

ಮೇಷ: ಉತ್ಸಾಹದಿಂದ ಶುಭಕರವಾದ ಸಂಕಲ್ಪವನ್ನು
ಕೈಗೊಂಡರೆ ಮುಂದಿನ ಯೋಜನೆಗಳ ಬಗೆಗೆ
ಆಶಾವಾದವನ್ನು ಇರಿಸಬಹುದು. ಶುಭಸಂಖ್ಯೆ: 7
ವೃಷಭ: ಹಳೆಯ ಸ್ನೇಹಿತರು ನಿಮ್ಮನ್ನು ಹುಡುಕಿಕೊಂಡು
ಬರಲಿದ್ದಾರೆ. ಅವರ ಕಷ್ಟಗಳನ್ನು ಬಿಡುವಿನಲ್ಲಿ
ಕೇಳಿಸಿಕೊಂಡು ನೆರವು ನೀಡಿ. ಶುಭಸಂಖ್ಯೆ: 9
ಮಿಥುನ: ಹೊಸ ಸಂಬಂಧ ಆರಂಭವಾಗಬೇಕಾದದ್ದು
ನ್ಯಾಯವೇ ಆಗಿದೆ. ಆದರೆ ಹಳೆಯವರನ್ನೆಲ್ಲ
ಒಮ್ಮೆಲೇ ದೂರ ಮಾಡದಿರಿ. ಶುಭಸಂಖ್ಯೆ: 8
ಕಟಕ: ಮಂತ್ರಾಲಯದ ಗುರುರಾಯರನ್ನು ಶ್ರದಾಟಛಿ
ಭಕ್ತಿಗಳಿಂದ ಆರಾಧಿಸಿ. ಮನದ ಕಿರಿಕಿರಿಗಳು
ಮಂಜಿನಂತೆ ಕರಗಲು ಸಾಧ್ಯ. ಶುಭಸಂಖ್ಯೆ: 6
ಸಿಂಹ: ಕೆಲವರು ವಿಚಿತ್ರವಾಗಿ ವರ್ತಿಸಿದರೂ
ನೀವು ನೀವಾಗಿಯೇ ವರ್ತಿಸಿರಿ. ಕಷ್ಟಗಳು
ಎದುರಾಗದ ದಾರಿ ಸಿಗಲಿದೆ. ಶುಭಸಂಖ್ಯೆ: 4
ಕನ್ಯಾ: ವಿಶೇಷ ನಿರ್ಣಯವನ್ನು ಕೈಗೊಳ್ಳಲು
ಸಫಲತೆಯ ದಿನವಿದು. ನಿಧಾನವಾದರೂ
ಯಾವುದೇ ತೊಂದರೆ ಇಲ್ಲ. ಶುಭಸಂಖ್ಯೆ: 5
ತುಲಾ: ವಾದ ವಿವಾದ, ಚರ್ಚೆ ಇತ್ಯಾದಿಗಳು
ನಡೆದರೂ ಪರಸ್ಪರ ಪ್ರೀತಿ ವಿಶ್ವಾಸಕ್ಕೆ ಅಡ್ಡಿ
ತಂದುಕೊಳ್ಳದಿರಿ. ಸಿದ್ಧಿ ಸಿಗಲಿದೆ. ಶುಭಸಂಖ್ಯೆ: 2
ವೃಶ್ಚಿಕ: ನಿಮ್ಮ ಆತ್ಮವಿಶ್ವಾಸಕ್ಕೆ ಹಲವು ರೀತಿಯ
ಮೆಚ್ಚುಗೆಗಳು ದೊರೆಯಲಿವೆ. ಜನ ನಿಮ್ಮನ್ನು
ಪ್ರೀತಿಯಿಂದ ಕಾಣಲಿದ್ದಾರೆ. ಶುಭಸಂಖ್ಯೆ: 1
ಧನುಸ್ಸು: ಶೀಘ್ರವಾಗಿ ಧನಸಂಪಾದನೆ ಮಾಡುವ
ಮಾರ್ಗವನ್ನು ಹುಡುಕಲು ಶ್ರಮಪಡುವುದು
ಬೇಡ. ಕಾರ್ಯದಕ್ಷತೆ ಇರಲಿ. ಶುಭಸಂಖ್ಯೆ: 9
ಮಕರ: ಅನೇಕ ವಿಧದ ಪ್ರತಿಭಾನ್ವಿತ ಜನರನ್ನು
ಭೇಟಿ ಮಾಡಲಿದ್ದೀರಿ. ಇದರಿಂದ ಹೊಸ
ಬಗೆಯ ಲಾಭಕ್ಕೂ ದಾರಿ ಇದೆ. ಶುಭಸಂಖ್ಯೆ: 4
ಕುಂಭ: ಎದುರಾಗಲಿರುವ ಏರುತಗ್ಗುಗಳನ್ನು
ಗಮನಿಸದೆ ಧಾವಿಸದಿರಿ. ಕೆಲವು ರೀತಿಯ
ನಷ್ಟಗಳೇ ಸಂಭವಿಸಬಹುದು. ಶುಭಸಂಖ್ಯೆ: 1
ಮೀನ: ಆಕಸ್ಮಿಕವಾಗಿ ಧನಲಾಭ ಉಂಟಾಗಲಿದೆ.
ಆದರೆ, ಇಂದಿನ ಖರ್ಚು-ವೆಚ್ಚಗಳಲ್ಲಿ
ಸ್ವಲ್ಪ ಹಿಡಿತ ಇರಲೇಬೇಕು. ಶುಭಸಂಖ್ಯೆ: 6