ಈ ರಾಶಿಯವರಿಗಿಂದು ಕೆಲವು ಸಮಸ್ಯೆಗಳಿಂದ ಮುಕ್ತಿ, ಹಣದ ಹರಿವು ನಿರೀಕ್ಷೆಯಷ್ಟು ಇರುತ್ತದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸೇವಾ ಕ್ಷೇತ್ರದವರಿಗೆ ಕೆಲಸದ ವಿಪರೀತ ಒತ್ತಡ. ಹಿತಶತ್ರುಗಳಿಂದ ಎಚ್ಚರ. ಹಣದ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುವಿರಿ. ಶುಭಸಂಖ್ಯೆ: 5

ವೃಷಭ: ಆದಾಯಕ್ಕಿಂತ ಖರ್ಚು ಹೆಚ್ಚು. ಸ್ನೇಹಿತರೊಂದಿಗೆ ಪ್ರಯಾಣ ಬೆಳೆಸುವಿರಿ. ಮೇಕಪ್ ವಸ್ತುಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 9

ಮಿಥುನ: ಅಧಿಕಾರಿಗಳ ವಿಶ್ವಾಸ ಗಳಿಸಿ ಕೆಲಸ ಮಾಡಿಸಿಕೊಳ್ಳುವಿರಿ. ಮಕ್ಕಳಿಗಾಗಿ ಯೋಜನೆ. ಉದ್ಯೋಗಾಕಾಂಕ್ಷಿಗಳ ಸಂದರ್ಶನದಲ್ಲಿ ಯಶ. ಶುಭಸಂಖ್ಯೆ: 6

ಕಟಕ: ತಂದೆಯೊಂದಿಗೆ ಮನಸ್ತಾಪವಾಗಬಹುದು. ದೃಢನಿರ್ಧಾರಗಳಿಂದ ಯಶಸ್ಸು. ವೃತ್ತಿಯ ಕಾರ್ಯ ಸಾಧನೆಯಿಂದ ಕೀರ್ತಿ. ಶುಭಸಂಖ್ಯೆ: 2

ಸಿಂಹ: ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಾಣಿಸುವುದು. ಕೆಲವು ಸಮಸ್ಯೆಗಳಿಂದ ಮುಕ್ತಿ. ಹಣದ ಹರಿವು ನಿರೀಕ್ಷೆಯಷ್ಟು ಇರುತ್ತದೆ. ಶುಭಸಂಖ್ಯೆ: 8

ಕನ್ಯಾ: ತಾಂತ್ರಿಕ, ವಾಣಿಜ್ಯ ವಿದ್ಯಾರ್ಥಿಗಳಿಗೆ ಖರ್ಚು. ಇಲಾಖೆಗಳಿಂದ ಕೃಷಿ ಕೆಲಸಕ್ಕೆ ಸಹಾಯ. ಲೋಹದ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 5

ತುಲಾ: ವಾಹನಗಳ ಬಿಡಿಭಾಗ ವ್ಯಾಪಾರದಲ್ಲಿ ಲಾಭ. ಲಲಿತ ಕಲಾವಿದ್ಯಾರ್ಥಿಗಳಿಗೆ ಶುಭ. ನಂಬಿಕೆಯಿಂದ ಕೆಲಸದಲ್ಲಿ ಗೆಲುವು. ಶುಭಸಂಖ್ಯೆ: 8

ವೃಶ್ಚಿಕ: ಲೇವಾದೇವಿಯಲ್ಲಿ ಕಡಿಮೆ ಆದಾಯ. ಸಾಲ ಕೊಡುವಾಗ ಯೋಚಿಸಿ. ಕೋರ್ಟ್​ನಲ್ಲಿ ಹಿನ್ನಡೆ. ಭಯದ ನಿರ್ಧಾರದಿಂದ ನಷ್ಟ. ಶುಭಸಂಖ್ಯೆ: 3

ಧನಸ್ಸು: ಕೈಮಗ್ಗ ವ್ಯಾಪಾರದಲ್ಲಿ ಆದಾಯ. ನಿರೀಕ್ಷೆಯಂತೆ ವರ್ಗಾವಣೆ ಸಂಭವ. ಸಮಾಜಸೇವಾಸಕ್ತಿ. ರಾಜಕಾರಣಿಗಳಿಗೆ ಗೊಂದಲ. ಶುಭಸಂಖ್ಯೆ: 3

ಮಕರ: ಕೆಮ್ಮು ಕಫಗಳಿಂದ ಎಚ್ಚರವಹಿಸಿ. ಉದ್ಯೋಗ ಸ್ಥಳದಲ್ಲಿ ಸಾಲ ಮಾಡುವಿರಿ. ಹಿರಿಯರಿಂದ ನೆರವು. ವಾಹನ ದುರಸ್ತಿಗೆ ಖರ್ಚು. ಶುಭಸಂಖ್ಯೆ: 6

ಕುಂಭ: ಅಹಂಭಾವದಿಂದ ದಾಂಪತ್ಯದಲ್ಲಿ ತೊಂದರೆ ಯಾದೀತು. ಉಳಿತಾಯದ ವಿಚಾರದಲ್ಲಿ ಎಚ್ಚರ ವಿರಲಿ. ವಿದ್ಯಾರ್ಥಿಗಳಿಗೆ ಹಿನ್ನಡೆ. ಶುಭಸಂಖ್ಯೆ: 3

ಮೀನ: ಸ್ವಂತ ವ್ಯಾಪಾರದಲ್ಲಿ ಲಾಭವಾಗುವುದು. ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನಡೆಯಾಗುವುದು. ಬಂಧುಗಳೊಂದಿಗೆ ಭಿನ್ನಾಭಿಪ್ರಾಯ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net