

ಮೇಷ: ವಿನಾಕಾರಣ ಜನರು ಜಗಳ ತೆಗೆಯಲು ಶುರು ಹಚ್ಚಿದರೆ ಹೆಚ್ಚಿನ ವಾಗ್ವಾದ ಬೇಡ. ಮೌನವೇ ಉತ್ತಮ. ಶುಭಸಂಖ್ಯೆ: 8
ವೃಷಭ: ಹಳೆಯ ಕಡತವೊಂದನ್ನು ಅಪಹರಿಸಲು ಪ್ರಯತ್ನ ನಡೆಯಬಹುದು. ಎಚ್ಚರಿಕೆಯಲ್ಲಿ ಇರುವುದೇ ಸೂಕ್ತ. ಶುಭಸಂಖ್ಯೆ: 5
ಮಿಥುನ: ದೂರದ ಊರಿಗಾಗಿನ ಪ್ರಯಾಣ ಗಂಟುಬೀಳಬಹುದು. ಸೂಕ್ತ ಕಾರಣ ಮುಂದಿಟ್ಟು ಪ್ರಯಾಣ ಮುಂದೂಡಿ. ಶುಭಸಂಖ್ಯೆ: 2
ಕಟಕ: ಗೆಳೆಯರಿಂದ ಬೆಂಬಲ ಸಿಗಲು ಅವಕಾಶ ಇದೆಯಾದರೂ, ಎಲ್ಲರೊಡನೆ ಸಲುಗೆಯಿಂದಿರುವುದು ಬೇಡ. ಶುಭಸಂಖ್ಯೆ: 7
ಸಿಂಹ: ಕಚೇರಿಯಲ್ಲಿ ಕೈಕೆಳಗಿನವರಿಂದ ತೊಂದರೆ ಎದುರಿಸಬೇಕಾದೀದು. ಆದರೆ ಮುಖ ಗಂಟಿಕ್ಕಿಕೊಂಡು ಇರಬೇಡಿ. ಶುಭಸಂಖ್ಯೆ: 3
ಕನ್ಯಾ: ವಿರೋಧಿಗಳು ನಿಮ್ಮ ಪ್ರಭಾವವನ್ನು ತಗ್ಗಿಸಲು ಪ್ರಯತ್ನ ಮಾಡಿದಷ್ಟೂ, ನಿಮ್ಮ ಪ್ರಭಾವವು ಇಮ್ಮಡಿಗೊಳ್ಳಲಿದೆ. ಶುಭಸಂಖ್ಯೆ: 6
ತುಲಾ: ಬರುವ ಉತ್ತಮ ಅವಕಾಶಗಳನ್ನು ಕಸಿಯಲು ಜನ ಪ್ರಯತ್ನಿಸುತ್ತಾರೆ. ಒಳ್ಳೆಯವರನ್ನು ಸರಿಯಾಗಿ ಗುರುತಿಸಿ. ಶುಭಸಂಖ್ಯೆ: 9
ವೃಶ್ಚಿಕ: ಸಂತೋಷಪಡುವ ಕಾರ್ಯಕ್ರಮವೊಂದು ದಿಢೀರಾಗಿ ನಿಶ್ಚಯವಾಗುವ ಅನಿರೀಕ್ಷಿತ ಸಾಧ್ಯತೆಗಳು ಜಾಸ್ತಿ ಇವೆ. ಶುಭಸಂಖ್ಯೆ: 1
ಧನಸ್ಸು: ಮಕ್ಕಳನ್ನು ಉತ್ತೇಜಿಸಿ. ನಿಮ್ಮ ಕನಸನ್ನು ನನಸು ಮಾಡಲು ಮಕ್ಕಳೂ ಸಹಾಯಕ್ಕೆ ಬರುವ ಪವಾಡ ಜರುಗಲಿದೆ. ಶುಭಸಂಖ್ಯೆ: 2
ಮಕರ: ಹಿರಿಯರಿಂದ ಕುಟುಂಬದ ಒಳಜಗಳ ನಿಯಂತ್ರಣಕ್ಕೆ ಬಂದು ಹೊಸದೇ ಹೊಂದಾಣಿಕೆ ಮೂಡಿಬರಲು ಸಾಧ್ಯ. ಶುಭಸಂಖ್ಯೆ: 9
ಕುಂಭ: ಹಳೆಯ ವಸ್ತುವೊಂದನ್ನು ಹುಡುಕಾಡುತ್ತ ಇದ್ದೀರಿ. ಶ್ರೀನಿವಾಸನನ್ನು ಸ್ತುತಿಸಿ. ಕಳೆದ ವಸ್ತು ಮರಳಿ ಸಿಗಲಿದೆ. ಶುಭಸಂಖ್ಯೆ: 4
ಮೀನ: ಹೊಸ ಸಂಸ್ಥೆಯನ್ನು ಹುಟ್ಟುಹಾಕುವ ಅಪರೂಪದ ಕಾರ್ಯದಲ್ಲಿ ಗೆಲುವು ಸಾಧಿಸಲು ಅವಕಾಶವಿದೆ. ಶುಭಸಂಖ್ಯೆ: 8