ಈ ರಾಶಿಯವರು ಬಾಳಸಂಗಾತಿಗೆ ಸಂಬಂಧಿಸಿದ ಆಸ್ತಿ ವಿಚಾರಕ್ಕೆ ತಲೆಹಾಕದಿರುವುದೇ ಒಳಿತು

Nitya-Bhavishya-vvani-1-2
Published on

ಮೇಷ: ಆಡಳಿತಾತ್ಮಕ ವಿಚಾರಗಳಲ್ಲಿ ಅಗತ್ಯವಾದ

ಪರೀಕ್ಷೆಗಳಿದ್ದರೆ ಪಾಲ್ಗೊಳ್ಳಿ. ಗೆಲುವಿನೆಡೆಗಿನ

ದಾರಿಯೊಂದು ಸಿಗಲಿದೆ. ಶುಭಸಂಖ್ಯೆ: 2

ವೃಷಭ: ದೂರದ ಪ್ರವಾಸವನ್ನು ಅಚ್ಚುಕಟ್ಟಾಗಿ

ಆಯೋಜಿಸಿಕೊಳ್ಳುವಿರಿ. ಇದರಿಂದ

ದೊಡ್ಡ ಚಿಂತೆ ನೀಗಲಿದೆ. ಶುಭಸಂಖ್ಯೆ: 4

ಮಿಥುನ: ಮನೆಯ ನವೀಕರಣದ ಬಗ್ಗೆ ಚಿಂತನೆ

ನಡೆಸುತ್ತಿದ್ದೀರಿ. ಆ ಕುರಿತ ಬೆಳವಣಿಗೆ

ಸಂತಸವನ್ನು ತರಲಿದೆ. ಶುಭಸಂಖ್ಯೆ: 6

ಕಟಕ: ಆಹಾರೋದ್ಯಮ, ಕೃಷಿ, ಮರಮಟ್ಟು

ವ್ಯಾಪಾರ ಇತ್ಯಾದಿಗಳಲ್ಲಿನ ನಿಮ್ಮ ಅನುಭವ

ಲಾಭವನ್ನೇ ಒದಗಿಸಲಿವೆ. ಶುಭಸಂಖ್ಯೆ: 8

ಸಿಂಹ: ವಿದೇಶಗಳಿಗೆ ಪ್ರವಾಸ ಮಾಡಬೇಕಾದ

ಅನಿರೀಕ್ಷಿತ ಪ್ರಸ್ತಾಪವನ್ನು ಸ್ವೀಕರಿಸಲಿದ್ದೀರಿ.

ತರ್ಕಿಸಿಯೇ ತೀರ್ಮಾನಿಸಿ. ಶುಭಸಂಖ್ಯೆ: 6

ಕನ್ಯಾ: ಮಿತ್ರರೇ ನಿಮ್ಮ ಪಾಲಿಗೆ ದೊಡ್ಡ ಆಸ್ತಿ.

ಅವರ ಕುರಿತು ಇರುವಂತಹ ನಿಮ್ಮ

ನಿರ್ಲಕ್ಷ್ಯದ ಧೋರಣೆ ಬಿಡಿ. ಶುಭಸಂಖ್ಯೆ: 1

ತುಲಾ: ಬೆಂಕಿ ಅಥವಾ ಕಳ್ಳತನದ ಅಪಾಯ

ಎದುರಾಗುವ ಸಾಧ್ಯತೆ. ಆಲಸ್ಯ ಮಾಡದೆ

ತಕ್ಕ ಮುನ್ನೆಚ್ಚರಿಕೆ ಕೈಗೊಳ್ಳಿ. ಶುಭಸಂಖ್ಯೆ: 4

ವೃಶ್ಚಿಕ: ಯಶಸ್ಸಿನ ಈ ಘಟ್ಟದಲ್ಲಿ ಧನಸಂಪಾದನೆಯ

ಕುರಿತಾಗಿ ವಿವಿಧ ವಿಧದ ಯೋಜನೆಗಳನ್ನು

ನಿರ್ವಿುಸಿಕೊಂಡರೆ ಶುಭ. ಶುಭಸಂಖ್ಯೆ: 1

ಧನುಸ್ಸು: ಗಣಿಗಾರಿಕೆ, ಹೈನೋದ್ಯಮದಂಥ ವೃತ್ತಿಗಳಲ್ಲಿ

ಅನುಭವ ಅಥವಾ ಮಾರ್ಗದರ್ಶನ

ಇರದೆ ಹೆಜ್ಜೆ ಇಡಬೇಡಿ. ಶುಭಸಂಖ್ಯೆ: 9

ಮಕರ: ಆರ್ಥಿಕ ವ್ಯವಹಾರ ತಜ್ಞರು, ಪತ್ರಿಕಾ

ರಂಗದವರು ಹೆಚ್ಚಿನ ಚಾತುರ್ಯ ತೋರಿಸುವ

ಕಾರಣದಿಂದ ಗೌರವ ಲಭ್ಯ. ಶುಭಸಂಖ್ಯೆ: 7

ಕುಂಭ: ಸಂಗೀತ, ನೃತ್ಯಾದಿ ಲಲಿತಕಲೆಗಳಲ್ಲಿ ಆಸಕ್ತಿ

ಇರುವವರು ಹೆಚ್ಚಿನ ಮನ್ನಣೆ ಸಂಪಾದಿಸಲು

ಅವಕಾಶ ಕೂಡಿಬರಲಿದೆ. ಶುಭಸಂಖ್ಯೆ: 5

ಮೀನ: ಬಾಳಸಂಗಾತಿಗೆ ಸಂಬಂಧಿಸಿದ ಆಸ್ತಿಯ

ವಿಚಾರದಲ್ಲಿ ನೀವು ನಿರ್ಧಾರ ಕೈಗೊಳ್ಳದೆ

ಅವರಿಗೇ ಬಿಟ್ಟರೆ ಕ್ಷೇಮ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net