

ಮೇಷ: ಬೌದ್ಧಿಕ ಆಲೋಚನೆಯ ಕ್ರಮಗಳಿಂದಾಗಿ ಅನೇಕ ತಗಾದೆಗಳನ್ನು ಬಗೆಹರಿಸಿಕೊಳ್ಳಲಿದ್ದೀರಿ. ಮಾನಸಿಕ ನೆಮ್ಮದಿಯೂ ಲಭ್ಯ. ಶುಭಸಂಖ್ಯೆ: 8
ವೃಷಭ: ಬಂಧುಗಳಿಂದ ನಿಮಗೆ ಶ್ಲಾಘನೆ ದೊರಕಿದರೂ ಕಚೇರಿಯ ಒತ್ತಡಗಳು ಕಿರಿಕಿರಿ ಉಂಟುಮಾಡುವ ಸಾಧ್ಯತೆ ಇದೆ. ಜಾಗ್ರತೆ ವಹಿಸಿ. ಶುಭಸಂಖ್ಯೆ: 2
ಮಿಥುನ: ಹಿತಶತ್ರುಗಳ ಕಿರುಕುಳ ಇದ್ದರೂ ಉತ್ತಮವಾದ ಮಾತುಗಳು, ವಿನೀತ ಸ್ವಭಾವ ನಿಮ್ಮನ್ನು ಕಾಪಾಡಿ ಗೆಲುವಿನತ್ತ ಕರೆದೊಯ್ಯಲಿದೆ. ಶುಭಸಂಖ್ಯೆ: 4
ಕಟಕ: ನಿರೀಕ್ಷಿಸಿದ ದೊಡ್ಡ ಲಾಭ ಖಂಡಿತ ಒಮ್ಮೆಲೇ ಸಿಗದು. ಸಂಗಾತಿಯ ಸೂಕ್ತ ಸಲಹೆಗಳಿಂದ ಚೈತನ್ಯವನ್ನು ಪಡೆಯುವಿರಿ. ಶುಭಸಂಖ್ಯೆ: 3
ಸಿಂಹ: ನಿಮಗೆ ಅವಮಾನವನ್ನು ಉಂಟುಮಾಡಲು ಇಚ್ಛಿಸುವವರಿಗೆ ಸೋಲೇ ಕಾಡಲಿದೆ. ಕುಲದೇವರ ಬಳಿ ಭಕ್ತಿಯಿಂದ ಪ್ರಾರ್ಥಿಸಿ. ಶುಭಸಂಖ್ಯೆ: 7
ಕನ್ಯಾ: ಖರ್ಚುಗಳ ಯೋಜನೆ ಹಾಕಿದರೆ ನಿರೀಕ್ಷೆಗೂ ಮೀರಿ ಹೊರೆಯಾಗುವ ಸಾಧ್ಯತೆಗಳು ಇವೆ. ಸಾಲ ಪಡೆಯಲು ಹೋಗದಿರಿ. ಶುಭಸಂಖ್ಯೆ: 1
ತುಲಾ: ಧನಲಾಭಕ್ಕೆ ಉತ್ತಮ ದಿನವಾಗಿದೆ. ಕೆಲವು ಜನ ವಿನಾಕಾರಣ ಸಿಟ್ಟಿಗೆಬ್ಬಿಸಲು ಯತ್ನಿಸಿದರೂ ಕೋಪ ಮಾಡಿಕೊಳ್ಳಬೇಡಿ. ಶುಭಸಂಖ್ಯೆ: 6
ವೃಶ್ಚಿಕ: ಆಕಸ್ಮಿಕವಾಗಿ ಹಣ ಲಭ್ಯವಾಗುತ್ತದೆ ಎಂಬುದು ನಿಜವಾದರೂ ಖರ್ಚುವೆಚ್ಚಗಳಿಗಾಗಿ ಕೂಡ ಹೇರಳ ಅವಕಾಶಗಳಿವೆ. ಎಚ್ಚರ. ಶುಭಸಂಖ್ಯೆ: 9
ಧನುಸ್ಸು: ತಾಳ್ಮೆಯಿಂದ ವರ್ತಿಸಿದರೆ ನಿಮ್ಮ ಮನಸ್ಸಿನ ಸಂಕಲ್ಪಗಳು ಬಹು ಬೇಗ ಸಾಕಾರಗೊಳ್ಳಲಿವೆ. ಇಲ್ಲವಾದರೆ ನೆಮ್ಮದಿ ಸಿಗದು. ಶುಭಸಂಖ್ಯೆ: 5
ಮಕರ: ವಿವಾದಗಳ ವಿಚಾರದಲ್ಲಿ ಗೆಲುವು ಸಾಧಿಸುವಿರಿ. ವಾಕ್ ಸ್ವಾತಂತ್ರ್ಯ ಮಿತವಾದ ಬಳಕೆಯಲ್ಲಿ ಜಾಣ್ಮೆಯನ್ನು ಪ್ರದರ್ಶಿಸಿ. ಶುಭಸಂಖ್ಯೆ: 2
ಕುಂಭ: ಹೊಸ ಯೋಜನೆಗಳ ಕುರಿತ ನಿಮ್ಮ ಉತ್ಸಾಹ ಮೆಚ್ಚುವಂಥದ್ದು. ಆದರೆ ದೂರದರ್ಶಿತ್ವಕ್ಕೂ ಅವಕಾಶಗಳು ಸಿಗುವಂತಿರಲಿ. ಶುಭಸಂಖ್ಯೆ: 8
ಮೀನ: ಖರ್ಚಿಗಿಂತಲೂ ಆದಾಯವು ಹೆಚ್ಚಾಗಿದ್ದರೂ ತುಸು ಉದ್ವೇಗಕ್ಕೆ ಒಳಗಾಗುವಿರಿ. ಮಕ್ಕಳ ಓದಿನ ಬಗ್ಗೆ ಗಮನ ಹರಿಸಿ. ಶುಭಸಂಖ್ಯೆ: 4