

ಮೇಷ: ರಾಜಕಾರಣಿಗಳಿಗೆ ಬಿಡುವಿಲ್ಲದ ಕಾರ್ಯಕ್ರಮಗಳು. ಉದ್ಯೋಗದಲ್ಲಿ ಬಡ್ತಿ. ಸುಖ ಭೋಜನ. ವಾಹನದಿಂದ ತೊಂದರೆ. ಶುಭಸಂಖ್ಯೆ: 1
ವೃಷಭ: ಮನೆಯಲ್ಲಿ ಸಂತಸದ ವಾತಾವರಣ. ನೀಚ ಜನರ ಸಹವಾಸದಿಂದ ಧನ ಹಾನಿಯಾದೀತು. ಸರ್ಕಾರಿ ಕೆಲಸಗಳಲ್ಲಿ ವಿಳಂಬ. ಶುಭಸಂಖ್ಯೆ: 9
ಮಿಥುನ: ಬಂಧುಗಳಿಂದ ಹಿತವಚನ ಕೇಳಿಸಿಕೊಳ್ಳಿ. ಚಿನ್ನ ಬೆಳ್ಳಿ ಉದ್ಯಮದಲ್ಲಿ ಪ್ರಗತಿ. ಉದರಬಾಧೆ. ಸ್ತ್ರೀಯರಿಗೆ ಮನಸ್ಸಿನಲ್ಲಿ ದುಗುಡ. ಶುಭಸಂಖ್ಯೆ: 5
ಕಟಕ: ಮಾತಿನಿಂದ ಅನರ್ಥವಾಗಬಹುದು. ಅತಿಯಾದ ಕೋಪ ಒಳ್ಳೆಯದಲ್ಲ. ಮಿತ್ರರು ಶತ್ರುಗಳಾಗುವರು. ದಾಂಪತ್ಯದಲ್ಲಿ ವಿರಸ. ಶುಭಸಂಖ್ಯೆ: 8
ಸಿಂಹ: ಭೂ ವ್ಯವಹಾರಗಳಲ್ಲಿ ಎಚ್ಚರ. ಸಕಾಲಕ್ಕೆ ಅನಿರೀಕ್ಷಿತ ಸಹಾಯ ಒದಗಿ ಬರಲಿದೆ. ಕೃಷಿಕರಿಗೆ ಉತ್ತಮ ಲಾಭ ಬಂದು ನೆಮ್ಮದಿ. ಶುಭಸಂಖ್ಯೆ: 7
ಕನ್ಯಾ: ಉದ್ಯೋಗ ಅಸ್ಥಿರತೆಯ ಭಯ. ಅವಸರದ ತೀರ್ಮಾನ ಬೇಡ. ಪ್ರಭಾವಿ ವ್ಯಕ್ತಿಗಳ ಭೇಟಿ. ಮಾತಾಪಿತರ ಸೇವೆಯಿಂದ ಶಾಂತಿ. ಶುಭಸಂಖ್ಯೆ: 3
ತುಲಾ: ಶೈಕ್ಷಣಿಕ ಕಾರ್ಯಕ್ಷೇತ್ರದಲ್ಲಿ ವಿಶೇಷ ಸಾಧನೆ. ವಿವಾಹ ಯೋಗವಿದೆ. ಸಾಲ ಮಾಡುವ ಸಂಭವ. ನಾನಾ ರೀತಿಯ ತೊಂದರೆ. ಶುಭಸಂಖ್ಯೆ: 4
ವೃಶ್ಚಿಕ: ಪರರ ಕಷ್ಟಕ್ಕೆ ಸ್ಪಂದಿಸುವಿರಿ. ಮಧ್ಯಸ್ಥಿಕೆಯಿಂದ ಲಾಭ ಬರುವುದು. ಸ್ನೇಹಿತರ ಭೇಟಿ. ವಿನಾಕಾರಣ ಸಹೋದರರೊಂದಿಗೆ ದ್ವೇಷ. ಶುಭಸಂಖ್ಯೆ: 2
ಧನುಸ್ಸು: ಆಹಾರ ಪದಾರ್ಥ ವ್ಯಾಪಾರದಲ್ಲಿ ಆದಾಯ. ಗೃಹ ನಿರ್ವಣಕ್ಕೆ ಅಧಿಕ ಖರ್ಚು. ಕೆಟ್ಟ ಆಲೋಚನೆ. ಹಿತ ಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 3
ಮಕರ: ಸಮಾರಂಭಕ್ಕೆ ವಿಪರೀತ ಖರ್ಚು. ಪಶ್ಚಾತ್ತಾಪ ಕಾಡಲಿದೆ. ಮಹಿಳೆಯರಿಗೆ ವಸ್ತ್ರ, ಆಭರಣ ಲಾಭ. ದ್ರವ್ಯ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 7
ಕುಂಭ: ಸಾಲ ಮರುಪಾವತಿ ಮಾಡುವಿರಿ. ಕುಟುಂಬದಿಂದ ಮಾರ್ಗದರ್ಶನ. ಹಿತ ಶತ್ರು ಬಾಧೆ. ಕೋರ್ಟ್ ಕೆಲಸಗಳಲ್ಲಿ ಅಡೆ-ತಡೆ. ಶುಭಸಂಖ್ಯೆ: 5
ಮೀನ: ಧರ್ಮದರ್ಶಿಗಳಿಗೆ ಅನಿರೀಕ್ಷಿತ ಧನಲಾಭ. ಶಿಕ್ಷಕರಿಗೆ, ಸಾಹಿತಿಗಳಿಗೆ ಭಾಗ್ಯ ವೃದ್ಧಿ. ಅನವಶ್ಯಕ ವಸ್ತು ಖರೀದಿ. ಕಾರ್ಯ ಸಾಧನೆ. ಶುಭಸಂಖ್ಯೆ: 3