ಈ ರಾಶಿಯವರಿಗಿಂದು ಪಾಲುಗಾರರಿಂದ ತೊಂದರೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ತಾಂತ್ರಿಕ ಕ್ಷೇತ್ರದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ. ಲೆಕ್ಕ ಪರಿಶೋಧಕರಿಗೆ ಹೆಚ್ಚಿದ ಆದಾಯ. ಶುಭಸಂಖ್ಯೆ: 9

ವೃಷಭ: ಜೇನು ಮತ್ತು ರೇಷ್ಮೆ ಕೃಷಿಕರಿಗೆ ಧನ ನಷ್ಟವಾದೀತು. ಉಪಕರಣಗಳ ಖರೀದಿಯಲ್ಲಿ ಮೋಸ ಹೋಗುವಿರಿ. ಪಿತ್ರಾರ್ಜಿತ ಆಸ್ತಿ ಕಲಹ. ಶುಭಸಂಖ್ಯೆ: 9

ಮಿಥುನ: ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆ. ಹಣದ ಖರ್ಚು. ಕುಟುಂಬದೊಂದಿಗೆ ವಿಹಾರ. ದಾಂಪತ್ಯದಲ್ಲಿ ಸಹನೆ ಅಗತ್ಯ. ಶುಭಸಂಖ್ಯೆ: 1

ಕಟಕ: ವಾಣಿಜ್ಯೋದ್ಯಮಿಗಳಿಗೆ ಪಾಲುಗಾರರಿಂದ ತೊಂದರೆ. ಕಾನೂನು ವಿದ್ಯಾರ್ಥಿಗಳಿಗೆ ಪ್ರಗತಿ. ಹೈನೋತ್ಪನ್ನ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 9

ಸಿಂಹ: ಮಕ್ಕಳ ಭವಿಷ್ಯದ ಚಿಂತೆ. ವಾಹನ ದುರಸ್ತಿಗೆ ಖರ್ಚು. ವಿಮಾನ ಪ್ರಯಾಣ ಸಾಧ್ಯತೆ. ಸಂಗೀತ ಕಲಾವಿದರಿಗೆ ವೇದಿಕೆ ಲಭ್ಯ. ಶುಭಸಂಖ್ಯೆ: 8

ಕನ್ಯಾ: ಪುಸ್ತಕ ವ್ಯಾಪಾರಿಗಳಿಗೆ ಲಾಭ. ಶಿಕ್ಷಕರಿಗೆ ವರ್ಗಾವಣೆ ಸಾಧ್ಯತೆ. ಆಸ್ತಿ ನೋಂದಣಿಗೆ ಹಲವು ಅಡೆತಡೆ. ದಿನಾಂತ್ಯದಲ್ಲಿ ಅಶುಭ ಸುದ್ದಿ. ಶುಭಸಂಖ್ಯೆ: 9

ತುಲಾ: ಆತ್ಮೀಯರ ವಿಯೋಗ. ವಿದ್ಯಾರ್ಥಿಗಳಿಗೆ ಶ್ರಮದ ಕೊರತೆ. ಕಲಾ ಕ್ಷೇತ್ರದಲ್ಲಿ ಪ್ರಗತಿ. ಕುಟುಂಬದೊಂದಿಗೆ ಪುಣ್ಯ ಕ್ಷೇತ್ರಕ್ಕೆ ಪ್ರಯಾಣ. ಶುಭಸಂಖ್ಯೆ: 5

ವೃಶ್ಚಿಕ: ದೇವಸ್ಥಾನದ ಧರ್ಮದರ್ಶಿಗಳಿಗೆ ವಿಶೇಷ ಸನ್ಮಾನ. ನೂತನ ದಂಪತಿಗಳಿಗೆ ಶುಭ ಸುದ್ದಿ. ಕುಲದೇವರ ಸ್ಮರಣೆಯಿಂದ ನೆಮ್ಮದಿ. ಶುಭಸಂಖ್ಯೆ: 6

ಧನಸ್ಸು: ಉನ್ನತ ಶಿಕ್ಷಣಕ್ಕೆ ವಿದೇಶದಲ್ಲಿ ಅವಕಾಶ. ಮಗಳ ವಿವಾಹ ಯತ್ನದಲ್ಲಿ ನಿರಾಸೆ. ರಾಸಾಯನಿಕ ವಸ್ತುಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 8

ಮಕರ: ಪಾಲುದಾರರೊಂದಿಗೆ ಮನಸ್ತಾಪ. ಸ್ನೇಹಿತರೊಂದಿಗೆ ವಾಗ್ವಾದ. ಪ್ರಭಾವಿ ವ್ಯಕ್ತಿಗಳ ನೆರವಿನಿಂದ ಕಾರ್ಯಸಾಧನೆಯಾಗಲಿದೆ. ಶುಭಸಂಖ್ಯೆ: 9

ಕುಂಭ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ಅಲಂಕಾರಿಕ ವಸ್ತು ಖರೀದಿ. ಆನ್​ಲೈನ್ ವ್ಯವಹಾರ ದಲ್ಲಿ ಮೋಸ ಹೋಗುವಿರಿ. ಎಚ್ಚರ. ಶುಭಸಂಖ್ಯೆ: 3

ಮೀನ: ಮಕ್ಕಳ ಪ್ರಗತಿಯಿಂದ ಸಂತೋಷ. ಬಂಧು ಬಾಂಧವರೊಂದಿಗೆ ಮನಸ್ತಾಪ. ಮಾಟ, ಮಂತ್ರ ಪ್ರಯೋಗದ ಭಯ ಕಾಡಲಿದೆ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net