

ಮೇಷ: ವಿವಾದಗಳಿಂದ ಬಳಲಿದ್ದೀರಿ. ಹೀಗಾಗಿ
ಕೆಲವು ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳಲು
ಇದು ಬಹಳ ಸಕಾಲವೇ ಆಗಿದೆ. ಶುಭಸಂಖ್ಯೆ: 1
ವೃಷಭ: ಸುಗಂಧದ್ರವ್ಯ, ಸಿಹಿ ತಿಂಡಿತಿನಿಸುಗಳು,
ಹಣ್ಣುಹಂಪಲು, ಬೇಕರಿ ಆಹಾರ ಇತ್ಯಾದಿಗಳ
ಮಾರಾಟಗಾರರಿಗೆ ಲಾಭವಿದೆ. ಶುಭಸಂಖ್ಯೆ: 9
ಮಿಥುನ: ದೂರ ಇರಿಸಿದರೂ ಮಾತ್ರ ಹತ್ತಿರಕ್ಕೇ ಬರುವ
ಸಂಬಂಧಿಗಳು ತಲೆನೋವಾಗಲಿದ್ದಾರೆ. ಅವರನ್ನು
ತಾಳ್ಮೆಯಿಂದಲೇ ಎದುರಿಸಿ. ಶುಭಸಂಖ್ಯೆ: 8
ಕಟಕ: ದೂರಪ್ರಯಾಣವನ್ನು ಊಹಿಸಿರದ ನಿಮಗೆ
ಅಚ್ಚರಿಯೊಂದು ಎದುರಾಗಲಿದೆ. ಅದಕ್ಕೆ
ಸಜ್ಜಾಗಿರುವುದು ಉತ್ತಮ. ಶುಭಸಂಖ್ಯೆ: 4
ಸಿಂಹ: ನಿಮ್ಮ ನಿಗೂಢವಾದ ವರ್ತನೆಗಳು ಜನರಲ್ಲಿ
ಸಂಶಯವನ್ನು ಮೂಡಿಸಬಹುದು. ಹೀಗಾಗಿ
ಕಾರ್ಯದಲ್ಲಿ ಪಾರದರ್ಶಕತೆ ಇರಲಿ. ಶುಭಸಂಖ್ಯೆ: 7
ಕನ್ಯಾ: ನಿಮ್ಮ ಜ್ಞಾನ ಬಹು ಎತ್ತರದ ಮಟ್ಟದ್ದಾಗಿದೆ.
ಆದರೆ ಮಿತಿಗಳನ್ನೂ ಕೂಡ ಅರಿತುಕೊಂಡು
ಮುಂದುವರಿದರೆ ಯಶಸ್ಸಿದೆ. ಶುಭಸಂಖ್ಯೆ: 3
ತುಲಾ: ರಾಜಕಾರಣದಲ್ಲಿ ಇರುವವರಿಗೆ ಸಾರ್ವಜನಿಕರ
ಮುಂದೆ ಮುಖಭಂಗ ಉಂಟಾದೀತು. ಸದ್ಯಕ್ಕೆ
ಮೌನವೇ ಬಂಗಾರವಾಗಲಿ. ಶುಭಸಂಖ್ಯೆ: 6
ವೃಶ್ಚಿಕ: ಗಾಬರಿಯಿಂದಾಗಿ ಹಗ್ಗವೂ ಹಾವಿನಂತೆ
ಕಾಣಿಸಬಹುದು. ಆದರೆ ಹೆದರದೆಯೇ
ಮುಂದುವರಿದರೆ ಕ್ಷೇಮವಿದೆ. ಶುಭಸಂಖ್ಯೆ: 2
ಧನುಸ್ಸು: ಹತ್ತಿರದವರಿಂದಲೇ ನೋವನ್ನು ಅನುಭವಿಸುವ
ಸಂದರ್ಭಗಳು ನಿಮಗೆ ಒದಗಿಬರಬಹುದು.
ನಿರಾಶರಾಗದೆ ಎದುರಿಸಿ. ಶುಭಸಂಖ್ಯೆ: 5
ಮಕರ: ಮೆಚ್ಚುಗೆಗಳು, ಅನೇಕ ಉಡುಗೊರೆಗಳನ್ನು
ಪಡೆಯುವ ಅಪರೂಪದ ಸಂದರ್ಭಗಳು
ಶೀಘ್ರವೇ ಸಾಕಾರಗೊಳ್ಳಲಿವೆ. ಶುಭಸಂಖ್ಯೆ: 9
ಕುಂಭ: ಹಳೆಯ ಗೆಳೆಯರೊಬ್ಬರು ನಿಮಗೆ ಅನನ್ಯ
ಬೆಂಬಲವನ್ನು ಒದಗಿಸುವ ಮೂಲಕ ಮನದ
ಸಂತಸವನ್ನು ಹೆಚ್ಚಿಸಲಿದ್ದಾರೆ. ಶುಭಸಂಖ್ಯೆ: 1
ಮೀನ: ನೀವು ಅಪರೂಪದ ಸಹನೆ, ಸಮಾಧಾನಚಿತ್ತ
ಹೊಂದಿದ್ದೀರಿ. ಮನೆಯಲ್ಲಿ ಅಸಮಾಧಾನ
ಉಂಟಾಗದಂತೆ ಎಚ್ಚರ ವಹಿಸಿ. ಶುಭಸಂಖ್ಯೆ: 8