ನಿತ್ಯಭವಿಷ್ಯ: ಈ ರಾಶಿಯವರು ರಾತ್ರಿ ವೇಳೆ ಒಂಟಿಯಾಗಿ ಇರಬಾರದು ನೋಡಿ..

Nithya Bhavishya
Published on

ಮೇಷ: ಭುಜಬಲ, ಪರಿಶ್ರಮ, ಕಾಯಕದಲ್ಲಿ ನಿಷ್ಠೆ

ಇವೆಲ್ಲ ಬೇಕೇ ಬೇಕು. ಆದರೆ ಆರೋಗ್ಯದ

ಬಗ್ಗೆ ನಿರ್ಲಕ್ಷ್ಯ ಬೇಡ. ಶುಭಸಂಖ್ಯೆ: 9

ವೃಷಭ: ಐಷಾರಾಮಿ ಬದುಕಿಗಾಗಿ ಹಂಬಲಿಸುವುದನ್ನು

ಬಿಟ್ಟುಬಿಟ್ಟರೆ ಸೃಜನಶೀಲತೆಯಿಂದ ವಿಶೇಷ

ಲಾಭ ಉಂಟಾಗಲಿದೆ. ಶುಭಸಂಖ್ಯೆ: 1

ಮಿಥುನ: ಮನೆಯ ಅಂಗಳಲ್ಲೇ ಪರಿಹಾರಕ್ಕೆ ಬೇಕಾದ

ಮದ್ದುಗಳಿವೆ. ನೀವು ಅಲಕ್ಷಿಸಿದ್ದರಿಂದ

ನಷ್ಟದ ದಾರಿ ತೆರೆಯುತ್ತಿದೆ. ಶುಭಸಂಖ್ಯೆ: 8

ಕಟಕ: ವ್ಯವಹಾರಕ್ಕೆ ಸಂಬಂಧಿಸಿದ ವಾಸ್ತವ

ಬೇರೆ. ಹೃದಯದ ಮಾತುಗಳೇ ಬೇರೆ.

ಆಯ್ಕೆಯಲ್ಲಿ ಎಚ್ಚರ ಇರಲಿ. ಶುಭಸಂಖ್ಯೆ: 2

ಸಿಂಹ: ಆತ್ಮವಿಶ್ವಾಸದಿಂದ ಸಂತೋಷ ಮತ್ತು

ಗೆಲುವು ಎರಡೂ ಸಿಗಲಿವೆ. ಕುಲದೇವರನ್ನು

ಆರಾಧಿಸಿ. ಲಾಭವಿದೆ. ಶುಭಸಂಖ್ಯೆ: 7

ಕನ್ಯಾ: ಸ್ನೇಹಿತರು ಸಹಾಯಕ್ಕೆ ಬರಲಾರರು

ಎಂದೇನಲ್ಲ. ಆದರೆ ನಾಳೆ ಅವರೂ ದೊಡ್ಡ

ನೆರವನ್ನೇ ಕೇಳಬಹುದು. ಶುಭಸಂಖ್ಯೆ: 3

ತುಲಾ: ಎಲ್ಲವನ್ನೂ ನೈತಿಕವಾಗಿ ತೂಗಿ ನೋಡಿ

ಗ್ರಹಿಸುವ ನಿಮ್ಮ ಪ್ರಾಮಾಣಿಕತೆಯೇ ನಿಮ್ಮ

ರಕ್ಷಣೆಯನ್ನೂ ಮಾಡಲಿದೆ. ಶುಭಸಂಖ್ಯೆ: 5

ವೃಶ್ಚಿಕ: ಕೆಲಸದ ಸ್ಥಳದಲ್ಲಿ ಹೊಸ ಕಗ್ಗಂಟುಗಳು

ನಿರ್ಮಾಣವಾಗಬಹುದು. ಜಾಣ್ಮೆಯಿಂದ

ಸಾಧ್ಯವಾದಷ್ಟು ದೂರ ಇರಿ. ಶುಭಸಂಖ್ಯೆ: 4

ಧನುಸ್ಸು: ರಾತ್ರಿಯ ವೇಳೆ ಒಂಟಿಯಾಗಿರಬೇಡಿ.

ಮನೋಬಲ ವೃದ್ಧಿಸಿಕೊಳ್ಳಲು ದತ್ತಾತ್ರೇಯ

ಸ್ತೋತ್ರವನ್ನು ಓದಿ. ಕ್ಷೇಮ. ಶುಭಸಂಖ್ಯೆ: 6

ಮಕರ: ನಿಮಗೇ ಗೊತ್ತಿಲ್ಲದ ರೀತಿಯಲ್ಲಿ ನಿಮ್ಮಿಂದ

ಕಾನೂನಿನ ಉಲ್ಲಂಘನೆ ಜರುಗಬಹುದು.

ಎಚ್ಚರಿಕೆ ಅತ್ಯಗತ್ಯವಾಗಿದೆ. ಶುಭಸಂಖ್ಯೆ: 9

ಕುಂಭ: ಅನಿರೀಕ್ಷಿತವಾಗಿ ಅತಿಥಿಗಳ ಭೇಟಿಯ

ಸಂಭವವಿದೆ. ಅವರ ಬೌದಿಟಛಿಕ ಪ್ರೌಢಿಮೆಯ

ಲಾಭವನ್ನು ಪಡೆದುಕೊಳ್ಳಿ. ಶುಭಸಂಖ್ಯೆ: 8

ಮೀನ: ಶತ್ರುಗಳ ಮನೋಭಾವವನ್ನು ಸರಿಪಡಿಸಲು

ಸಾಧ್ಯವಾಗದು. ಅವರನ್ನು ನಿರ್ಲಕ್ಷಿಸಿ ನಿಮ್ಮ

ದಾರಿಯಲ್ಲೇ ಮುಂದೆ ಸಾಗಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net