ಈ ರಾಶಿಯವರಿಗಿಂದು ಮಾಡುವ ಉದ್ಯೋಗದಲ್ಲಿ ಬದಲಾವಣೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಾತಿನಲ್ಲಿ ಕಠಿಣತೆ. ಅಲಂಕಾರಿಕ ವಸ್ತುಗಳ ಮಾರಾಟಸ್ಥರಿಗೆ ಆದಾಯ. ಪಶು ಆಹಾರ ತಯಾರಕರಿಗೆ ವಿಶೇಷ ಆದಾಯ. ಶುಭಸಂಖ್ಯೆ: 5

ವೃಷಭ: ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ಪ್ರವಾಸ ಕೈಗೊಳ್ಳುವಿರಿ. ದೃಢ ತೀರ್ಮಾನ ತೆಗೆದುಕೊಳ್ಳಲು ಹಿಂಜರಿಯಬೇಡಿ. ಶುಭಸಂಖ್ಯೆ: 9

ಮಿಥುನ: ಮಾಡುವ ಉದ್ಯೋಗದಲ್ಲಿ ಬದಲಾವಣೆ ಆಗಲಿದೆ. ರಾಜಕೀಯ ಪ್ರವೇಶಕ್ಕೆ ಇದು ಸುಸಮಯ. ವಕೀಲರಿಗೆ ಲಾಭ ಬರಲಿದೆ. ಶುಭಸಂಖ್ಯೆ: 3

ಕಟಕ: ವಿಮಾನ ನಿಲ್ದಾಣದ ಕೆಲಸಗಾರರಿಗೆ ಧನಾಗಮನ. ಸೌಂದರ್ಯವರ್ಧಕ ವ್ಯಾಪಾರದಲ್ಲಿ ಮಂದಗತಿ. ಸರ್ಕಾರಿ ಕೆಲಸದಲ್ಲಿ ಯಶ. ಶುಭಸಂಖ್ಯೆ: 3

ಸಿಂಹ: ವಿವಾಹಾಕಾಂಕ್ಷಿಗಳಿಗೆ ಶುಭ ಫಲ. ಆಸ್ತಿ ಖರೀದಿಗೆ ಇದು ಸಕಾಲವಲ್ಲ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು ದೊರೆತು ಸಂತಸ. ಶುಭಸಂಖ್ಯೆ: 6

ಕನ್ಯಾ: ವ್ಯಾಪಾರ ಒಪ್ಪಂದಗಳನ್ನು ಕೆಲ ದಿನಗಳ ಮಟ್ಟಿಗೆ ಮುಂದೂಡಿ. ಹಿತ ಶತ್ರುಗಳ ಬಾಧೆ ಕಾಡಲಿದೆ. ಕುಟುಂಬದಲ್ಲಿ ಸಮಾಧಾನ. ಶುಭಸಂಖ್ಯೆ: 9

ತುಲಾ: ಮನಸ್ಸಿನಲ್ಲಿ ವ್ಯಾಕುಲತೆ ಇರಲಿದೆ. ಆರ್ಥಿಕ ಪ್ರಗತಿ ಯಲ್ಲಿ ಇಳಿಮುಖವಾಗುವುದು. ಗಣ್ಯ ಅಧಿಕಾರಿಗಳ ಭೇಟಿಯಿಂದ ವಿಶೇಷ ಲಾಭ. ಶುಭಸಂಖ್ಯೆ: 4

ವೃಶ್ಚಿಕ: ಗೃಹ ನಿರ್ವಣದ ಬಗ್ಗೆ ಯೋಚನೆ ಮಾಡುವಿರಿ. ಹೈನು ವ್ಯಾಪಾರದಲ್ಲಿ ಹಿನ್ನಡೆ ಸಾಧ್ಯತೆ. ಪಾಲುದಾರಿಕೆ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 1

ಧನುಸ್ಸು: ಪುಸ್ತಕದ ವ್ಯಾಪಾರಿಗಳಿಗೆ ಕೆಲಸಗಾರರ ಸಮಸ್ಯೆ. ಶ್ರಮ ಹೆಚ್ಚಾಗಲಿದೆ. ಆಪ್ತರು ದೂರವಾಗುತ್ತಾರೆ. ವೃತ್ತಿಯಲ್ಲಿ ಶುಭದಾಯಕ ದಿನ. ಶುಭಸಂಖ್ಯೆ: 4

ಮಕರ: ಮಕ್ಕಳ ಆರೋಗ್ಯದ ಬಗ್ಗೆ ಚಿಂತೆಯಾಗುವುದು. ಬಂಧುಗಳಿಂದ ತೊಂದರೆಯ ಸಾಧ್ಯತೆ. ಔಷಧಿ ವ್ಯಾಪಾರದಲ್ಲಿ ಇಳಿಮುಖ. ಶುಭಸಂಖ್ಯೆ: 3

ಕುಂಭ: ಕೃಷಿಕರಿಗೆ ಪ್ರಗತಿದಾಯಕ ದಿನ. ಗುರುಹಿರಿಯರಿಂದ ಸಹಾಯ, ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಿ. ವಿದ್ಯಾರ್ಥಿಗಳಿಗೆ ಶುಭ. ಶುಭಸಂಖ್ಯೆ: 7

ಮೀನ: ಮಕ್ಕಳ ವಿದ್ಯಾಭ್ಯಾಸದತ್ತ ಹೆಚ್ಚಿನ ಗಮನಹರಿಸಿ. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಆಸ್ತಿ ಸಂಬಂಧೀ ವಿಚಾರದಲ್ಲಿ ಗೊಂದಲ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net