

ಮೇಷ: ಶಿಕ್ಷಕಿಯರಿಗೆ ಬಡ್ತಿ ದೊರೆಯುವುದು. ರಾಜಕಾರಣಿ ಗಳಿಗೆ ಶುಭದಿನವಲ್ಲ. ಶಾಲಾ ಸಂಸ್ಥಾಪಕರಿಗೆ ಪುರಸ್ಕಾರ ದೊರೆತು ಸಂತಸ. ಶುಭಸಂಖ್ಯೆ: 3
ವೃಷಭ: ಸರ್ಕಾರಿ ನೌಕರರಿಗೆ ತೊಂದರೆ, ಸ್ಟಾಕ್ಸ್, ಷೇರು ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ. ನೀರಿಗೆ ಸಂಬಂಧಿಸಿದ ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 5
ಮಿಥುನ: ಕುಟುಂಬದಲ್ಲಿ ಕಿರಿಕಿರಿಯ ವಾತಾವರಣ. ವಿದ್ಯಾರ್ಥಿಗಳು ಹೆಚ್ಚು ಶ್ರಮವಹಿಸಲೇಬೇಕು. ಶಿಕ್ಷಕ ವೃಂದದವರಿಗೆ ಶುಭದಿನ. ಶುಭಸಂಖ್ಯೆ: 8
ಕಟಕ: ಷೇರು, ಲಾಟರಿ ವ್ಯವಹಾರದಲ್ಲಿ ನಷ್ಟ. ಕಾರ್ಯಗಳಿಗೆ ಸರ್ಕಾರದಿಂದ ಅಸಹಕಾರ. ಕಮಿಷನ್ ಆಧಾರಿತ ವೃತ್ತಿಯಲ್ಲಿ ಆದಾಯ. ಶುಭಸಂಖ್ಯೆ: 1
ಸಿಂಹ: ಆಹಾರಕ್ಕೆ ಸಂಬಂಧಿಸಿದ ವ್ಯಾಪಾರ ಅಬಾಧಿತ. ಹಿರಿಯರ ಆರೋಗ್ಯದಲ್ಲಿ ತೊಂದರೆಯಾದೀತು. ಪತ್ನಿಯೊಂದಿಗೆ ಕಲಹ ಬೇಡ. ಶುಭಸಂಖ್ಯೆ: 6
ಕನ್ಯಾ: ರಾಜಕಾರಣಿಗಳಿಗೆ ವಿದೇಶ ಪ್ರವಾಸ ಯೋಗ. ಉದ್ಯೋಗಸ್ಥ ಮಹಿಳೆಯರಿಗೆ ಶುಭದಾಯಕ ದಿನ. ತೋಟಗಾರಿಕೆಯಲ್ಲಿ ಆದಾಯ. ಶುಭಸಂಖ್ಯೆ: 4
ತುಲಾ: ಸ್ತ್ರೀಯರಿಗೆ ವಸ್ತ್ರ ವಿನ್ಯಾಸದಲ್ಲಿ ಧನಲಾಭವಾಗಲಿದೆ. ಪಾಲುದಾರಿಕೆಯಲ್ಲಿ ಅನಿರೀಕ್ಷಿತ ಆದಾಯ. ಕಣ್ಣಿನ ಸಮಸ್ಯೆ ಕಾಡಲಿದೆ. ಶುಭಸಂಖ್ಯೆ: 3
ವೃಶ್ಚಿಕ: ಉಳಿತಾಯ ಯೋಜನೆಯ ನಿರೀಕ್ಷಿತ ಲಾಭ ಕೈಸೇರಲಿದೆ. ಅಧಿಕ ಖರ್ಚು ಮಾಡಬೇಕಾಗುವುದು. ದುಡುಕುತನದ ಮಾತು ಬೇಡ. ಶುಭಸಂಖ್ಯೆ: 7
ಧನಸ್ಸು: ಸಿವಿಲ್ ಇಂಜಿನಿಯರ್ಗಳ ಆದಾಯದಲ್ಲಿ ಏರುಪೇರು. ಅನಿರೀಕ್ಷಿತ ಧನ ಲಾಭವಾಗಿ ಸಂತಸ. ಯಂತ್ರೋಪಕರಣದಿಂದ ಲಾಭ. ಶುಭಸಂಖ್ಯೆ: 5
ಮಕರ: ಕಂಪ್ಯೂಟರ್ ವ್ಯಾಪಾರದಲ್ಲಿ ಉತ್ತಮ ಗಳಿಕೆ. ಸರ್ಕಾರಿ ಅಧಿಕಾರಿಗಳಿಗೆ ತೊಂದರೆ ಸಾಧ್ಯತೆ. ವಾಣಿಜ್ಯೋ ದ್ಯಮಿಗಳಿಗೆ ವಿಶೇಷ ದಿನ. ಶುಭಸಂಖ್ಯೆ: 9
ಕುಂಭ: ಶಿಕ್ಷಣ ಸಂಸ್ಥೆಯವರಿಗೆ ಆದಾಯ ಹೆಚ್ಚಳ. ವಾಹನ ಚಲಾಯಿಸುವಲ್ಲಿ ಎಚ್ಚರ ಅಗತ್ಯ. ಯಾಂತ್ರಿಕ ವಸ್ತುಗಳನ್ನು ಖರೀದಿಸುವಿರಿ. ಶುಭಸಂಖ್ಯೆ: 4
ಮೀನ: ಆತ್ಮಸ್ಥೈರ್ಯದ ಕೊರತೆಯಿಂದ ಅವಕಾಶ ವಂಚಿತರಾಗುವಿರಿ. ದುಡುಕಿನ ಮಾತು ನಿಯಂತ್ರಿಸಿ. ದೃಢ ತೀರ್ವನದಲ್ಲಿ ವಿಫಲ. ಶುಭಸಂಖ್ಯೆ: 1