ಈ ರಾಶಿಯವರಿಗಿಂದು ವೃತ್ತಿಯಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕುಟುಂಬದಲ್ಲಿ ಸಂತಸದ ವಾತಾವರಣ. ವಾಹನ ಅಪಘಾತವಾಗುವ ಸಂಭವ, ಎಚ್ಚರವಿರಲಿ. ವ್ಯಾಪಾರ ಆರಂಭಿಸಲು ನಿರ್ಧಾರ. ಶುಭಸಂಖ್ಯೆ: 9

ವೃಷಭ: ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ. ಕಾರ್ಯನಿಮಿತ್ತ ಪ್ರಯಾಣ. ವಿದ್ಯಾರ್ಥಿಗಳು ಹೆಚ್ಚು ಶ್ರಮಿಸುವುದು ಅನಿವಾರ್ಯ. ಶುಭಸಂಖ್ಯೆ: 5

ಮಿಥುನ: ವೃತ್ತಿಯಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ ಸಾಧ್ಯ. ಹಿತಶತ್ರುಗಳ ಕಾಟ. ಹಣಕಾಸಿನ ವಿಷಯದಲ್ಲಿ ಎಚ್ಚರ. ಋಣ ವಿಮೋಚನೆ. ಶುಭಸಂಖ್ಯೆ: 1

ಕಟಕ: ತೈಲ ಮಾರಾಟಗಾರರಿಗೆ ಶುಭ. ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಬಂದೀತು. ಶುಭಸಂಖ್ಯೆ: 7

ಸಿಂಹ: ಸಹೋದ್ಯೋಗಿಗಳಿಂದ ತೊಂದರೆ. ಮಿತ್ರರ ಸಹಕಾರ ದೊರೆಯಲಿದೆ. ಹಣಕಾಸಿನ ವ್ಯವಹಾರದಲ್ಲಿ ಅಪರಿಚಿತರಿಂದ ಸಹಾಯ. ಶುಭಸಂಖ್ಯೆ: 6

ಕನ್ಯಾ: ಮಿತ್ರರಿಂದ ಸಮಸ್ಯೆ. ಹಣ ಹೂಡಿಕೆ ಮಾಡಬಾರದು. ಸ್ಥಿರಾಸ್ತಿ ಖರೀದಿಯ ಚಿಂತನೆ. ಉದ್ಯೋಗಸ್ಥ ಮಹಿಳೆಯರಿಗೆ ಶುಭ. ಶುಭಸಂಖ್ಯೆ: 3

ತುಲಾ: ವಿದ್ಯಾಭ್ಯಾಸದಲ್ಲಿ ಪ್ರಗತಿ. ಮನೆ ಬದಲಾವಣೆಯ ಮಾತುಕತೆ. ದಾಂಪತ್ಯದಲ್ಲಿ ಹೊಂದಾಣಿಕೆ. ಕುಲದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 7

ವೃಶ್ಚಿಕ: ಬಹು ನಿರೀಕ್ಷಿತ ಸಾಧನೆಗೆ ಫಲ ದೊರೆಯುವುದು. ಹಣದ ವಿಷಯದಲ್ಲಿ ನಿರಾಸೆ. ಆರೋಗ್ಯದಲ್ಲಿ ಸುಧಾರಣೆ. ಅಧಿಕ ಖರ್ಚು. ಶುಭಸಂಖ್ಯೆ: 4

ಧನುಸ್ಸು: ಸಂಗಾತಿಯಿಂದ ಸೂಕ್ತ ಸಲಹೆ. ಆದಾಯಕ್ಕಿಂತ ಖರ್ಚು ಹೆಚ್ಚು. ಮನಸ್ಸಿನಲ್ಲಿ ತಳಮಳ. ಅಧಿಕಾರಿಗಳಿಗೆ ಅಗತ್ಯಕ್ಕಿಂತ ಹೆಚ್ಚು ಶ್ರಮ. ಶುಭಸಂಖ್ಯೆ: 8

ಮಕರ: ಮಾನಸಿಕ ಭಯ ಅಧಿಕವಾಗುವುದು. ಸಹೋದರರಿಂದ ಸಹಾಯ. ಕೃಷಿ ಉಪಕರಣಗಳಿಂದ ಲಾಭ. ಮಹಿಳೆಯರಿಗೆ ಬಡ್ತಿ. ಶುಭಸಂಖ್ಯೆ: 8

ಕುಂಭ: ಉದ್ಯೋಗದಲ್ಲಿ ಪ್ರಗತಿಯಾಗಲಿದೆ. ಪ್ರಯಾಣದಿಂದ ಅನನುಕೂಲ ಉಂಟಾದೀತು. ಆಸ್ತಿ ಮಾರಾಟದಲ್ಲಿ ಹಿನ್ನಡೆ. ಶುಭಸಂಖ್ಯೆ: 2

ಮೀನ: ಪಾಲುದಾರಿಕೆಯಲ್ಲಿ ಅನುಕೂಲ. ಸ್ಥಿರಾಸ್ತಿಯಿಂದ ಲಾಭ ಬರುವ ಯೋಗ. ಮಕ್ಕಳಿಂದ ನಿರೀಕ್ಷಿತ ಅನುಕೂಲ ಒದಗಿಬರುವುದು. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net