ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ಹಣ ನೀರಿನಂತೆ ಖರ್ಚಾಗಲಿದೆ..

nity
Published on

ಮೇಷ: ಕಷ್ಟಪಡುವ ಮನಸ್ಸಿದೆ. ಆದರೆ ಬೆಂಬಲಿಸುವ ಕುಟುಂಬದವರು ಕೈ ಕೊಡುವ ಸಾಧ್ಯತೆ ಇದೆ. ದೈವ ಬಲದಿಂದ ಕಾರ್ಯ ಸಿದ್ಧಿ. ಶುಭಸಂಖ್ಯೆ: 2

ವೃಷಭ: ನೀರಿನಂತೆ ಹಣ ಖರ್ಚಾಗುವುದು. ಆದರೂ ಅನಿರೀಕ್ಷಿತ ಲಾಭವಿದೆ. ಚಿತ್ತ ಚಾಂಚಲ್ಯವನ್ನು ನಿಯಂತ್ರಿಸಿ. ಶುಭಸಂಖ್ಯೆ: 6

ಮಿಥುನ: ತಂದೆಯಿಂದ ಕಿರಿಕಿರಿ. ಕುಟುಂಬದ ಬಿಗುವಿನ ವಾತಾವರಣವನ್ನು ಸೌಹಾರ್ದವಾಗಿ ನಿವಾರಿಸಿ. ಮಕ್ಕಳ ಭವಿಷ್ಯದ ಚಿಂತೆ. ಶುಭಸಂಖ್ಯೆ: 9

ಕಟಕ: ಆತ್ಮೀಯ ಬಂಧುವರ್ಗದವರ ಭೇಟಿ. ಮಕ್ಕಳ ಭವಿಷ್ಯದ ಚಿಂತೆ. ತಿರುಗಾಟ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 1

ಸಿಂಹ: ಫಲಿತಾಂಶದ ಬಗ್ಗೆ ಯೋಚಿಸಬೇಡಿ. ನಿಮ್ಮ ಪರಿಶ್ರಮಕ್ಕೆ ತಕ್ಕದಾದ ಪರಿಹಾರ ಸಿಗುತ್ತದೆ. ಹಣದ ಅಪವ್ಯಯವಾದೀತು. ಶುಭಸಂಖ್ಯೆ: 3

ಕನ್ಯಾ: ಆತ್ಮೀಯ ಸ್ನೇಹಿತನ ಭೇಟಿ. ಈ ದಿನ ನಿಮ್ಮ ಸ್ನೇಹಿತನ ನಿಜ ಸ್ವಭಾವ ಗೊತ್ತಾಗುವುದು. ಹಿತಶತ್ರುಗಳಿಂದ ದೂರವಿರಿ. ಶುಭಸಂಖ್ಯೆ: 4

ತುಲಾ: ಅನಗತ್ಯ ವಸ್ತು ಖರೀದಿಸಬೇಡಿ. ಮಕ್ಕಳಿಂದ ಹಣ ನಷ್ಟ. ಕಚೇರಿಯಲ್ಲಿ ಸ್ನೇಹಿತರ ಸಲಹೆ. ಆರೋಗ್ಯದಲ್ಲಿ ಏರುಪೇರು.ಶುಭಸಂಖ್ಯೆ: 6

ವೃಶ್ಚಿಕ: ಸಮಯ ಸಾಧಕರಿಂದ ದೂರ ಇರಿ. ನಿಮ್ಮ ತಾರ್ಕಿಕ ನಡವಳಿಕೆ ಪ್ರಯೋಜನಕ್ಕೆ ಬರುತ್ತದೆ. ಆತ್ಮೀಯರ ವಿಯೋಗ. ಶುಭಸಂಖ್ಯೆ: 2

ಧನಸ್ಸು: ಕಠಿಣ ಪರಿಶ್ರಮಕ್ಕೆ ಸರಿಯಾದ ಲ. ಸಹೋದ್ಯೋಗಿಗಳಿಂದ ವಿಶೇಷ ಸಲಹೆ. ಸಂಗಾತಿಯೊಂದಿಗೆ ವಿಹಾರ. ಶುಭಸಂಖ್ಯೆ: 7

ಮಕರ: ದೂರದ ಊರಿಗೆ ಪ್ರಯಾಣ. ಆರೋಗ್ಯದಲ್ಲಿ ವ್ಯತ್ಯಾಸವಾದೀತು ಹುಷಾರು. ಹಿರಿಯರಿಂದ ವಿಶೇಷ ಸಲಹೆ ಪಡೆಯಿರಿ. ಶುಭಸಂಖ್ಯೆ: 4

ಕುಂಭ: ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಿ. ಅನವಶ್ಯಕ ವಿವಾದಗಳಿಂದ ದೂರವಿರಿ. ಕಚೇರಿಯಲ್ಲಿ ಹೆಚ್ಚಿನ ಶ್ರಮ. ಶುಭಸಂಖ್ಯೆ: 9

ಮೀನ : ಧೈರ್ಯದಿಂದ ಮುಂದುವರಿಯಿರಿ. ನನೆಗುದಿಗೆ ಬಿದ್ದ ಕಾರ್ಯಕ್ಕೆ ಚಾಲನೆ. ಹೊಸ ಭೂಮಿ ಖರೀದಿ. ಕುಟುಂಬದಲ್ಲಿ ಸಡಗರ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net