ನಿತ್ಯಭವಿಷ್ಯ|ಈ ರಾಶಿಯವರಿಗೆ ಇಂದು ಸಾಮಾನ್ಯ ವಿಚಾರಗಳ ಬಗ್ಗೆಯೂ ಚಿಂತೆಗಳು ಕಾಡಬಹುದು..

Nitya-Bhavishya-vvani-1-2-1
Published on

ಮೇಷ: ಬಿಕ್ಕಟ್ಟುಗಳು ಎದುರಾದರೂ ಮನೆಯ ಸದಸ್ಯರ ಬೆಂಬಲ ಸಿಗಲಿದೆ. ವಿಷ್ಣು ಸಹಸ್ರನಾಮ ಪಠಿಸಿ. ಪ್ರಸನ್ನತೆಯನ್ನು ಹೊಂದುವಿರಿ. ಶುಭಸಂಖ್ಯೆ: 1

ವೃಷಭ: ಸುತ್ತಮುತ್ತಲಿನವರ ಜತೆಗೆ ಸಂತಸದಿಂದ ಕಾಲ ಕಳೆಯಲಿದ್ದೀರಿ. ನಿಮ್ಮ ಪಾಲಿಗೆ ನೀವೇ ಹೊಸಬರಾಗುವ ಸಾಧ್ಯತೆ ಇದೆ. ಶುಭಸಂಖ್ಯೆ: 4

ಮಿಥುನ: ಬೆಳ್ಳಗಿರುವುದೆಲ್ಲ ಹಾಲು ಎಂದು ನಂಬುತ್ತೀರಿ. ಅದರಿಂದ ತೊಂದರೆ ತಲೆದೋರಬಹುದು. ಸದ್ಯದ ಸಂದರ್ಭದಲ್ಲಿ ಎಚ್ಚರ. ಶುಭಸಂಖ್ಯೆ: 8

ಕಟಕ: ಸ್ನೇಹಿತರು, ನೆಂಟರ ಜತೆಗೆ ಕಾಲ ಕಳೆಯುವಂಥ ಅವಕಾಶ ಸಿಗಲಿದೆ. ವಿಶಿಷ್ಟವಾದ ವಿಚಾರವನ್ನು ಕೂಡ ತಿಳಿದುಕೊಳ್ಳಲಿದ್ದೀರಿ. ಶುಭಸಂಖ್ಯೆ: 6

ಸಿಂಹ: ಸದಾ ಕಷ್ಟನಷ್ಟಗಳ ಕುರಿತಾಗಿಯೇ ಗಾಢವಾಗಿ ಯೋಚಿಸುತ್ತಿರುತ್ತೀರಿ. ಸ್ವಲ್ಪ ವಿಶ್ರಾಂತಿಯನ್ನು ಪಡೆದು ಪ್ರವಾಸಕ್ಕೆ ಹೋಗಿಬನ್ನಿ. ಶುಭಸಂಖ್ಯೆ: 9

ಕನ್ಯಾ: ಹೆಚ್ಚು ಜಾಗ್ರತೆ ವಹಿಸಿ ವಾಹನ ಓಡಿಸಬೇಕಾದ ಸಂದರ್ಭ ಬರಲಿದೆ. ಭಕ್ತಿಯಿಂದ ಲಕ್ಷ್ಮೀನೃಸಿಂಹ ಸ್ತೋತ್ರವನ್ನು ಪಠಣ ಮಾಡಿ. ಶುಭಸಂಖ್ಯೆ: 2

ತುಲಾ: ಕಚೇರಿಯಲ್ಲಿ ಬದಲಾವಣೆಗಳಿಗೆ ಅವಕಾಶ ಸಿಗಲಿದೆ. ಹೊಸ ಸಂಗತಿಗಳ ಬಗ್ಗೆ ಮಕ್ಕಳ ಬಳಿ ರ್ಚಚಿಸಿದರೆ ಲಾಭವಿದೆ. ಶುಭಸಂಖ್ಯೆ: 5

ವೃಶ್ಚಿಕ: ಯಶಸ್ಸಿನ ಉತ್ಸಾಹದಲ್ಲಿ ಧಾವಿಸುತ್ತಿರುವ ಬದುಕಿನಲ್ಲಿ ಅಡೆತಡೆಗಳು ಎದುರಾದಾವು. ಹರಿನಾಮದ ಸ್ಮರಣೆ ಮಾಡಿ. ಶುಭಸಂಖ್ಯೆ: 7

ಧನುಸ್ಸು: ಅಲೌಕಿಕ ವಿಚಾರಗಳ ಕುರಿತ ನಿಮ್ಮ ಆಸಕ್ತಿ ಅಗಾಧವಾದುದು. ಇತರರಿಗೂ ಇದನ್ನು ತಿಳಿಸಿದರೆ ಕೀರ್ತಿ ಪಡೆಯುವಿರಿ. ಶುಭಸಂಖ್ಯೆ: 3

ಮಕರ: ಬಿಕ್ಕಟ್ಟುಗಳನ್ನು ಪರಿಹರಿಸಲು ಸಹೋದರರು ಸಹಾಯ ಮಾಡಲಿದ್ದಾರೆ. ಆದರೆ ಅತಿಯಾದ ನಿರೀಕ್ಷೆಗಳನ್ನು ಬಿಟ್ಟರೆ ಒಳಿತು. ಶುಭಸಂಖ್ಯೆ: 1

ಕುಂಭ: ಧನಾತ್ಮಕವಾದ ನಿಲುವುಗಳಿಂದಾಗಿ ಗೌರವವನ್ನು ಸಂಪಾದಿಸಲಿದ್ದೀರಿ. ದಿನವಿಡೀ ಮನದ ಪ್ರಸನ್ನತೆ ಕಾಯ್ದುಕೊಂಡರೆ ಉತ್ತಮ. ಶುಭಸಂಖ್ಯೆ: 4

ಮೀನ: ಸಾಮಾನ್ಯ ವಿಚಾರಗಳ ಬಗ್ಗೆಯೂ ಚಿಂತೆಗಳು ಕಾಡಬಹುದು. ಅವುಗಳನ್ನು ಬಿಟ್ಟು ಹೊಸದಾದ ಸವಾಲುಗಳನ್ನು ಎದುರಿಸಿ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net