

ಮೇಷ: ಮಕ್ಕಳ ಮೂಲಕ ಸಂತೋಷಕರವಾದ ಸಮಾಚಾರ ಕೇಳುವಿರಿ. ನಿಮ್ಮ ಸದಿಚ್ಛೆಗಳಿಗೆ ನಿಶ್ಚಿತವಾಗಿ ಯಶಸ್ಸು ಲಭ್ಯ. ಶುಭಸಂಖ್ಯೆ: 5
ವೃಷಭ: ಬಾಳಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಸದ್ಯ ನಿಮ್ಮ ಇಷ್ಟದ ವಿರುದ್ಧವಾದುದು ಏನೂ ಸಂಭವಿಸಲಾರದು. ಶುಭಸಂಖ್ಯೆ: 9
ಮಿಥುನ: ಅನೇಕ ಸಮಸ್ಯೆಗಳನ್ನು ಎದುರಿಸುವ ಸಂದರ್ಭ ಬರಲಿದೆ. ಮಹಾವಿಷ್ಣುವಿನ ಸ್ತುತಿಯಿಂದ ಕಷ್ಟಗಳು ದೂರವಾಗಲಿವೆ. ಶುಭಸಂಖ್ಯೆ: 1
ಕಟಕ: ಮನೆಯ ಸದಸ್ಯರೊಡನೆ ಬೆರೆತು ವಾತ್ಸಲ್ಯದ ಮಾತುಗಳನ್ನೇ ಆಡಿ. ನಿಮ್ಮ ಸಂಕಟಮಯ ಕ್ಷಣಗಳಿಗೆ ಪರಿಹಾರ ಸಿಗಲಿದೆ. ಶುಭಸಂಖ್ಯೆ: 6
ಸಿಂಹ: ಆರೋಗ್ಯದ ಸಮಸ್ಯೆಯನ್ನು ಅಲಕ್ಷಿಸಬೇಡಿ. ಸರಿಯಾದ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಿ. ಆತ್ಮವಿಶ್ವಾಸ ಕಳೆದುಕೊಳ್ಳದಿರಿ. ಶುಭಸಂಖ್ಯೆ: 2
ಕನ್ಯಾ: ನಿರೀಕ್ಷೆಗೂ ಮೀರಿದಂತಹ ಖರ್ಚುಗಳು ಸಂಭವಿಸಬಹುದು. ಮನೆಯ ಎಲ್ಲರನ್ನೂ ಶಾಂತವಾಗಿಯೇ ನಿಭಾಯಿಸಿ. ಶುಭಸಂಖ್ಯೆ: 8
ತುಲಾ: ಕೃಪಾನಿಧಿ ಶ್ರೀ ಗುರುದತ್ತನ ಆರಾಧನೆಯಿಂದ ಮನಸ್ಸಿನ ಹಲವಾರು ಚಿಂತೆಗಳು ಬಹಳ ಬೇಗನೆ ದೂರವಾಗಲಿವೆ. ಶುಭಸಂಖ್ಯೆ: 4
ವೃಶ್ಚಿಕ: ಕಚೇರಿಯಲ್ಲಿ ಅನೇಕ ದುಷ್ಟರು ಬಿಕ್ಕಟ್ಟು ನಿರ್ವಿುಸುತ್ತಾರೆ. ಪ್ರತಿಕ್ರಿಯಿಸದೆ ಸುಮ್ಮನಿದ್ದರೆ ಸಂಕಟ ದೂರವಾಗಲಿದೆ. ಶುಭಸಂಖ್ಯೆ: 7
ಧನಸ್ಸು: ಯಾರದೋ ವಿಚಾರದಲ್ಲಿ ಸಹಾಯಕ್ಕಾಗಿ ಕೂಡಲೇ ಮುಂದುವರಿಯಬೇಡಿ. ವೃಥಾ ತೊಂದರೆ ಎದುರಾದೀತು. ಶುಭಸಂಖ್ಯೆ: 3
ಮಕರ: ಅನೇಕ ಬಗೆಯ ಸಮಸ್ಯೆಗಳು ನಿಮ್ಮನ್ನು ಸುತ್ತುವರಿಯಬಹುದು. ಸ್ನೇಹಿತರ ನೆರವಿನಿಂದ ಕಷ್ಟಗಳು ನಿವಾರಣೆಯಾಗಲಿವೆ. ಶುಭಸಂಖ್ಯೆ: 5
ಕುಂಭ: ಹಲವು ದಿನಗಳ ಕನಸುಗಳನ್ನು ನನಸು ಮಾಡಿಕೊಳ್ಳಲು ವಿಪುಲ ಅವಕಾಶಗಳಿವೆ. ಚಿಂತಿಸದೆಯೇ ನಿರಾಳವಾಗಿರಿ. ಶುಭಸಂಖ್ಯೆ: 9
ಮೀನ: ಪ್ರತಿನಿತ್ಯ ಗೆಲುವಿನ ಏಣಿಯೇ ಸಿಗಲಾರದು. ಕಾಲಭೈರವನ ಸ್ಮರಣೆಯಿಂದ ಅಪಜಯವನ್ನು ಶೀಘ್ರವಾಗಿ ಹಿಮ್ಮೆಟ್ಟಿಸಲಿದ್ದೀರಿ. ಶುಭಸಂಖ್ಯೆ: 1