ಈ ರಾಶಿಯವರಿಗಿಂದು ವಿದ್ಯಾಭ್ಯಾಸದಲ್ಲಿ ಅಡೆತಡೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿಯಿದೆ. ಹೃದಯ ಸಂಬಂಧಿ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ. ಶುಭಸಂಖ್ಯೆ: 6

ವೃಷಭ: ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚು. ಕುಟುಂಬದ ಉನ್ನತಿ ಬಗ್ಗೆ ಚಿಂತನೆ ಮಾಡುವಿರಿ. ಬಂಧುಗಳಿಂದ ಆರ್ಥಿಕ ಸಹಾಯ ಬರಲಿದೆ. ಶುಭಸಂಖ್ಯೆ: 9

ಮಿಥುನ: ತಾಯಿಯಿಂದ ಅನುಕೂಲ. ಭೂಮಿ, ವಾಹನದಿಂದ ಧನಾಗಮನ. ವಿದ್ಯಾಭ್ಯಾಸದಲ್ಲಿ ಅಡೆತಡೆ. ಪ್ರೀತಿಯ ವಿಷಯದಲ್ಲಿ ಸಮಸ್ಯೆ. ಶುಭಸಂಖ್ಯೆ: 9

ಕಟಕ: ವ್ಯವಹಾರ ಕ್ಷೇತ್ರದಲ್ಲಿ ಅನುಕೂಲವಾಗಲಿದೆ. ಪಾಲುದಾರಿಕೆಯಲ್ಲಿ ನಷ್ಟ ಸಾಧ್ಯತೆ. ಸಂಗೀತ ನಾಟ್ಯ ಕಲಾ ವಿದ್ಯಾರ್ಥಿಗಳಿಗೆ ಶುಭ. ಶುಭಸಂಖ್ಯೆ: 2

ಸಿಂಹ: ವಿದ್ಯಾಭ್ಯಾಸದಲ್ಲಿ ಒತ್ತಡ. ಸಾಲದ ಚಿಂತೆ ಮತ್ತು ನಿದ್ರಾಭಂಗ. ಆರೋಗ್ಯದಲ್ಲಿ ಏರುಪೇರು ಸಾಧ್ಯತೆ. ಮಾತಿನಿಂದ ತೊಂದರೆ. ಶುಭಸಂಖ್ಯೆ: 7

ಕನ್ಯಾ: ವೈದ್ಯಕೀಯ, ಇಂಜಿನಿಯರಿಂಗ್ ವೃತ್ತಿಯಲ್ಲಿ ಯಶಸ್ಸು. ಉದ್ಯೋಗದಲ್ಲಿ ಬಡ್ತಿ. ಮಾನ ಸನ್ಮಾನಗಳು. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 7

ತುಲಾ: ಉನ್ನತ ವಿದ್ಯಾಭ್ಯಾಸದಲ್ಲಿ ಇರುವವರಿಗೆ ಶುಭ. ಆಕಸ್ಮಿಕ ಅವಕಾಶ ಲಭ್ಯ. ಹೆಣ್ಣು ಮಕ್ಕಳಿಂದ ಸಮಸ್ಯೆ. ಚಾಲನೆಯಲ್ಲಿ ಎಚ್ಚರ. ಶುಭಸಂಖ್ಯೆ: 3

ವೃಶ್ಚಿಕ: ತಂದೆಯಿಂದ ಲಾಭ. ಪ್ರಯಾಣದಲ್ಲಿ ಅನುಕೂಲ. ಪೂರ್ವದಲ್ಲಿ ಮಾಡಿದ ಕರ್ಮದ ಫಲ ಪ್ರಾಪ್ತಿ. ಮಿತ್ರರಿಂದ ಅನುಕೂಲ. ಶುಭಸಂಖ್ಯೆ: 8

ಧನಸ್ಸು: ಉದ್ಯೋಗ ಸ್ಥಳದಲ್ಲಿ ಕಲಹಗಳು ಉಂಟಾಗಬಹುದು. ಹಣಕಾಸಿನ ನೆರವು ಲಭಿಸುವುದು. ಕುಟುಂಬ ನಿರ್ವಹಣೆಗಾಗಿ ಸಾಲ. ಶುಭಸಂಖ್ಯೆ: 6

ಮಕರ: ಮಿತ್ರರಿಂದ ಅನನುಕೂಲ. ಸಾಮಾಜಿಕ ಚರ್ಚೆಗಳಲ್ಲಿ ತೊಡಗುವಿರಿ. ಸಂಗಾತಿಯಿಂದ ಸಹಾಯ. ಉದ್ಯೋಗ ನಿಮಿತ್ತ ಪ್ರಯಾಣ. ಶುಭಸಂಖ್ಯೆ: 6

ಕುಂಭ: ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗುವುದು. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ ಮತ್ತು ಸಾಲದ ಸಮಸ್ಯೆ. ಅನುಕೂಲಕರ ದಿನವಲ್ಲ. ಶುಭಸಂಖ್ಯೆ: 5

ಮೀನ: ಮಕ್ಕಳಿಂದ ಅನುಕೂಲ. ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಪ್ರಗತಿ. ಸ್ನೇಹಿತರಿಂದ ಸಹಕಾರ. ಮಹಿಳೆಯರಿಂದ ಅನಿರೀಕ್ಷಿತ ನೆರವು. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net