

ಮೇಷ: ಕೋಪಕ್ಕೆ ಆಸ್ಪದ ಕೊಡಬೇಡಿ, ಪ್ರಯತ್ನ ಹಾಕಿದರಷ್ಟೇ ಫಲ ಸಿಗುವುದು. ಬಂಧು ಮಿತ್ರರ ಸಹಕಾರ. ಶುಭ ಸಂಖ್ಯೆ 5
ವೃಷಭ: ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ವೃತ್ತಿಯಲ್ಲಿ ಒತ್ತಡ ಹೆಚ್ಚಿ ಇರಲಿದೆ. ಪಾಲುದಾರಿಕೆಯಲ್ಲಿ ನಷ್ಟ ಸಂಭವಿಸುತ್ತದೆ. ಶುಭ ಸಂಖ್ಯೆ 1.
ಮಿಥುನ: ವ್ಯವಹಾರದಲ್ಲಿ ಜಾಗ್ರತೆ ಇರಲಿ, ದಾಂಪತ್ಯದಲ್ಲಿ ಕಲಹ, ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ. ಶುಭ ಸಂಖ್ಯೆ 9
ಕಟಕ: ಆರ್ಥಿಕ ನಷ್ಟವಾಗುವ ಸಾಧ್ಯತೆ. ಪ್ರೇಮಿಗಳಿಗೆ ಶುಭವಾಗಿದ್ದು, ಹಿರಿಯರಿಗೆ ಬೇಸರವಾಗುವ ಸಾಧ್ಯತೆ ಇದೆ. ಶುಭ ಸಂಖ್ಯೆ 2
ಸಿಂಹ: ಆರ್ಥಿಕ ನಷ್ಟಗಳು ಸಂಭವಿಸುವ ಸಾಧ್ಯತೆ ಇದೆ. ಸಾಲದ ಚಿಂತೆ, ಪಾಲುದಾರಿಕೆಯಲ್ಲಿ ನಷ್ಟ ಸಂಭವಿಸುತ್ತದೆ. ಶುಭ ಸಂಖ್ಯೆ 7
ಕನ್ಯಾ: ತಾಳ್ಮೆ ಅಗತ್ಯ, ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ ಆಗಲಿದೆ. ಕೃಷಿ ಉಪಕರಣಗಳಿಗೆ ಬೇಡಿಕೆ. ಸಾಲ ಬಾಧೆ. ಶುಭ ಸಂಖ್ಯೆ 3
ತುಲಾ: ಮಿತ್ರರ ಭೇಟಿ ಸಾಧ್ಯತೆ, ದಾಂಪತ್ಯದಲ್ಲಿ ಕಲಹ, ಅಕಾಲ ಭೋಜನ. ಅನಾರೋಗ್ಯ ಭಾದಿಸುತ್ತದೆ. ಶುಭ ಸಂಖ್ಯೆ 6
ವೃಶ್ಚಿಕ: ಅಧಿಕಾರಸ್ಥ ಮಹಿಳೆಯರಿಗೆ ಕೆಲಸಗಾರರಿಂದ ತೊಂದರೆ. ಆದಾಯಕ್ಕಿಂತ ಖರ್ಚು ಜಾಸ್ತಿ ಕುಟುಂಬದಲ್ಲಿ ಪ್ರೀತಿ, ಪ್ರವಾಸದಿಂದ ದುಃಖ. ಶುಭ ಸಂಖ್ಯೆ 4
ಧನುಸ್ಸು: ವ್ಯಾಪಾರ ಹಾಗೂ ವ್ಯವಹಾರಗಳಲ್ಲಿ ನಷ್ಟ, ಶತ್ರುಗಳ ಭಯ ಕಾಡಲಿದೆ, ವಿದ್ಯಾರ್ಥಿಗಳಲ್ಲಿ ಆತಂಕ. ಶುಭ ಸಂಖ್ಯೆ 8
ಮಕರ: ನೂತನ ವಾಹನ ಖರೀದಿ ಯೋಜನೆ.ಮನಸ್ಸಿಗೆ ಚಿಂತೆ, ವಿವಾಹಕ್ಕೆ ಅಡಚಣೆ, ಸಾಲ ಮಾಡಬೇಕಾಗುವ ಸಾಧ್ಯತೆ. ಶುಭ ಸಂಖ್ಯೆ 3
ಕುಂಭ: ಕಚೇರಿಯಲ್ಲಿ ಮನಸ್ತಾಪ. ಸುಖ ಭೋಜನ ಮಾಡುವಿರಿ, ಅನಗತ್ಯವಾಗಿ ತಿರುಗಾಟ, ಕುಟುಂಬದಲ್ಲಿ ಸೌಖ್ಯ. ಶುಭ ಸಂಖ್ಯೆ 6
ಮೀನ: ಕ್ರೀಡಾಪಟುಗಳಿಗೆ ಶುಭ, ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ. ಉದ್ಯೋಗ ಕ್ಷೇತ್ರದವರಿಗೆ ಮುನ್ನಡೆ ಸಾಧ್ಯತೆ. ಶುಭ ಸಂಖ್ಯೆ 9