ಈ ರಾಶಿಯವರಿಗಿಂದು ಸಾಮರ್ಥ್ಯದಿಂದ ಪ್ರಗತಿ ಸಾಧನೆ.ಆರ್ಥಿಕ ಪರಿಸ್ಥಿತಿ ಚೇತರಿಕೆ: ನಿತ್ಯಭವಿಷ್ಯ

Nitya Bhavisya Vijayavani
Published on

ಮೇಷ: ತೀರ್ಥಕ್ಷೇತ್ರ ದರ್ಶನ. ಕುಟುಂಬದಲ್ಲಿ ನೆಮ್ಮದಿ. ಹಿರಿಯರ ಆಗಮನದಿಂದ ಸಂತೋಷ. ವಾತ-ಪಿತ್ತ ರೋಗಗಳಿಂದ ತೊಂದರೆ. ಶುಭಸಂಖ್ಯೆ: 5

ವೃಷಭ:  ಮನಸ್ಸಿನಲ್ಲಿ ಕೆಟ್ಟ ಆಲೋಚನೆ. ಮಹಿಳೆಯರು ಅನಾರೋಗ್ಯ ಪೀಡಿತರಾಗುವಿರಿ. ಆಪ್ತರಿಂದ ಮಗನ ವಿದ್ಯಾಭ್ಯಾಸಕ್ಕೆ ನೆರವು. ಶುಭಸಂಖ್ಯೆ: 8

ಮಿಥುನ: ಆಲೋಚಿಸಿ ಮುಂದುವರಿಯಿರಿ. ಮಗಳ ವಿವಾಹ ಪ್ರಯತ್ನದಲ್ಲಿ ತೊಂದರೆಗಳು ಕಾಡುವವು. ವಾಹನ ಮಾರಾಟದಿಂದ ಲಾಭ. ಶುಭಸಂಖ್ಯೆ:5

ಕಟಕ:  ಉದ್ಯೋಗ ಬದಲಾವಣೆ ಸಾಧ್ಯತೆ. ಕೆಲಸದಲ್ಲಿ ಜಾಗ್ರತೆ. ಕೆಲಸ ಮಾಡಿಸಿಕೊಳ್ಳುವಿರಿ. ಕಳೆದುಹೋದ ವಸ್ತು ಕೈಸೇರುವುದು. ಶುಭಸಂಖ್ಯೆ:1

ಸಿಂಹ: ವೈಯಕ್ತಿಕ ಕೆಲಸ ಕೈಗೂಡುವವು. ದುಷ್ಟರ ಸಹವಾಸ ದಿಂದ ಹಣ ಕಳೆದುಕೊಳ್ಳುವಿರಿ. ಕುಟುಂಬದಲ್ಲಿ ನೆಮ್ಮದಿ. ವಿದೇಶ ಪ್ರವಾಸ. ಶುಭಸಂಖ್ಯೆ: 6

ಕನ್ಯಾ: ಹಣಕಾಸಿನ ವಿಷಯಗಳಲ್ಲಿ ಎಚ್ಚರವಿರಲಿ. ಅಧಿಕ ಖರ್ಚು. ಅವಿವಾಹಿತರಿಗೆ ವಿವಾಹ ಯೋಗ. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಶುಭಸಂಖ್ಯೆ:6

ತುಲಾ: ಧಾರ್ವಿುಕ ಆಚರಣೆಗಳಿಂದ ಮನಃಶಾಂತಿ. ಸ್ಥಳ ಬದಲಾವಣೆ. ಎಲೆಕ್ಟ್ರಾನಿಕ್ಸ್ ವಸ್ತುಗಳಿಂದ ಲಾಭವಿದೆ. ಪರಿಶ್ರಮಕ್ಕೆ ತಕ್ಕ ಫಲ. ಶುಭಸಂಖ್ಯೆ:2

ವೃಶ್ಚಿಕ: ವಿಪರೀತ ಖರ್ಚು ಮಾಡಬೇಕಾದೀತು. ಕೆಲಸ ಕಾರ್ಯಗಳಲ್ಲಿ ವಿಘ್ನ. ವೈದ್ಯರಿಗೆ ಉತ್ತಮ ಆದಾಯ. ಹಳೆ ಸ್ನೇಹಿತರ ಭೇಟಿ. ಶುಭಸಂಖ್ಯೆ:9

ಧನಸ್ಸು: ಮಧ್ಯಸ್ಥಿಕೆಯಿಂದ ಉತ್ತಮ ಲಾಭ. ಧನಾದಾಯ. ನೌಕರಿಯಲ್ಲಿ ಬಡ್ತಿ. ಶತ್ರು ನಾಶ. ಉದ್ಯೋಗದ ಚಿಂತೆ. ಸಂಬಂಧದ ನಿರೀಕ್ಷೆ. ಶುಭಸಂಖ್ಯೆ:4

ಮಕರ: ಅಪರಿಚಿತರಿಂದ ಮೋಸ. ಬೆಳೆಬಾಳುವ ವಸ್ತುಗಳ ಖರೀದಿ. ಸಾಮರ್ಥ್ಯದಿಂದ ಪ್ರಗತಿ ಸಾಧನೆ. ಆರ್ಥಿಕ ಪರಿಸ್ಥಿತಿ ಚೇತರಿಕೆ. ಶುಭಸಂಖ್ಯೆ:3

ಕುಂಭ: ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಒಪ್ಪಂದದ ವ್ಯವಹಾರಗಳಿಂದ ಲಾಭ ಬರುವುದು. ಮನಃಶಾಂತಿ. ಶತ್ರು ನಾಶ. ವಿಶೇಷ ಭಾಗ್ಯ ವೃದ್ಧಿ.ಶುಭಸಂಖ್ಯೆ:7

ಮೀನ: ಮಾನಸಿಕ ಒತ್ತಡ. ಬಂಧುಗಳಲ್ಲಿ ಪ್ರೀತಿ. ಅನೈತಿಕ ಚಟುವಟಿಕೆಯಿಂದ ತೊಂದರೆ. ವೈದ್ಯಕೀಯ, ತಾಂತ್ರಿಕ ವಿದ್ಯಾರ್ಥಿಗಳಿಗೆ ಪ್ರಗತಿ.ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net