ನಿತ್ಯಭವಿಷ್ಯ: ಈ ರಾಶಿಯವರಿಗಿಂದು ನಿರೀಕ್ಷೆಗಿಂತ ಹೆಚ್ಚು ಆದಾಯ ಬರಲಿದೆ

Nitya Bhavisya Vijayavani
Published on

ಮೇಷ: ಕೃಷಿಕರಿಗೆ ನಿರೀಕ್ಷಿತ ಲಾಭ ದೊರೆತು ಸಂತಸ. ವಿದ್ಯಾರ್ಥಿಗಳಿಗೆ ಮಿಶ್ರಫಲದ ದಿನ. ಪ್ರವಾಸೋದ್ಯಮ ದಲ್ಲಿ ಅವಕಾಶ ಸಿಗಲಿದೆ. ಶುಭಸಂಖ್ಯೆ: 5

ವೃಷಭ: ಉದ್ಯೋಗ ಬದಲಾವಣೆಯ ಯೋಗ. ರಾಜಕಾರಣಿಗಳಿಗೆ ಜವಾಬ್ದಾರಿ ಹೆಚ್ಚಾಗಲಿದೆ. ವಿದ್ಯುತ್ ಉಪಕರಣಗಳಿಂದ ದೂರವಿರಿ. ಶುಭಸಂಖ್ಯೆ:6

ಮಿಥುನ: ವಾಹನ ಚಾಲಕರಿಗೆ ಉತ್ತಮ ಆದಾಯ. ಕಂಪ್ಯೂಟರ್ ಮಾರಾಟದಲ್ಲಿ, ಪಾರಂಪರಿಕ ವಸ್ತುಗಳ ವ್ಯವಹಾರದಲ್ಲಿ ಆದಾಯ. ಶುಭಸಂಖ್ಯೆ:8

ಕಟಕ: ಯಂತ್ರೋಪಕರಣಗಳಿಂದ ತೊಂದರೆ. ತೈಲ ವ್ಯಾಪಾರದಲ್ಲಿ ಲಾಭ. ಹಠ ಕಡಿಮೆ ಮಾಡುವುದು ಎಲ್ಲ ರೀತಿಯಿಂದ ಒಳ್ಳೆಯದು. ಶುಭಸಂಖ್ಯೆ:1

ಸಿಂಹ: ತೀರ್ಥಕ್ಷೇತ್ರಗಳಿಗೆ ಪ್ರಯಾಣ. ಮರಗೆಲಸದವರಿಗೆ ಉತ್ತಮ ಲಾಭ. ಮಾನಸಿಕ ನೆಮ್ಮದಿ. ಉಪನ್ಯಾಸಕ ವೃತ್ತಿ ಜೀವನದ ಅಭಿವೃದ್ದಿ. ಶುಭಸಂಖ್ಯೆ:8

ಕನ್ಯಾ: ವಿವಾಹಾಕಾಂಕ್ಷಿಗಳಿಗೆ ಶುಭದಾಯಕ ದಿನ. ಮಕ್ಕಳಿಂದ ಮನಸ್ಸಿಗೆ ಕಿರಿಕಿರಿಯಾಗಬಹುದು. ತಾಂತ್ರಿಕ ಪರಿಣಿತರಿಗೆ ಉನ್ನತಿ. ಶುಭಸಂಖ್ಯೆ:2

ತುಲಾ: ಕೃಷಿ ಕಾರ್ಯಗಳಲ್ಲಿ ವಿಳಂಬ. ಮಂಗಳ ಕಾರ್ಯಗಳ ಸಿದ್ಧತೆ. ಕೃಷಿ ಕಾರ್ವಿುಕರಿಗೆ ಲಾಭ. ಪರಿಹಾರಕ್ಕಾಗಿ ಗಣಪತಿಗೆ ಗರಿಕೆ ಸಲ್ಲಿಸಿ. ಶುಭಸಂಖ್ಯೆ: 6

ವೃಶ್ಚಿಕ: ವಿವಾಹ ಸಂಬಂಧಿತ ಕಾರ್ಯದಲ್ಲಿ ವಿಘ್ನ. ಸರ್ಕಾರಿ ನೌಕರರಿಗೆ ಶುಭಸುದ್ದಿ ಬರಲಿದೆ. ಭೂ ಖರೀದಿ ಮತ್ತು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:7

ಧನುಸ್ಸು: ಷೇರು ಖರೀದಿಯಲ್ಲಿ ಅಧಿಕ ಲಾಭ. ದೈವ ಕಾರ್ಯ ಗಳಿಗಾಗಿ ಪ್ರಯಾಣ ಮಾಡುವಿರಿ. ಕ್ರೀಡಾಪಟುಗಳಿಗೆ ಅವಕಾಶಗಳು ಸಿಗುತ್ತವೆ. ಶುಭಸಂಖ್ಯೆ:2

ಮಕರ: ರಿಯಲ್ ಎಸ್ಟೇಟ್​ನಿಂದ ನಿರೀಕ್ಷೆಗಿಂತ ಹೆಚ್ಚು ಆದಾಯ ಬರಲಿದೆ. ಮನಸ್ಸಿನಲ್ಲಿ ಆತಂಕ. ನೂತನ ಕೆಲಸ ಪ್ರಾರಂಭಕ್ಕೆ ಸಕಾಲ. ಶುಭಸಂಖ್ಯೆ:8

ಕುಂಭ: ತಾಯಿಯ ಆರೋಗ್ಯದಲ್ಲಿ ಚೇತರಿಕೆಯಾಗಲಿದೆ. ವಿದ್ಯಾರ್ಥಿಗಳಿಗೆ ನಿರಾಸಕ್ತಿ ಕಾಡುವುದು. ರೈತರ ಬೆಳೆಗೆ ಹೆಚ್ಚಿನ ಆದಾಯ. ಶುಭಸಂಖ್ಯೆ:3

ಮೀನ: ರಾಜಕಾರಣಿಗಳಿಗೆ ಉನ್ನತ ಸ್ಥಾನ ದೊರೆಯುವುದು. ಶಾರೀರಿಕ ಪೀಡೆ ಕಾಡಬಹುದು. ಮನೆಯಲ್ಲಿ ಶುಭಕಾರ್ಯ ಜರುಗಲಿದೆ. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net