

ಮೇಷ: ಏನೂ ಪ್ರಯೋಜನ ಇಲ್ಲ ಎಂಬಂತಹ
ವ್ಯಕ್ತಿಯಿಂದಲೂ ಮಹತ್ವದ ಕಾರ್ಯದ
ಸಫಲತೆಗಾಗಿನ ಸೂತ್ರ ಸಿಗಲಿದೆ. ಶುಭಸಂಖ್ಯೆ: 7
ವೃಷಭ: ನೆರೆಹೊರೆಯ ಜನರು ಸುಮ್ಮನೆ ವಾದ
ಮಾಡಬಹುದು. ನೀವು ಸೌಮ್ಯವಾಗಿಯೇ
ಪ್ರತಿಕ್ರಿಯಿಸಿದರೆ ಕ್ಷೇಮ. ಶುಭಸಂಖ್ಯೆ: 9
ಮಿಥುನ: ಅನಿರೀಕ್ಷಿತವಾಗಿ ಒಳ್ಳೆಯ ಅಧಿಕಾರ ಸಿಗುವ
ಸಾಧ್ಯತೆಗಳು ಹೆಚ್ಚು. ಭಕ್ತಿಯಿಂದ ವಿಷ್ಣು
ಸಹಸ್ರನಾಮ ಪಠಣ ಮಾಡಿ. ಶುಭಸಂಖ್ಯೆ: 8
ಕಟಕ: ಬಾಳಿನ ಏರಿಳಿತಗಳ ಆಟವೇ ಬೇಡ
ಎಂಬ ನಿರಾಶಾವಾದವನ್ನು ಬಿಡಿ. ನಿಮ್ಮ
ಸಾಮರ್ಥ್ಯದಿಂದಲೇ ಜಯವಿದೆ. ಶುಭಸಂಖ್ಯೆ: 3
ಸಿಂಹ: ನಿಮ್ಮನ್ನು ನಂಬಿದ ಜನರ ಕಾರ್ಯಗಳನ್ನು
ಸಮರ್ಥವಾಗಿಯೇ ನಿರ್ವಹಿಸುವುದು ಯುಕ್ತ.
ಮುಂದೆ ನಿಮಗೆ ಒಳಿತಾಗಲಿದೆ. ಶುಭಸಂಖ್ಯೆ: 1
ಕನ್ಯಾ: ಅನೇಕ ಬಗೆಯ ನಿರಾಸೆಗಳನ್ನು ಎದುರಿಸುವ
ಸಂದರ್ಭಗಳು ಬರಬಹುದು. ಖಿನ್ನರಾಗದೆ
ಮುನ್ನಡೆಯಲು ಪ್ರಯತ್ನಿಸಿ. ಶುಭಸಂಖ್ಯೆ: 2
ತುಲಾ: ಯಶಸ್ಸಿನ ಏಣಿಯನ್ನೇರುವ ಅವಕಾಶ
ಸಿಕ್ಕಾಗ ನಿರಾಕರಣೆ ಮಾಡಬೇಡಿ. ಒಳಿತಿನ
ದಾರಿಯನ್ನು ಕಂಡುಕೊಳ್ಳಿ. ಶುಭಸಂಖ್ಯೆ: 6
ವೃಶ್ಚಿಕ: ಮನೆಗೆ ಸಂಬಂಧಿಸಿದ ಹಳೆಯ ಕಡತಗಳ
ಕೂಲಕಂಷ ಪರಿಶೀಲನೆಯಿಂದ ಸಿದ್ಧಿಯ
ದಾರಿ ಗೋಚರವಾಗಲಿದೆ. ಶುಭಸಂಖ್ಯೆ: 5
ಧನುಸ್ಸು: ಶತ್ರುಗಳ ಶತ್ರುವೇ ನಿಮ್ಮ ಮಿತ್ರನಾಗಿರುತ್ತಾನೆ
ಎಂಬುದನ್ನು ಅರಿತುಕೊಂಡರೆ ಶತ್ರುಗಳನ್ನು
ದಮನಿಸಲು ಸಾಧ್ಯವಾಗಲಿದೆ. ಶುಭಸಂಖ್ಯೆ: 4
ಮಕರ: ವಿರೋಧಿಗಳು ಎನಿಸಿದವರು ಕೂಡ ನಿಮ್ಮ
ಬಳಿ ನೆರವನ್ನು ಯಾಚಿಸಬಹುದು. ಸಿಟ್ಟು
ಮಾಡಿಕೊಳ್ಳದೆ ಸಹಾಯ ಮಾಡಿ. ಶುಭಸಂಖ್ಯೆ: 7
ಕುಂಭ: ದೂರದ ಬಂಧುಗಳ ಜತೆಗೆ ತುಸು ಹೊತ್ತು
ಮಾತನಾಡಿ. ನಿಮ್ಮ ಕಿರಿಕಿರಿಗಳಿಗೆ ಕೂಡ
ಪರಿಹಾರಗಳು ಲಭ್ಯವಾಗಲಿವೆ. ಶುಭಸಂಖ್ಯೆ: 9
ಮೀನ: ನಿಮ್ಮ ರೊಟ್ಟಿ ಕೈಜಾರಿ ತುಪ್ಪಕ್ಕೆ ಬೀಳುವಂತಹ
ಸಂದರ್ಭಗಳು ಎದುರಾಗುವ ಸಾಧ್ಯತೆ ಹೆಚ್ಚಿದೆ.
ಆದರೆ ಅತಿಯಾದ ನಿರೀಕ್ಷೆ ಬೇಡ. ಶುಭಸಂಖ್ಯೆ: 8