

ಮೇಷ: ಎದುರಾಳಿಗಳಿಗೆ ನಿಮ್ಮ ಕಾರ್ಯತಂತ್ರಗಳು ನ್ಯಾಯೋಚಿತವಾಗಿ ಕಾಣಲಾರವು. ಆದರೆ ನಿಮ್ಮ ಸಾತ್ವಿಕತೆಯನ್ನು ಬಿಡದಿರಿ. ಶುಭಸಂಖ್ಯೆ: 4
ವೃಷಭ: ಅಪರಿಚಿತರು ಬಂದು ಬಹು ಮುಖ್ಯವಾದ ದಾಖಲೆಗಳನ್ನು ನೀಡುವಂತೆ ಕೇಳಬಹುದು. ಜಾಣ್ಮೆಯಿಂದಲೇ ದೂರ ಕಳಿಸಿ. ಶುಭಸಂಖ್ಯೆ: 6
ಮಿಥುನ: ಮನೆಯಲ್ಲಿನ ಗೊಂದಲಗಳಿಂದ ವ್ಯಾಕುಲತೆಗೆ ಒಳಗಾಗುವಿರಿ. ಅವುಗಳನ್ನೆಲ್ಲ ಸ್ವಲ್ಪಮಟ್ಟಿನ ತಾಳ್ಮೆಯಿಂದಲೇ ನಿಭಾಯಿಸಿ. ಶುಭಸಂಖ್ಯೆ: 9
ಕಟಕ: ಎಲ್ಲ ವಯೋಮಾನದ ಜನರು ಕೂಡ ನಿಮ್ಮ ಸಲಹೆಗಳಿಗಾಗಿ ಕಾದಿದ್ದಾರೆ. ಜವಾಬ್ದಾರಿಯ ಮಧ್ಯೆ ವಿಶ್ರಾಂತಿ ಪಡೆಯಿರಿ. ಶುಭಸಂಖ್ಯೆ: 8
ಸಿಂಹ: ಸಂಪೂರ್ಣ ಸಾಮರ್ಥ್ಯದೊಂದಿಗೆ ಹೋರಾಡಲು ಅವಕಾಶಗಳು ಸಿಗಲಾರವು. ಆದರೆ ನಿರಾಶರಾಗದೆ ಪ್ರಯತ್ನ ಮಾಡಿದರೆ ಗೆಲ್ಲುವಿರಿ. ಶುಭಸಂಖ್ಯೆ: 5
ಕನ್ಯಾ: ಅವಧೂತರ ಗುರು ಶ್ರೀ ದತ್ತಾತ್ರೇಯನನ್ನು ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಿಕೊಳ್ಳಿ. ಕ್ಲೇಶಗಳೆಲ್ಲ ಬಹು ಬೇಗನೆ ಕರಗಿಹೋಗಲಿವೆ. ಶುಭಸಂಖ್ಯೆ: 7
ತುಲಾ: ಬಟ್ಟೆ ವ್ಯಾಪಾರಿಗಳಿಗೆ, ಶೈಕ್ಷಣಿಕ ಸಂಸ್ಥೆಗಳ ವ್ಯವಸ್ಥಾಪರಿಗೆ, ಕೃಷಿಕರಿಗೆ, ವೈದ್ಯರಿಗೆ ಹೆಚ್ಚಿನದಾದ ಅವಕಾಶಗಳು ಕೂಡಿಬರಲಿವೆ. ಶುಭಸಂಖ್ಯೆ: 3
ವೃಶ್ಚಿಕ: ಯಶಸ್ಸಿನ ಏಣಿಯನ್ನು ಏರಲಾರಂಭಿಸಿದ್ದೀರಿ. ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಗಟ್ಟಿಯಾದ ತಾರ್ಕಿಕತೆ ಇದ್ದಿರಲಿ. ಶುಭಸಂಖ್ಯೆ: 1
ಧನಸ್ಸು: ಗೆಲುವಿನ ದಡವನ್ನು ತಲುಪಲು ಇನ್ನೂ ತಡವಾಗುತ್ತಿದೆ ಎಂದು ಬೇಸರಪಡದಿರಿ. ಪರಿಶ್ರಮದಿಂದಲೇ ಸಾಧಿಸಿ. ಶುಭಸಂಖ್ಯೆ: 2
ಮಕರ: ಆರೋಗ್ಯದ ವಿಚಾರದಲ್ಲಿ ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇಲ್ಲದಿದ್ದರೆ ತೊಂದರೆಯೇ ಉಂಟಾದೀತು. ಶುಭಸಂಖ್ಯೆ: 4
ಕುಂಭ: ಬಹಳ ಸೂಕ್ಷ್ಮವಾದ ನಿಮ್ಮ ವ್ಯಾವಹಾರಿಕ ಕೌಶಲಪೂರ್ಣ ಹೆಜ್ಜೆಗಳು ಸಫಲತೆಯನ್ನು ತಂದುಕೊಟ್ಟೇ ತೀರುತ್ತವೆ. ಶುಭಸಂಖ್ಯೆ: 6
ಮೀನ: ಸಾಧಿಸಿ ತೋರಿಸುವಂಥ ಪ್ರತಿಭಾಸಂಪನ್ನತೆ ನಿಮ್ಮಲ್ಲಿದೆ. ಆದರೆ ಅದಕ್ಕೆ ಅನ್ಯರು ತಡೆಯನ್ನು ಒಡ್ಡದಂತೆ ಸ್ವಲ್ಪ ಎಚ್ಚರಿಕೆ ವಹಿಸಿ. ಶುಭಸಂಖ್ಯೆ: 9