ಈ ರಾಶಿಯವರಿಗಿಂದು ಉತ್ತಮ ಬಾಂಧವ್ಯ, ದಂಪತಿಗಳ ಸಂಬಂಧಿಕರಿಂದ ಅನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆರ್ಥಿಕ ಪ್ರಗತಿಯಾಗಲಿದೆ. ಅನ್ಯರ ವಿಚಾರಗಳಿಂದ ದೂರವಿರುವುದು ಒಳ್ಳೆಯದು. ಉದ್ಯೋಗದಲ್ಲಿ ಸಂತೋಷದಾಯಕ ದಿನ. ಶುಭಸಂಖ್ಯೆ: 9

ವೃಷಭ: ಖಾಸಗಿ ವಿಚಾರಗಳನ್ನು ಹಂಚಿಕೊಳ್ಳುವುದು ಬೇಡ. ಕೆಲಸಗಾರರ ಬಗ್ಗೆ ಜಾಗ್ರತೆ ಅಗತ್ಯ. ಮಕ್ಕಳ ವಿಚಾರದಲ್ಲಿ ಗೊಂದಲ. ಶುಭಸಂಖ್ಯೆ: 5

ಮಿಥುನ: ಬಂಧು -ಬಾಂಧವರಿಂದ ಅನುಕೂಲ. ದೂರ ಪ್ರಯಾಣ. ಬೆನ್ನು ನೋವು. ಮಕ್ಕಳಿಂದ ಶುಭವಾರ್ತೆ, ವಿದೇಶಯಾನಕ್ಕೆ ಅಡೆತಡೆ. ಶುಭಸಂಖ್ಯೆ: 2

ಕಟಕ: ಆರ್ಥಿಕ ವಲಯದಲ್ಲಿ ಪ್ರಗತಿ. ಜೀವನಕ್ಕೆ ಅನುಕೂಲ. ಕಳ್ಳರ ಬಗ್ಗೆ ಜಾಗ್ರತೆ. ಮನಸ್ಸಿಗೆ ಅಶಾಂತಿ. ಹಿತ ಶತ್ರುಗಳಿಂದ ದೂರವಿರಿ. ಶುಭಸಂಖ್ಯೆ: 7

ಸಿಂಹ: ಕಾರ್ಯಗಳಲ್ಲಿ ವಿಘ್ನ. ಇಲ್ಲ ಸಲ್ಲದ ಅಪವಾದ ಬರುವುದು. ರಾಜಕೀಯ ವ್ಯಕ್ತಿಗಳಿಗೆ ಅಪಮಾನ ವಾದೀತು. ಮನಸ್ಸಿಗೆ ಕಿರಿಕಿರಿ. ಶುಭಸಂಖ್ಯೆ: 2

ಕನ್ಯಾ: ಹೆಣ್ಣು ಮಕ್ಕಳಿಗೆ ಅನನುಕೂಲ. ವ್ಯಾಪಾರದಲ್ಲಿ ನಷ್ಟ ಸಾಧ್ಯತೆ. ಬಂಧುಗಳಲ್ಲಿ ಅಸಮಾಧಾನ. ವಿದ್ಯಾರ್ಥಿಗಳಿಗೆ ತೊಂದರೆ. ಶುಭಸಂಖ್ಯೆ: 4

ತುಲಾ: ವ್ಯಾಪಾರದಲ್ಲಿ ನೆಮ್ಮದಿ. ಸ್ಥಿರಾಸ್ತಿ ಯಿಂದ ಲಾಭ. ರೈತರಿಗೆ ಅನುಕೂಲ. ರಾಜಕೀಯದವರಿಗೆ ಮುನ್ನಡೆ. ವಿದ್ಯಾರ್ಥಿಗಳಿಗೆ ಜಯ. ಶುಭಸಂಖ್ಯೆ: 9

ವೃಶ್ಚಿಕ: ಕಾರ್ಯದಲ್ಲಿ ಅಸಮಾಧಾನ. ಹಣಕಾಸು ಬಿಕ್ಕಟ್ಟು. ಮೇಲಧಿಕಾರಿಗಳಿಂದ ಕಿರುಕುಳ. ಪತ್ರಿಕಾ ರಂಗದಲ್ಲಿರುವವರಿಗೆ ಅಸಮಾಧಾನ. ಶುಭಸಂಖ್ಯೆ: 1

ಧನುಸ್ಸು: ಮಾನಸಿಕ ಕಿರಿಕಿರಿ. ಆರೋಗ್ಯದದಲ್ಲಿ ಏರುಪೇರು. ಕೃಷಿಕ ವಲಯದಲ್ಲಿ ಲಾಭ ಕಡಿಮೆ. ಹೆಣ್ಣು ಮಕ್ಕಳ ವಿಚಾರದಲ್ಲಿ ಜಾಗ್ರತೆ. ಶುಭಸಂಖ್ಯೆ: 6

ಮಕರ: ಕಬ್ಬಿಣ ವ್ಯಾಪಾರದಲ್ಲಿ ನಷ್ಟ. ಚಾಲಕರಿಗೆ ಅನನುಕೂಲ. ದಂಡ ಕಟ್ಟುವ ಸಾಧ್ಯತೆ. ಸರ್ಕಾರಿ ನೌಕರರಿಗೆ ವಿಪರೀತ ಒತ್ತಡದ ದಿನ. ಶುಭಸಂಖ್ಯೆ: 4

ಕುಂಭ: ಹೆಣ್ಣು ಮಕ್ಕಳಿಗೆ ಅನುಕೂಲ. ಮಾನಸಿಕ ಕಿರಿಕಿರಿ ದೂರಾಗಲಿದೆ. ಗೃಹ ಕೈಗಾರಿಕೆಯಿಂದ ಲಾಭ. ದೂರ ಪ್ರಯಾಣ ಮಾಡುವಿರಿ. ಶುಭಸಂಖ್ಯೆ: 9

ಮೀನ: ಉತ್ತಮ ಬಾಂಧವ್ಯ. ದಂಪತಿಗಳ ಸಂಬಂಧಿಕರಿಂದ ಅನುಕೂಲ. ಗಂಡು ಮಕ್ಕಳಿಂದ ಶುಭ. ಕೈಗಾರಿಕಾ ರಂಗದಲ್ಲಿ ಅನುಕೂಲ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net