ಈ ರಾಶಿಯವರಿಗಿಂದು ಸುಖ ಭೋಜನ ಪ್ರಾಪ್ತಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸ್ತ್ರೀಯರಿಗೆ ಅನುಕೂಲ. ಕೆಲಸ ಕಾರ್ಯಗಳಲ್ಲಿ ಜಯ. ಉದ್ಯೋಗದಲ್ಲಿ ಬಡ್ತಿ. ಸುಖ ಭೋಜನ ಪ್ರಾಪ್ತಿ. ಮಾನಸಿಕ ನೆಮ್ಮದಿ. ಶುಭಸಂಖ್ಯೆ: 5

ವೃಷಭ: ವಿಪರೀತ ಖರ್ಚು ಆಗುವುದು. ಕೆಲಸ ಕಾರ್ಯಗಳಲ್ಲಿ ಸಾಧನೆ. ಸ್ಥಳ ಬದಲಾವಣೆ. ಮನಃಕ್ಲೇಷ. ಕಿರು ತೆರೆ ನಟರಿಗೆ ಧನ ಲಾಭ. ಶುಭಸಂಖ್ಯೆ: 8

ಮಿಥುನ: ಸ್ನೇಹಿತರಿಂದ ಸಹಾಯ. ಅಧಿಕವಾದ ತಿರುಗಾಟ. ಋಣವಿಮೋಚನೆ. ನಾನಾ ರೀತಿಯ ಸಂಪಾದನೆ. ವೈದ್ಯರಿಗೆ ವಿಪರೀತ ಶ್ರಮ. ಶುಭಸಂಖ್ಯೆ: 1

ಕಟಕ: ನಾನಾ ವಿಧದ ಅನುಕೂಲ. ಐಶ್ವರ್ಯ ವೃದ್ಧಿ. ಶತ್ರುನಾಶ. ಷೇರು ವ್ಯವಹಾರದಲ್ಲಿ ಎಚ್ಚರ. ಕುಟುಂಬ ಸೌಖ್ಯ. ದೇವರನ್ನು ಭಜಿಸಿ. ಶುಭಸಂಖ್ಯೆ: 9

ಸಿಂಹ: ಪ್ರಿಯ ಜನರ ಭೇಟಿ. ಮಂಗಳ ಕಾರ್ಯಗಳಲ್ಲಿ ಭಾಗಿ. ಸ್ಥಿರಾಸ್ತಿ ಮಾರಾಟಕ್ಕೆ ತೊಂದರೆ. ಆದಾಯಕ್ಕಿಂತ ಖರ್ಚು ಹೆಚ್ಚು. ಶುಭಸಂಖ್ಯೆ: 3

ಕನ್ಯಾ: ವ್ಯಾಸಂಗಕ್ಕೆ ತೊಂದರೆ. ದಾಯಾದಿಗಳ ಕಲಹ. ಇಲ್ಲ ಸಲ್ಲದ ಅಪವಾದ. ಯತ್ನ ಕಾರ್ಯದಲ್ಲಿ ಜಯ. ವ್ಯರ್ಥವಾಗಿ ಧನ ನಷ್ಟ. ಶುಭಸಂಖ್ಯೆ: 3

ತುಲಾ: ಸಾಧಾರಣ ಲಾಭವಿದೆ. ಆರೋಗ್ಯದಲ್ಲಿ ಚೇತರಿಕೆ. ವೃಥಾ ತಿರುಗಾಟ. ಆಟಗಾರರಿಗೆ ಸದವಕಾಶ. ಬಂಧುಗಳಲ್ಲಿ ಮನಸ್ತಾಪ. ಶುಭಸಂಖ್ಯೆ: 5

ವೃಶ್ಚಿಕ: ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ಪ್ರಗತಿ. ಸೇವಕರಿಂದ ತೊಂದರೆ. ಮಿತ್ರರಲ್ಲಿ ವಿರೋಧ. ಕೃಷಿಯಲ್ಲಿ ಅಲ್ಪ ಪ್ರಮಾಣದ ಲಾಭ. ಶುಭಸಂಖ್ಯೆ: 9

ಧನುಸ್ಸು: ಕುಟುಂಬದಲ್ಲಿ ಸೌಖ್ಯ. ವಿವಾಹ-ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಮಾನಸಿಕ ನೆಮ್ಮದಿ. ಸ್ವಲ್ಪ ಜಾಸ್ತಿ ಖರ್ಚಾಗುವುದು. ಶುಭಸಂಖ್ಯೆ: 2

ಮಕರ: ಮಿತ್ರರಲ್ಲಿ ವಿರೋಧ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದಲ್ಲಿ ವ್ಯತ್ಯಾಸ. ಪ್ರೀತಿ ಪ್ರೇಮ, ವಿವಾಹ ವಿಷಯದಲ್ಲಿ ಅಡೆತಡೆ. ಶುಭಸಂಖ್ಯೆ: 4

ಕುಂಭ: ಮಹಿಳೆಯರಿಗೆ ಶುಭ ಫಲ. ಚಂಚಲ ಮನಸ್ಸು. ಕೆಲಸ ಕಾರ್ಯಗಳಲ್ಲಿ ಎಚ್ಚರ. ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ. ಶುಭಸಂಖ್ಯೆ: 2

ಮೀನ: ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ದೃಷ್ಟಿ ದೋಷ ನಿವಾರಣೆ. ಗೆಳೆಯರಿಂದ ಅನರ್ಥ. ವಿದೇಶ ಪ್ರಯಾಣ, ವಿವಾಹ ಯೋಗ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net