ಈ ರಾಶಿಯವರಿಗಿಂದು ಪುಣ್ಯ ಕ್ಷೇತ್ರಗಳಿಗೆ ಪ್ರಯಾಣ ಸಾಧ್ಯತೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸರ್ಕಾರಿ ಕೆಲಸದಲ್ಲಿ ಯಶ. ಸ್ತಿರಾಸ್ಥಿ ನೋಂದಣಿಗೆ ಸುದಿನ. ಮೇಲಧಿಕಾರಿಗಳಿಂದ ಸಹಾಯ. ರಾಜಕೀಯದವರಿಂದ ಸಹಕಾರ. ಶುಭಸಂಖ್ಯೆ: 9

ವೃಷಭ: ಪಿತ್ರಾರ್ಜಿತ ಆಸ್ತಿ ತಗಾದೆಯಾದರೂ ನಿಮಗೆ ಅನುಕೂಲ. ಸ್ವಯಂಕೃತ ಅಪರಾಧಗಳಿಂದ ಕಿರಿಕಿರಿ. ಸಾಲದ ಸುಳಿಗೆ ಸಿಲುಕುವಿರಿ. ಶುಭಸಂಖ್ಯೆ: 2

ಮಿಥುನ: ಕಚೇರಿ ಬದಲಾವಣೆ, ಪತ್ರ ವ್ಯವಹಾರಕ್ಕೆ ಖರ್ಚು. ಅಧಿಕ ಧನವ್ಯಯ. ಅಧಿಕಾರಿಗಳಿಂದ ಕಚೇರಿ ಕೆಲಸದಲ್ಲಿ ಮಾರ್ಗದರ್ಶನ. ಶುಭಸಂಖ್ಯೆ:7

ಕಟಕ: ಕೃಷಿಕರಿಗೆ ಅಧಿಕವಾದ ಲಾಭ. ಸಾಲಗಾರರಿಂದ ಮುಕ್ತಿ ಸಾಧ್ಯತೆ. ಅಹಂಭಾವದ ಮಾತಿನಿಂದ ತೊಂದರೆ. ಮಿತ್ರರಿಂದ ಸಹಾಯ. ಶುಭಸಂಖ್ಯೆ: 3

ಸಿಂಹ: ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ. ಆರೋಗ್ಯದಲ್ಲಿ ವ್ಯತ್ಯಾಸ. ಖರ್ಚು. ಬಟ್ಟೆ , ಕಾಂಡಿಮೆಂಟ್ಸ್ ವ್ಯಾಪಾರಿಗಳಿಗೆ ಅಧಿಕ ಲಾಭ. ಶುಭಸಂಖ್ಯೆ: 7

ಕನ್ಯಾ: ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಉದ್ಯಮದಲ್ಲಿ ಸಂಕಷ್ಟ ಎದುರಾಗುವುದು.ವ್ಯವಹಾರದಲ್ಲಿ ನಷ್ಟ, ಮನಸ್ಸಿನಲ್ಲಿ ಅಶಾಂತಿ. ಶುಭಸಂಖ್ಯೆ:1

ತುಲಾ: ಆಕಸ್ಮಿಕವಾಗಿ ಉದ್ಯೊಗದಲ್ಲಿ ತೊಂದರೆ. ಉದ್ಯೋಗ ಬದಲಾವಣೆಗೆ ಮನಸ್ಸು. ಸಾಲಗಾರರಿಂದ ಗೌರವಕ್ಕೆ ಧಕ್ಕೆ. ಆಕಸ್ಮಿಕ ಅದೃಷ್ಟ. ಶುಭಸಂಖ್ಯೆ: 6

ವೃಶ್ಚಿಕ: ರಾಜಕೀಯದವರಿಂದ ಅನುಕೂಲ. ಮಿತ್ರರೊಂದಿಗೆ ಕಾಲಹರಣ. ಭೂಸಂಬಂಧಿ ಕೆಲಸದಲ್ಲಿ ಅಡ್ಡಿ. ವ್ಯಾಪಾರದಲ್ಲಿ ಅನುಕೂಲ. ಶುಭಸಂಖ್ಯೆ:9

ಧನುಸ್ಸು: ಮೇಲಧಿಕಾರಿಗಳ ಭೇಟಿ. ರಾಜಕೀಯ ವ್ಯಕ್ತಿಗಳ ಸಂಪರ್ಕ. ಹಿತಶತ್ರುಗಳಿಂದ ತೊಂದರೆ. ಪುಣ್ಯ ಕ್ಷೇತ್ರಗಳಿಗೆ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ:5

ಮಕರ: ವಿವಾಹಯತ್ನಕ್ಕೆ ಹಿತಶತ್ರುಗಳಿಂದ ತೊಂದರೆ. ಪೊಲೀಸ್ ಸ್ಟೇಷನ್​ಗೆ ಅಲೆದಾಟ. ಸಿನಿಮಾ ರಂಗದ ವ್ಯಕ್ತಿಗಳ ಸಹಾಯ ಕೇಳುವಿರಿ. ಶುಭಸಂಖ್ಯೆ: 7

ಕುಂಭ: ಹೊಸವಾಹನ ಖರೀದಿ. ಅಮೂಲ್ಯ ವಸ್ತು ಕಳವು, ಬಂಧುಗಳಿಂದ ಕಿರಿಕಿರಿ. ಸಗಟು ವ್ಯಾಪಾರಿಗಳಿಗೆ ಕೆಲಸಗಾರರಿಂದ ತೊಂದರೆ. ಶುಭಸಂಖ್ಯೆ:3

ಮೀನ: ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ. ಕೃಷಿಭೂಮಿ ಖರೀದಿ. ಆರೋಗ್ಯದಲ್ಲಿ ವ್ಯತ್ಯಯ. ನ್ಯಾಯಾಲಯದ ಕಾರ್ಯದಲ್ಲಿ ಜಯ. ಶುಭಸಂಖ್ಯೆ:7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net