ಐದನೇ ಕಾಶಿಯಾತ್ರೆಗೆ ಶೀಘ್ರವೇ ನೋಂದಣಿ ಆರಂಭ; ಇಲ್ಲಿದೆ ವಿವರ..

Kashi
Published on

ಬೆಂಗಳೂರು: ‘ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ’ ಐದನೇ ಯಾತ್ರೆಗೆ ಚಾಲನೆ ದೊರೆಯಲಿದ್ದು, ಶೀಘ್ರದಲ್ಲೇ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಏಪ್ರಿಲ್‌ನಲ್ಲಿ ಕೈಗೊಂಡಿದ್ದ ನಾಲ್ಕನೇ ಸುತ್ತಿನ ಯಾತ್ರೆ ರದ್ದುಗೊಂಡಿತ್ತು. ಹಾಗಾಗಿ 15 ಸಾವಿರ ರೂ. ಹಣ ಪಾವತಿಸಿ, ಮುಂಗಡ ಬುಕಿಂಗ್ ಮಾಡಿದ್ದ 444 ಮಂದಿಗೆ ರಾಜ್ಯ ಮುಜರಾಯಿ ಇಲಾಖೆ ಹಣ ವಾಪಸ್ ನೀಡಿತ್ತು.

ಕಾಶಿ, ವಾರಣಾಸಿ, ಆಯೋಧ್ಯೆ ಮತ್ತು ಪ್ರಯಾಗ್‌ರಾಜ್‌ಗೆ ಎಂಟು ದಿನಗಳ ಧಾರ್ಮಿಕ ಪ್ರವಾಸಕ್ಕಾಗಿ ‘ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ’ ಹೆಸರಿನಡಿ ಯಾತ್ರೆಗಾಗಿಯೇ ವಿಶೇಷವಾಗಿ ರೈಲನ್ನು ವಿನ್ಯಾಸಗೊಳಿಲಾಗಿದೆ. ಯಾತ್ರೆಗಾಗಿ 20 ಸಾವಿರ ರೂ. ಖರ್ಚಾಗಲಿದ್ದು, ಇದರಲ್ಲಿ 15 ಸಾವಿರ ಯಾತ್ರಾರ್ಥಿಗಳು ನೀಡಿದರೆ, 5 ಸಾವಿರ ರೂ. ಸಹಾಯಧನವನ್ನು ಸರ್ಕಾರ ನೀಡಲಿದೆ.

ಈ ಯೋಜನೆಯಡಿ ಮೂರು ಬಾರಿ ಯಾತ್ರೆ ಕೈಗೊಳ್ಳಲಾಗಿದ್ದು, ಇದುವರೆಗೂ 1,644 ಮಂದಿ ಯೋಜನೆ ಲಾಭ ಪಡೆದುಕೊಂಡಿದ್ದಾರೆ. ಆದರೆ 2023ರ ಮಾರ್ಚ್‌ನಲ್ಲಿ ನಾಲ್ಕನೇ ಯಾತ್ರೆಗಾಗಿ ಇಲಾಖೆಯು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಏಪ್ರಿಲ್‌ನಲ್ಲಿ ಯಾತ್ರೆಗೆ ತೆರಳಲು ಸಿದ್ಧತೆಯೂ ನಡೆದಿತ್ತು. ಆದರೆ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ಮುಜರಾಯಿ ಇಲಾಖೆ ಯಾತ್ರೆಯನ್ನು ರದ್ದುಗೊಳಿಸಿ, ಟಿಕೆಟ್ ಕಾಯ್ದಿರಿಸಿದ್ದವರಿಗೆ ಹಣ ವಾಪಸ್ ನೀಡಿತ್ತು. ಇದೀಗ ಯಾತ್ರೆ ಪುನಃ ಆರಂಭವಾಗಲಿದ್ದು, ಈ ತಿಂಗಳ ಅಂತ್ಯಕ್ಕೆ ಐದನೇ ಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net