ನಿತ್ಯಭವಿಷ್ಯ| ಈ ರಾಶಿಯವರು ಇಂದು ಬಹು ಮುಖ್ಯವಾದ ನಿರ್ಧಾರವೊಂದಕ್ಕೆ ಬರಲಿದ್ದಾರೆ..

Nitya-Bhavishya-vvani-1-2-1
Published on

ಮೇಷ: ಹಿತಶತ್ರುಗಳು ಪೀಡಿಸಬಹುದು. ಆದರೂ ಕೂಡ ಕೆಲಸವನ್ನು ನಿರ್ವಹಿಸುವಾಗ ಒತ್ತಡವನ್ನು ಶಮನಗೊಳಿಸಿಕೊಂಡರೆ ಯುಕ್ತ. ಶುಭಸಂಖ್ಯೆ: 9

ವೃಷಭ: ನಿಮ್ಮ ಚಲನವಲನಗಳನ್ನು ದಾಖಲಿಸುವಂಥ ಜನರಿದ್ದಾರೆ. ಬಹುಮಟ್ಟಿನ ಚಾತುರ್ಯದಿಂದಲೇ ಅಂತಹ ಜನರನ್ನು ನಿಭಾಯಿಸಿ. ಶುಭಸಂಖ್ಯೆ: 6

ಮಿಥುನ: ಅನಿರೀಕ್ಷಿತವಾಗಿ ಪ್ರವಾಸ ಗಂಟುಬಿದ್ದೀತು. ಬಂದ ಅವಕಾಶವನ್ನು ಬಿಡದೆ ಹೊಸದಾದ ಪಾಠಗಳನ್ನು ಕಲಿತುಕೊಳ್ಳಿ. ಶುಭಸಂಖ್ಯೆ: 1

ಕಟಕ: ಹಿರಿಯರೊಬ್ಬರ ಸಹಾಯದಿಂದಾಗಿ ನಿಮ್ಮ ಬಹು ಮುಖ್ಯ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸಿಕೊಳ್ಳಲಿದ್ದೀರಿ. ಶುಭಸಂಖ್ಯೆ: 7

ಸಿಂಹ: ಮನೆಗೆ ಬರುವ ಬಂಧುಗಳು ಹಿತವಾದ ಮಾತಾಡುತ್ತಾರೆ. ಸುಮ್ಮನೆ ಕೇಳಿಸಿಕೊಳ್ಳಿ. ಅನಿರೀಕ್ಷಿತ ಲಾಭವಾಗಲಿದೆ. ಶುಭಸಂಖ್ಯೆ: 4

ಕನ್ಯಾ: ವ್ಯಾಜ್ಯಗಳಿಂದ ನೊಂದುಕೊಂಡಿದ್ದೀರಿ. ರಾಜಿ ಮಾಡಿಕೊಳ್ಳುವ ಅವಕಾಶ ಬಂದರೆ ಮರುಮಾತಾಡದೆ ಒಪ್ಪಿಕೊಳ್ಳಿ. ಶುಭಸಂಖ್ಯೆ: 2

ತುಲಾ: ಪದೇ ಪದೆ ತಪ್ಪು ಮಾಡುವ ಸಹೋದ್ಯೋಗಿಗಳ ಮೇಲೆ ಅನುಕಂಪ ಇರಲಿ. ತಿದ್ದಿ ಹೇಳುವ ಮೂಲಕವೇ ಕೆಲಸ ಮಾಡಿಸಿ. ಶುಭಸಂಖ್ಯೆ: 8

ವೃಶ್ಚಿಕ: ದೊಡ್ಡ ಜವಾಬ್ದಾರಿ ನಿಮ್ಮ ಮೇಲೆ ಇರುವುದರಿಂದ ಸ್ವಲ್ಪಮಟ್ಟಿಗೆ ಬಳಲಿಕೆಯಾದೀತು. ನಿಮ್ಮದಲ್ಲದ ಕೆಲಸ ಮಾಡುವುದನ್ನು ಬಿಡಿ. ಶುಭಸಂಖ್ಯೆ: 5

ಧನುಸ್ಸು: ಸಿಟ್ಟಿನ ಮಾತಾಡುವ ಪ್ರಸಂಗ ಬರಬಹುದು. ಕುಟುಂಬದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿ. ತಾಳ್ಮೆಯಿಂದ ಗೆಲುವು ಸಿಗಲಿದೆ. ಶುಭಸಂಖ್ಯೆ: 3

ಮಕರ: ಪ್ರತಿದಿನವೂ ಸೋಲುಗಳೇ ಎದುರಾಗುತ್ತಿವೆ ಎಂದುಕೊಳ್ಳುತ್ತಿದ್ದೀರಿ. ಮಕ್ಕಳಿಂದ ಶುಭಕರ ಸಮಾಚಾರ ಕೇಳಿಬರಲಿದೆ. ಶುಭಸಂಖ್ಯೆ: 9

ಕುಂಭ: ಬಹು ಮುಖ್ಯವಾದ ನಿರ್ಧಾರವೊಂದಕ್ಕೆ ಬರಲು ಅವಕಾಶ ಒದಗಲಿದೆ. ಆದರೆ ದೂರಾಲೋಚನೆ ಕೂಡ ಇದ್ದರೆ ಒಳಿತಾಗಲಿದೆ. ಶುಭಸಂಖ್ಯೆ: 6

ಮೀನ: ಬೇರೆ ಬೇರೆ ಸ್ವಭಾವದ ಜನರು ನಿಮ್ಮನ್ನು ಭೇಟಿಯಾಗಲಿದ್ದಾರೆ. ಅವರೆಲ್ಲರ ಜತೆಗೂ ತಾಳ್ಮೆಯಿಂದಲೇ ಮಾತಾಡಿಸಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net