ಭೀಮ ಸಿನಿಮಾ ಇಂಪ್ಯಾಕ್ಟ್​; ಡ್ರಗ್ಸ್​ ದಂಧೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪೊಲೀಸ್​ ಆಯುಕ್ತರಿಗೆ ಪತ್ರ

Duniya Vijay
Published on

ಬೆಂಗಳೂರು: ಸ್ಯಾಂಡಲ್​ವುಡ್​ ಸಲಗ ದುನಿಯಾ ವಿಜಯ್​ ನಟಿಸಿ, ನಿರ್ದೇಶಿಸಿರುವ ಭೀಮ ಚಿತ್ರವು ಬಿಡುಗಡೆಯಾಗಿ ಎರಡು ವಾರಗಳಾಗಿದ್ದು, ಭರ್ಜರಿ ರೆಸ್ಪಾನ್ಸ್​ ಪಡೆಯುತ್ತಿದೆ. ಈಗಲೂ ಚಿತ್ರ ಹಲವೆಡೆ ಹೌಸ್​​ಫುಲ್​ ಪ್ರದರ್ಶನ ಕಾಣುತ್ತಿದ್ದು, ಸ್ಯಾಂಡಲ್​ವುಡ್​ಗೆ ಈ ಚಿತ್ರ ಅಲ್ಪ ಚೇತರಿಕೆ ನೀಡಿದೆ ಎಂದರೆ ತಪ್ಪಾಗಲಾರದು.

ಭೀಮ ಚಿತ್ರದಲ್ಲಿ ಡ್ರಗ್ಸ್​ ದಂಧೆ ಬಗ್ಗೆ ಬೆಳಕು ಚೆಲ್ಲಿದ್ದ ನಟ ದುನಿಯಾ ವಿಜಯ್​ ಯುವ ಪೀಳಿಗೆ ಈ ಮಾರಕ ಅಭ್ಯಾಸಕ್ಕೆ ಹೇಗೆ ಬಲಿಯಾಗುತ್ತಿದೆ ಎಂಬುದರ ಕುರಿತು ಸಂದೇಶ ನೀಡಿದ್ದರು. ಇದಲ್ಲದೆ ಖಾಸಗಿ ಸುದ್ದಿ ವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ಕೆಲವು ಸ್ಥಳಗಳನ್ನು ಸಹ ತೋರಿಸಿದ್ದರು, ಇದರಿಂದ ಪ್ರಭಾವಿತರಾಗಿರುವ ವ್ಯಕ್ತಿಯೊಬ್ಬರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಪೊಲೀಸ್​ ಆಯುಕ್ತರಿಗೆ ದೂರು ನೀಡಿದ್ದಾರೆ.

ವಕೀಲರಾದ ನಾರಾಯಣಸ್ವಾಮಿ ಎಂಬುವವರು ನಗರ ಪೊಲೀಸ್​ ಆಯುಕ್ತರಿಗೆ ಈ ಬಗ್ಗೆ ಪತ್ರದ ಮೂಲಕ ದೂರು ನೀಡಿದ್ದು, ಡ್ರಗ್ಸ್​ ಮಾಫಿಯಾ ವಿರುದ್ದ ಕ್ರಮಕೈಗೊಳ್ಳಲು ಆಗ್ರಹಿಸಿದ್ದಾರೆ. ಸಿನಿಮಾದಲ್ಲಿ ಡ್ರಗ್ಸ್​ ಬಗ್ಗೆ ಮಾಹಿತಿ ನೀಡಲಾಗಿದ್ದು, ಅದನ್ನು ಆಧರಿಸಿ ಕ್ರಮ ಕೈಗೊಳ್ಳಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Bheema

ಪತ್ರದಲ್ಲೇನಿದೆ

ಇತ್ತೀಚಿನ ದಿನಗಳಲ್ಲಿ ಕನ್ನಡದ "ಭೀಮ" ಎಂಬ ಚಲನಚಿತ್ರದಲ್ಲಿ ಡ್ರಗ್ ಮಾಫಿಯಾ ಬಗ್ಗೆ ವಿವರವಾಗಿ ಒಂದು ಚಲನಚಿತ್ರವನ್ನು ನಿರ್ಮಾಣ ಮಾಡಿ ಆ ಚಿತ್ರವು ಬಹಳ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಹಾಗೂ ಅದರಲ್ಲಿ ಡ್ರಗ್ ವಿಚಾರವಾಗಿ ಯುವಕರು ಯಾವ ರೀತಿಯಲ್ಲಿ ಹಾಳಾಗುತ್ತಿದ್ದಾರೆ ಎಂಬುದಾಗಿ ತೋರಿಸಲಾಗಿದೆ. ಚಿತ್ರದ ನಾಯಕ ನಟ, ದುನಿಯಾ ವಿಜಯ್ ರವರು, ಡ್ರಗ್ ಮಾಫಿಯಾದ ಅಸಲಿ ಮುಖವನ್ನು ಸಾರ್ವಜನಿಕರ ಗಮನಕ್ಕೆ ತಂದಿದ್ದಾರೆ.

ಆದಕಾರಣ ಸಾರ್ವಜನಿಕವಾಗಿ ಅದರ ಬಗ್ಗೆ, ಬಹಳ ಚರ್ಚೆ ಪ್ರಾರಂಭವಾಗಿದೆ ನಾಯಕ ನಟರಾದ ವಿಜಯ್ ಕುಮಾರ್ ರವರು ಸೆಂಟ್ರಲ್ ಕ್ರೈಂ ಬ್ರಾಂಚ್ ಚಾಮರಾಜಪೇಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಡ್ರಗ್ ಸೇವನೆ ಮಾಡಿ ಕೆಲವು ತ್ಯಾಜ್ಯ ವಸ್ತುಗಳನ್ನು ಬಿಸಾಕಿರುವುದರ ಬಗ್ಗೆ, ಹಾಗೂ ಸಿರಂಜ್ ಬಿಸಾಕಿರುವುದರ ಬಗ್ಗೆ, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ತೋರಿಸಿರುವುದನ್ನು ನಾವು ನೀವೆಲ್ಲರೂ ಕಂಡಿದ್ದೇವೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net