಯೆ: 1
ಕನ್ಯಾ: ಚಿನ್ನಾಭರಣಗಳ ಹೂಡಿಕೆಯಲ್ಲಿ ಲಾಭ. ನಾಟಕ ರಂಗದವರಿಗೆ ಪೋ›ತ್ಸಾಹಗಳು ಲಭ್ಯ. ಪರರ ನಿಂದನೆ ಮಾಡಬೇಡಿ. ಶುಭಸಂಖ್ಯೆ: 8
ತುಲಾ: ಹಣ್ಣು ವ್ಯಾಪಾರಿಗಳಿಗೆ ನಿರೀಕ್ಷೆಗಿಂತ ಅಧಿಕ ಲಾಭ. ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ತಾಳುವಿರಿ. ವಿದೇಶಿ ಉದ್ಯೋಗಸ್ಥರಿಗೆ ಪ್ರಗತಿ. ಶುಭಸಂಖ್ಯೆ: 3
ವೃಶ್ಚಿಕ: ಬಾಳೆ ಮತ್ತು ತೆಂಗು ಕೃಷಿಕರಿಗೆ ಅಭಿವೃದ್ಧಿ. ಮಕ್ಕಳ ಸಂತಸಕ್ಕಾಗಿ ಖರ್ಚು. ಐಟಿ ವೃತ್ತಿಯಲ್ಲಿ ನಕಾರಾತ್ಮಕ ಬೆಳವಣಿಗೆ ಸಂಭವ. ಶುಭಸಂಖ್ಯೆ: 1
ಧನಸ್ಸು: ಉಳಿತಾಯಕ್ಕಿಂತ ಖರ್ಚು ಹೆಚ್ಚು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ದಿನಸಿ ಪದಾರ್ಥದ ವ್ಯಾಪಾರದಲ್ಲಿ ಆದಾಯಕ್ಕೆ ಮಂದಗತಿ. ಶುಭಸಂಖ್ಯೆ: 7
ಮಕರ: ಔಷಧ ಮಾರಾಟಗಾರರಿಗೆ ಆದಾಯ. ಹೆಚ್ಚು ಸಾಲ ಮಾಡುವುದು ಸಮಂಜಸವಲ್ಲ. ಸಾರಿಗೆ ಅಧಿಕಾರಿಗಳಿಂದ ತೊಂದರೆ. ಶುಭಸಂಖ್ಯೆ: 6
ಕುಂಭ: ಹೋಟೆಲ್ ಉದ್ಯಮಿಗಳಿಗೆ ಲಾಭವಾಗುವುದು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಿರೀಕ್ಷಿತ ಆದಾಯ. ಉದರ ಬಾಧೆ. ಶುಭಸಂಖ್ಯೆ: 2
ಮೀನ: ಉದ್ಯೋಗಾಕಾಂಕ್ಷಿಗಳಿಗೆ ಶುಭದಿನ. ವ್ಯವಹಾರದಲ್ಲಿ ಜಾಣ್ಮೆಯಿಂದ ಪ್ರಗತಿ. ವಾಹನ ಚಲಾಯಿಸುವಾಗ ವಿಶೇಷ ಎಚ್ಚರ ಅಗತ್ಯ. ಶುಭಸಂಖ್ಯೆ: 8