ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಆರ್ಥಿಕ ಕಷ್ಟ ಪರಿಹಾರವಾಗಲಿದೆ

Nitya-Bhavishya-vvani-1-2-1-1
Published on

ಮೇಷ: ಮಾತುಗಳನ್ನು ನಿಯಂತ್ರಿಸುವುದು ಕ್ಷೇಮ. ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ. ಕೂಲಿ ಕಾರ್ಮಿಕರಿಗೆ ಶುಭ. ಶುಭಸಂಖ್ಯೆ: 4

ವೃಷಭ: ವೃತ್ತಿಯಲ್ಲಿ ಪ್ರಗತಿ. ವಿವಾಹದಲ್ಲಿ ಅಡೆತಡೆ ಉಂಟಾಗಿ ಗೊಂದಲದ ಸ್ಥಿತಿ. ಕಲಾವಿದರಿಗೆ ಸಮಾಜದಲ್ಲಿ ಗೌರವ, ಪುರಸ್ಕಾರ. ಶುಭಸಂಖ್ಯೆ:3

ಮಿಥುನ: ಚಲನಚಿತ್ರನಿರ್ಮಾಪಕರಿಗೆ ಲಾಭ. ಕೆಲಸಕ್ಕೆ ಪೋಷಕರ ಬೆಂಬಲವಿರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಶುಭ. ಶುಭಸಂಖ್ಯೆ: 7

ಕಟಕ: ಆರೋಗ್ಯದಲ್ಲಿ ಹಿನ್ನಡೆ, ವೈದ್ಯರನ್ನು ಸಂಪರ್ಕಿಸಿ. ನಿರ್ಧಾರಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಕಠಿಣ ಪರಿಶ್ರಮದ ಅವಶ್ಯಕತೆಯಿದೆ. ಶುಭಸಂಖ್ಯೆ: 4

ಸಿಂಹ: ವಿರೋಧಿಗಳಿಂದ ಕೆಲಸಗಳಲ್ಲಿ ಅಡೆತಡೆ. ಆರೋಗ್ಯವು ಸಹಜವಾಗಿರುತ್ತದೆ. ಜನಸೇವೆಯ ಕೆಲಸಗಳಿಗೆ ಪ್ರೋತ್ಸಾಹ ಸಿಗುತ್ತದೆ. ಶುಭಸಂಖ್ಯೆ: 6

ಕನ್ಯಾ: ಅನಗತ್ಯ ವಾದಗಳನ್ನು ತಪ್ಪಿಸಿ. ಆದಾಯದಲ್ಲಿ ಏರುಪೇರು. ಲೇವಾದೇವಿ ವ್ಯವಹಾರದಲ್ಲಿ ಲಾಭ. ಸಮಸ್ಯೆ ಪರಿಹರಿಸಿಕೊಳ್ಳಿ. ಶುಭಸಂಖ್ಯೆ: 9

ತುಲಾ: ಪ್ರಭಾವಿ ವ್ಯಕ್ತಿಯ ಸಹಕಾರ ದೊರೆಯುವುದು. ಸಮಾಜದಲ್ಲಿ ಮನ್ನಣೆ ಸಿಗುತ್ತದೆ. ಆತ್ಮೀಯರಿಂದ ಸಂತಸದ ಸುದ್ದಿ ಬರುವುದು. ಶುಭಸಂಖ್ಯೆ: 8

ವೃಶ್ಚಿಕ: ವಾಹನ ಅಪಘಾತದ ಸಂಭವವಿದೆ, ಎಚ್ಚರದಿಂದಿರಿ. ವಿಡಿಯೋಗ್ರಾಫರ್​ಗಳಿಗೆ ಪರ್ವಕಾಲ. ಬರಹಗಾರರಿಗೆ ಸನ್ಮಾನ ಲಭ್ಯ. ಶುಭಸಂಖ್ಯೆ: 7

ಧನುಸ್ಸು: ಭೂವಿವಾದಗಳು ಪೂರ್ಣಗೊಂಡು ಮಾನಸಿಕ ನೆಮ್ಮದಿ. ತೀರ್ಥಯಾತ್ರೆಯ ಯೋಗ. ಪರೀಕ್ಷಾ ಸ್ಪರ್ಧಿಗಳಿಗೆ ಯಶಸ್ಸು. ಶುಭಸಂಖ್ಯೆ: 3

ಮಕರ: ಭೂ ವ್ಯವಹಾರದಲ್ಲಿ ಆದಾಯವಿದೆ. ಕೃಷಿಪರಿಕರಗಳ ವ್ಯಾಪಾರಸ್ಥರಿಗೆ ಲಾಭವಾಗಲಿದೆ. ಹೈನುಗಾರಿಕೆಯಲ್ಲಿ ಹಿನ್ನಡೆ ಆಗಬಹುದು. ಶುಭಸಂಖ್ಯೆ: 5

ಕುಂಭ: ಕೆಲಸಗಳಲ್ಲಿ ಅನಗತ್ಯ ವಿಳಂಬ. ಅನಿಲ ವ್ಯಾಪಾರಸ್ಥರಿಗೆ ಲಾಭ. ಹಳೆಯ ಸಾಲ ಮರುಪಾವತಿಯಾಗಿ ಆರ್ಥಿಕ ಕಷ್ಟ ಪರಿಹಾರ. ಶುಭಸಂಖ್ಯೆ: 1

ಮೀನ: ಕಚೇರಿ ಕೆಲಸಗಳಿಂದ ಒತ್ತಡ. ಸರ್ಕಾರಿ ನೌಕರರಿಗೆ ಶುಭದಾಯಕ ದಿನ. ರಿಯಲ್​ ಎಸ್ಟೇಟ್​ ವ್ಯವಹಾರದಲ್ಲಿ ಲಾಭವಾಗುವುದು. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net