

ಮೇಷ: ಅವಸರದಲ್ಲಿ ಕೈಗೊಳ್ಳುವಂತಹ ತಪ್ಪುತಪ್ಪಾದ ನಿರ್ಧಾರಗಳಿಂದ ಧನಸಿದ್ಧಿ ಭಂಗವಾದೀತು. ತಾರ್ಕತೆಯಿಂದ ರಕ್ಷೆ ಸಿಗಲಿದೆ. ಶುಭಸಂಖ್ಯೆ: 5
ವೃಷಭ: ವ್ಯಾಪಾರ ವಹಿವಾಟುಗಳ ವಿಚಾರದಲ್ಲಿ ಹಿಂದಿನದೇ ತಪ್ಪುಗಳು ಮರುಕಳಿಸಬಹುದು, ಇಲ್ಲವಾದರೆ ಸಿದ್ಧಿ ಹೊಂದುವಿರಿ. ಶುಭಸಂಖ್ಯೆ: 8
ಮಿಥುನ: ಬಾಳಸಂಗಾತಿಯ ವಿಚಾರದಲ್ಲಿ ತುಸು ಮೃದು ಧೋರಣೆಯನ್ನು ತಳೆಯಿರಿ. ಮಾನಸಿಕ ಒತ್ತಡ ಬೇಗನೆ ಇಳಿಮುಖವಾಗಲಿದೆ. ಶುಭಸಂಖ್ಯೆ: 4
ಕಟಕ: ನೆರೆಹೊರೆಯವರ ನಡುವೆ ವಿಶೇಷ ಪ್ರಶಂಸೆ ಲಭ್ಯ. ಕೌಟುಂಬಿಕವಾಗಿಯೂ ಸಂತಸದ ವಾತಾವರಣ ತುಂಬಿರಲಿದೆ. ಶುಭಸಂಖ್ಯೆ: 6
ಸಿಂಹ: ಸಿಟ್ಟನ್ನು ನಿಗ್ರಹಿಸಬೇಕು ಎಂಬ ನಿರ್ಧಾರವೇನೂ ತಪ್ಪಲ್ಲ. ಆದರೆ ಹಿತಶತ್ರುಗಳ ಬಗೆಗೂ ಅದೇ ಅನುಕಂಪದ ಭಾವನೆ ಬೇಡ. ಶುಭಸಂಖ್ಯೆ: 1
ಕನ್ಯಾ: ಹಳೆಯ ವಿಚಾರಗಳ ಕುರಿತಾಗಿಯೇ ಆಲೋಚನೆ ಮಾಡುತ್ತ ವ್ಯರ್ಥವಾಗಿ ಕಾಲವನ್ನು ಕಳೆಯದಿರಿ. ಸಕಾರಾತ್ಮಕ ಚಿಂತನೆ ಉತ್ತಮ. ಶುಭಸಂಖ್ಯೆ: 3
ತುಲಾ: ಸಲಹೆ ಕೇಳಲು ಬಂದವರಿಗೆ ನಿರಾಶೆ ಮಾಡದಿರಿ. ಅವರಿಂದ ನಿಮಗೂ ಇನ್ನೊಂದು ರೀತಿಯಲ್ಲಿ ಪ್ರಯೋಜನವೇ ಉಂಟಾಗಲಿದೆ. ಶುಭಸಂಖ್ಯೆ: 9
ವೃಶ್ಚಿಕ: ರಾಜಕೀಯ ರಂಗದಲ್ಲಿ ಸಕ್ರಿಯವಾಗಿರುವವರಿಗೆ ಮಹತ್ವದ ಜವಾಬ್ದಾರಿ ಲಭಿಸುವ ಸಾಧ್ಯತೆ ಇದೆ. ಪಾರ್ವತಿದೇವಿಯನ್ನು ಧ್ಯಾನಿಸಿ. ಶುಭಸಂಖ್ಯೆ: 7
ಧನುಸ್ಸು: ಆರೋಗ್ಯದ ಬಗೆಗೆ ನಿಷ್ಕಾಳಜಿ ತೋರಬೇಡಿ. ಅಗತ್ಯ ಇದ್ದರೆ ಕೂಡಲೇ ತಜ್ಞ ವೈದ್ಯರನ್ನು ಸಂರ್ಪಸುವುದು ಯುಕ್ತ. ಶುಭಸಂಖ್ಯೆ: 2
ಮಕರ: ಮಕ್ಕಳು ಹೊಸ ಯೋಜನೆ ಇಷ್ಟಪಡಬಹುದು. ಮುಕ್ತವಾಗಿ ಚರ್ಚೆ ನಡೆಸಿಯೇ ಕಾರ್ಯರೂಪಕ್ಕೆ ತಂದರೆ ಒಳಿತುಂಟಾಗಲಿದೆ. ಶುಭಸಂಖ್ಯೆ: 5
ಕುಂಭ: ಸ್ನೇಹಿತರ ಬಳಿ ನಿಮ್ಮ ಕೆಲವು ಸಮಸ್ಯೆಗಳ ಬಗೆಗೆ ನಿರಾಳವಾಗಿ ರ್ಚಚಿಸಿದರೆ ಉತ್ತಮ. ಬಿಕ್ಕಟ್ಟು ಬೇಗ ಬಗೆಹರಿಯಲಿದೆ. ಶುಭಸಂಖ್ಯೆ: 8
ಮೀನ: ಅಪರೂಪದ ಹಿರಿಯರನ್ನು ಸಂಧಿಸುವಂತಹ ಅವಕಾಶ ಬಂದೊದಗಲಿದೆ. ಬಹು ಮಹತ್ವದ ವಿಷಯಕ್ಕೆ ಚಾಲನೆಯೂ ಲಭ್ಯ. ಶುಭಸಂಖ್ಯೆ: 4