ಈ ರಾಶಿಯವರಿಗಿಂದು ವಿವಿಧ ಮೂಲಗಳಿಂದ ಧನ ಲಾಭ, ಮನಃಶಾಂತಿ: ನಿತ್ಯ ಭವಿಷ್ಯ

Nithya Bhavishya
Published on

ಮೇಷ: ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಕಾರ್ಯಸಾಧನೆಗಾಗಿ ತಿರುಗಾಟ. ದೇವತಾ ಕಾರ್ಯಗಳಲ್ಲಿ ಭಾಗಿ. ಮನಸ್ಸಿನಲ್ಲಿ ಗೊಂದಲ. ಶುಭಸಂಖ್ಯೆ: 9

ವೃಷಭ: ಅಧಿಕಾರಿಗಳಿಂದ ಪ್ರಶಂಸೆ ದೊರೆಯುವುದು. ಕೋರ್ಟು ವ್ಯವಹಾರಗಳಲ್ಲಿ ಜಯ. ಮಿತ್ರರಿಂದ ವಂಚನೆಯಾದೀತು ಎಚ್ಚರ. ಶುಭಸಂಖ್ಯೆ: 5

ಮಿಥುನ: ಮಹಿಳೆಯರು ತಾಳ್ಮೆಯಿಂದ ಇರಿ. ಮಗನಿಂದ ಶುಭ ವಾರ್ತೆ ಕೇಳುವಿರಿ. ಪರಾಕ್ರಮದ ಕೆಲಸಗಳಲ್ಲಿ ನಿರೀಕ್ಷಿತ ಯಶಸ್ಸು. ಶುಭಸಂಖ್ಯೆ: 8

ಕಟಕ: ಉದ್ಯೋಗ ನಿಮಿತ್ತ ಪ್ರಯಾಣ. ಅಪರಿಚಿತರ ವಿಷಯದಲ್ಲಿ ಜಾಗ್ರತೆ. ವಿದ್ಯಾರ್ಥಿಗಳಲ್ಲಿ ಗೊಂದಲ. ಕ್ರಯ ವಿಕ್ರಯಗಳಲ್ಲಿ ಲಾಭ. ಶುಭಸಂಖ್ಯೆ: 4

ಸಿಂಹ: ವಿವಿಧ ಮೂಲಗಳಿಂದ ಧನ ಲಾಭ. ವೈರಿಗಳಿಂದ ದೂರವಿರಿ. ಮನಃಶಾಂತಿ. ಉದಾಸೀನದಿಂದ ವಸ್ತುಗಳನ್ನು ಕಳೆದುಕೊಳ್ಳುವಿರಿ. ಶುಭಸಂಖ್ಯೆ: 1

ಕನ್ಯಾ: ಮಾತಾಪಿತರಲ್ಲಿ ವಾತ್ಸಲ್ಯ ತೋರುವಿರಿ. ಕುಟುಂಬ ಸೌಖ್ಯವಿದೆ. ಕೃಷಿಯಲ್ಲಿ ಲಾಭವಾಗುವುದು. ಕೋಪ ನಿಯಂತ್ರಿಸಿಕೊಳ್ಳಿ. ಶುಭಸಂಖ್ಯೆ: 2

ತುಲಾ: ಅಧಿಕ ಕೆಲಸದಿಂದ ವಿಶ್ರಾಂತಿ. ವಸ್ತ್ರ ವ್ಯಾಪಾರಿಗಳಿಗೆ ಲಾಭ. ಬಡರೋಗಿಗಳಿಗೆ ಸಹಾಯ ಮಾಡಿ. ಸುಬ್ರಹ್ಮಣ್ಯನನ್ನು ಪೂಜಿಸಿ. ಶುಭಸಂಖ್ಯೆ: 7

ವೃಶ್ಚಿಕ: ಹಿತೈಷಿಗಳ ಸಲಹೆ ಪಡೆಯಿರಿ. ಹಣಕಾಸಿನ ಸಮಸ್ಯೆ. ಸಲ್ಲದ ಅಪವಾದ ಬಂದೀತು. ಗೆಳೆಯರೊಂದಿಗೆ ಸಮಸ್ಯೆ ಹಂಚಿಕೊಳ್ಳಿ. ಶುಭಸಂಖ್ಯೆ: 9

ಧನುಸ್ಸು: ಯಂತ್ರೋಪಕರಣಗಳಿಂದ ಉತ್ತಮ ಲಾಭ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಕಾರ್ಯಸಿದ್ಧಿ, ನಾನಾ ವಿಚಾರಗಳಲ್ಲಿ ಆಸಕ್ತಿ. ಶುಭಸಂಖ್ಯೆ: 6

ಮಕರ: ಅತಿಯಾದ ದೇಹಾಲಸ್ಯ. ಬಾಕಿ ಹಣ ಕೈಸೇರುವುದು. ಸುಖ ಭೋಜನ. ಷೇರು ವ್ಯವಹಾರಗಳಲ್ಲಿ ಎಚ್ಚರ. ಪರರಿಂದ ತೊಂದರೆ. ಶುಭಸಂಖ್ಯೆ: 3

ಕುಂಭ: ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಹಣ ಬಂದರೂ ಉಳಿಯುವುದಿಲ್ಲ. ಚೋರಭಯ. ಚಂಚಲ ಸ್ವಭಾವ ನಿಯಂತ್ರಿಸಿ. ಶುಭಸಂಖ್ಯೆ: 5

ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ. ಕೆಲಸ ಕಾರ್ಯಗಳಲ್ಲಿ ನಿಧಾನಗತಿಯಿಂದ ಬೇಸರ. ಕೃಷಿಯಲ್ಲಿ ಲಾಭ ಬರಲಿದೆ. ವಿದೇಶ ಪ್ರಯಾಣ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net