ಈ ರಾಶಿಯವರಿಗಿಂದು ಮಿತ್ರರಿಂದ ಕೆಡುಕು ಸಾಧ್ಯತೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಧ್ಯವರ್ತಿಗಳಿಗೆ ನಿರೀಕ್ಷಿತ ಆದಾಯ. ನಿವೇಶನ ಮಾರಾಟದಲ್ಲಿ ಉತ್ತಮ ಪ್ರಗತಿ. ಕಚೇರಿಯಲ್ಲಿ ಸ್ತ್ರೀಯರು ತಾಳ್ಮೆಯಿಂದ ಇರಿ. ಶುಭಸಂಖ್ಯೆ: 1

ವೃಷಭ: ಆತ್ಮೀಯರ ಭೇಟಿಯಾಗಿ ಉಭಯ ಕುಶಲೋಪರಿ. ಬಾಕಿ ವಸೂಲಿ. ಅಪರಿಚಿತರಿಂದ ತೊಂದರೆಯಾಗುವ ಸಾಧ್ಯತೆ, ಹುಷಾರು. ಶುಭಸಂಖ್ಯೆ: 9

ಮಿಥುನ: ಕಾರ್ಯದಲ್ಲಿ ವಿಳಂಬವಾದರೂ ಯಶ. ವಿನಾಕಾರಣ ದ್ವೇಷ ಎದುರಿಸುವಿರಿ. ಒತ್ತಡದಿಂದಲೇ ವ್ಯಾಪಾರವನ್ನು ನಿಭಾಯಿಸುವಿರಿ. ಶುಭಸಂಖ್ಯೆ: 9

ಕಟಕ: ಕುಟುಂಬದಲ್ಲಿ ಸಲ್ಲದ ಅಪವಾದ. ಅತಿಯಾದ ನಿದ್ರೆ. ಉದರ ಸಂಬಂಧಿ ರೋಗ. ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು. ಶುಭಸಂಖ್ಯೆ: 6

ಸಿಂಹ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ. ಅನ್ಯರಿಂದ ಸಹಾಯ. ಕುಟುಂಬದಲ್ಲಿ ಪ್ರೀತಿ. ಗಾಯಕರು, ವಾದಕರಿಗೆ ಸೂಕ್ತ ವೇದಿಕೆ ಲಭ್ಯ. ಶುಭಸಂಖ್ಯೆ: 1

ಕನ್ಯಾ: ಅನಗತ್ಯ ಖರ್ಚು. ಅಧಿಕ ಕೆಲಸಗಳಿಂದ ವಿಶ್ರಾಂತಿ. ಇತರರ ಮಾತಿಗೆ ಮರುಳಾಗಬೇಡಿ. ಆನ್​ಲೈನ್ ವಹಿವಾಟಿನಲ್ಲಿ ಮೋಸ. ಶುಭಸಂಖ್ಯೆ: 4

ತುಲಾ: ದಾಂಪತ್ಯದಲ್ಲಿ ಬಿರುಕು. ಕೋಪ ಅನರ್ಥಕ್ಕೆ ಕಾರಣವಾದೀತು. ಸೌಜನ್ಯದಿಂದ ವರ್ತಿಸಿ. ಮಾಡುವ ಕೆಲಸದಲ್ಲಿ ಹಿಂಜರಿಕೆ ಬೇಡ. ಶುಭಸಂಖ್ಯೆ: 1

ವೃಶ್ಚಿಕ: ಉದ್ಯೋಗದಲ್ಲಿ ಬಡ್ತಿ. ಪ್ರಿಯ ಜನರ ಭೇಟಿಯಾಗುವುದು. ಶರೀರದಲ್ಲಿ ತಳಮಳ. ಭೂ ಲಾಭ. ಮಾತಿನ ಮೇಲೆ ನಿಗಾ ವಹಿಸಿ. ಶುಭಸಂಖ್ಯೆ: 5

ಧನಸ್ಸು: ಬಣ್ಣದ ಮಾತಿಗೆ ಮರುಳಾಗುವಿರಿ. ಪುಣ್ಯಕ್ಷೇತ್ರ ದರ್ಶನ. ಮಿತ್ರರಿಂದ ಕೆಡುಕು ಸಾಧ್ಯತೆ. ದಿನಸಿ ವ್ಯಾಪಾರದಲ್ಲಿ ಸಾಧಾರಣ ಫಲ. ಶುಭಸಂಖ್ಯೆ: 1

ಮಕರ: ಹಣ ಉಳಿಯುವದಿಲ್ಲ. ಔಷಧ ವ್ಯಾಪಾರಿಗಳಿಗೆ ಉತ್ತಮ ಲಾಭ. ಅನಾರೋಗ್ಯ. ವಿಚ್ಛೇದಿತರಿಗೆ ದ್ವಿತೀಯ ವಿವಾಹ ಸಾಧ್ಯತೆ. ಶುಭಸಂಖ್ಯೆ: 7

ಕುಂಭ: ಮಾನಸಿಕ ಒತ್ತಡವನ್ನು ನಿಯಂತ್ರಿಸಿಕೊಳ್ಳಿ. ಆಲಸ್ಯ ಮನೋಭಾವದಿಂದ ಹೊರಬನ್ನಿ. ಕಾರ್ಯ ಸಾಧನೆ. ದುಡುಕು ಸ್ವಭಾವ. ಶುಭಸಂಖ್ಯೆ: 2

ಮೀನ: ವ್ಯಾಪಾರದಲ್ಲಿ ಕಲಹ. ನೆಮ್ಮದಿ ಇರದು. ಹೊರ ರಾಜ್ಯಕ್ಕೆ ಪ್ರಯಾಣ. ಆರೋಗ್ಯದ ಸಮಸ್ಯೆ. ವಿದ್ಯಾರ್ಥಿಗಳಲ್ಲಿ ಗೊಂದಲ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net